ಬಂಟ್ವಾಳ : ಮಾದಕದ್ರವ್ಯ ಸೇವಿಸುತ್ತಿದ್ದ ಯುವಕರ ತಂಡವೊಂದನ್ನು ಬಂಟ್ವಾಳ ನಗರ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧಾರದ ಮೇರೆಗೆ ಬಂಟ್ವಾಳ ಕಾಲೇಜೊಂದರ ಮೈದಾನಕ್ಕೆ ಪೊಲೀಸರು ಭಾನುವಾರ ರಾತ್ರಿ ಸುಮಾರು 12ರ ವೇಳೆ ದಾಳಿ ನಡೆಸಿದ ಸಂದರ್ಭ, ಸ್ಥಳೀಯ ನಿವಾಸಿಗಳಾದ ಧನುಷ್ (20), ವಿಕಾಸ್ (20), ರಾಕೇಶ್ (20), ಅಶ್ವತ್ (20), ಹರೀಶ್ (20) ಅವರು ಅನುಮಾನಾಸ್ಪದವಾಗಿ ನಿಂತಿದ್ದರು. ಅವರನ್ನು ವಿಚಾರಿಸಿದಾಗ ಮಾದಕದ್ರವ್ಯ ಸೇವಿಸಿದ್ದು ಕಂಡುಬಂದು, ಬಳಿಕ ವೈದ್ಯರಲ್ಲಿ ಪರಿಶೀಲಿಸಿದಾಗ ಖಚಿತಗೊಂಡಿತು. ಈ ಕುರಿತು ಪ್ರಕರಣವನ್ನು ಬಂಟ್ವಾಳ ನಗರ ಪೊಲೀಸರು ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ.

