ಬಂಟ್ವಾಳ: ಬಂಟ್ವಾಳ ಉಪವಿಭಾಗದ ಡಿ.ವೈ.ಎಸ್.ಪಿ.ಯಾಗಿ ವೆಲಂಟೈನ್ ಡಿ.ಸೋಜ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್ ಅವರು ಬೆಂಗಳೂರು ಲೋಕಾಯುಕ್ತ ಎಸ್.ಪಿ.ಯಾಗಿ ಭಡ್ತಿಗೊಂಡು ವರ್ಗಾವಣೆ ಯಾದ ಬಳಿಕ ತೆರವಾದ ಈ  ಸ್ಥಾನಕ್ಕೆ ವೆಲೆಂಟೈನ್ ಡಿ.ಸೋಜ ಅವರ ನಿಯುಕ್ತಿಗೊಳಿಸಲಾಗಿದ್ದು,ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಈ ಹಿಂದೆ ಬಂಟ್ವಾಳ ವೃತ್ತ ನಿರೀಕ್ಷಕ ರಾಗಿ ಕಾರ್ಯನಿರ್ವಹಿಸಿದ್ದರು.
IMG-20200106-WA0073
ಅ ಬಳಿಕ ಮಂಗಳೂರು ನಗರ ವ್ಯಾಪ್ತಿ , ಕಾರವಾರ ಮೊದಲಾದೆಡೆ ಕಾರ್ಯನಿರ್ಹಿಸಿರುತ್ತಾರೆ. ಅಧಿಕಾರ ಸ್ವೀಕಾರದ ವೇಳೆ  ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಹೆಚ್.ಗೌಡ, ಗ್ರಾಮಾಂತರ ಎಸ್. ಐ. ಪ್ರಸನ್ನ ಎಂ.ಎಸ್,  ಬಂಟ್ವಾಳ ಟ್ರಾಫಿಕ್ ಠಾಣಾ ಎಸ್. ಐ. ರಾಮನಾಯ್ಕ್, ವಿಟ್ಲ ಠಾಣಾ ಎಸ್. ಐ.ವಿನೋದ್ ಎಸ್. ಹಾಗೂ ಪ್ರೋ.ಪಿ.ಎಸ್.ಐ  ರವರು ಉಪಸ್ಥಿತರಿದ್ದರು.
Attachments area

 

By suddi9

Leave a Reply

Your email address will not be published. Required fields are marked *