ಕೈಕಂಬ: ಪುಟಾಣಿ ಮಕ್ಕಳು ಲೈಂಗಿಕ ದೌರ್ಜನ್ಯದಿಂದ ತಪ್ಪಿಸುವ ಸಲುವಾಗಿ ಒಳ್ಳೆಯ ಸ್ಪರ್ಷ ಹಾಗೂ ಕೆಟ್ಟ ಸ್ಪರ್ಷದ ಕುರಿತಾಗಿ ಅರಿವು ಕಾರ್ಯಕ್ರಮವನ್ನು ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಇವರು ಬ್ರೇಕ್ಥ್ರೂ ಕರ್ನಾಟಕ ಇವರ ಸಹಯೋಗದೊಂದಿಗೆ ನಡೆಸಿಕೊಟ್ಟರು.

ಕೆಕೆಎಸ್ ಯೋಜನೆ ಅಡಿಯಲ್ಲಿ ಮಕ್ಕಳ ಹಕ್ಕುಗಳ ಸಂಘದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎದುರಿಸುವ ಹಾಗೂ ಕೆಟ್ಟ ಸ್ಪರ್ಷ ಹಾಗೂ ಒಳ್ಳೆಯ ಸ್ಪರ್ಷದ ಬಗ್ಗೆ ಮಾಹಿತಿ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಬ್ರೇಕ್ ಥ್ರೂ ಸಂಸ್ಥೆಯ ಭರತ್ ಎಸ್ ಕರ್ಕೇರಾ ತರಬೇತಿ ನಡೆಸಿಕೊಟ್ಟರು. ಯೋಜನೆಯ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್, ಚಂದ್ರಶೇಖರ್, ಸ್ವಾತಿ, ಶೀಲಾ ಬಿ ಶೆಟ್ಟಿ ಉಪಸ್ಥಿತರಿದ್ದರು


