ಬಂಟ್ವಾಳ: ಸರಕಾರಿ ಪ್ರೌಢ ಶಾಲೆ ಗೋಳ್ತಮಜಲು ಕಲ್ಲಡ್ಕ ಇದರ ಶಾಲಾ ವಾರ್ಷಿಕ ಕೋತ್ಸವ ಮತ್ತು ” ಬೆಳ್ಳಿ ಹಬ್ಬ 20-20 “  ವರ್ಷದ ಉದ್ಘಾಟಿನೆ ಕಾರ್ಯಕ್ರಮ ನಡೆಯಿತು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರತ್ನಾವತಿ ಅವರುಶಾಲಾ ವಾರ್ಷಿಕೋತ್ಸವ ಹಾಗೂ ಈ ಶಾಲೆ ಆರಂಭವಾಗಿ 24 ವರ್ಷ ಪೂರೈಸಿ 25 ನೇ ವರ್ಷಕ್ಕೆ ಕಾಲಿಡುವ ಸಂದರ್ಭ  ಬೆಳ್ಳಿ ಹಬ್ಬ ವರ್ಷ 2020  ಲೊಗೋ ಉದ್ಘಾಟನೆ ಯ ಕಾರ್ಯಕ್ರಮದ ಸಭಾ ಕಾರ್ಯಕ್ರಮ ವನ್ನು
ಉದ್ಘಾಟಿಸಿದ ರು. ಬಳಿಕ ಮಾತನಾಡಿದ ಅವರು ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೈಹಿಕವಾಗಿ, ಮಾನಸಿಕವಾಗಿ, ಶೈಕ್ಷಣಿಕ ವಾಗಿ,  ಬಲಿಷ್ಟ ವಾರಾಗಿದ್ದಾರೆ.
IMG_2896
ಪಾಠದ ಜೊತೆಗೆ ಶಿಸ್ತಿನ ಜೀವನದ ಪಾಠವನ್ನು ಸರಕಾರಿ ಶಾಲೆ ಕಲಿಸಿಕೊಡುತ್ತದೆ. ಪೋಷಕರ ಅಂಕದ ಜೊತೆಗೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಯೂ ಚಿಂತನೆ ನಡೆಸಬೇಕಾಗಿದೆ. ಉತ್ತಮ ಶಿಕ್ಷಣ ಉಚಿತವಾಗಿ ನೀಡುವ ಸರಕಾರಿ ಶಾಲೆಯ ಉಳಿವಿಗಾಗಿ ಗ್ರಾಮದ ಹಿರಿಯರ ಸೂಕ್ತ ಸಲಹೆಸೂಚನೆಯ ಜೊತೆಗೆ  ಪೋಷಕರ ಸಹಕಾರ ಅತೀ ಅಗತ್ಯ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ ಅವರು ಕುಡಿಯುವ ನೀರಿನ ಘಟಕವನ್ನು  ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸರಕಾರಿ ಶಾಲೆ ಉಳಿದು ಬೆಳೆಯಲು ಶಿಕ್ಷಕರು, ಎಸ್.ಡಿ.ಎಂ.ಸಿ.ಹಾಗೂ ಪೋಷಕರ ಸಹಭಾಗಿತ್ವ ಬಹಳ ಪ್ರಾಮುಖ್ಯತೆ ಪಡೆಯುತ್ತದೆ ಅವರು ಹೇಳಿದರು. ಇಂತಹ ಶಾಲೆಯಲ್ಲಿ  ಕಲಿಯುವ ವಿದ್ಯಾರ್ಥಿಗಳು ಭಾಗ್ಯವಂತರು. ಮುಚ್ಚುವ ಹಂತದಲ್ಲಿದ್ದ ಈ ಶಾಲೆಯನ್ನು ಪ್ರಗತಿಯ ಹಂತದಲ್ಲಿ ಮುನ್ನಡೆ ಸುವ , ಸರಕಾರದ ಸವಲತ್ತಿನ ಜೊತೆಗೆ ಸಂಘಸಂಸ್ಥೆಗಳು, ಗ್ರಾಮದ ಪ್ರಮುಖರು ಎಸ್.ಡಿ.ಎಂ. ಸೇರಿ ಶಾಲೆಯ ಅಭಿವೃದ್ಧಿ ಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಶಾಲಾ ಮಕ್ಕಳು ರಚಿಸಿದ  ವಿಶೇಷ ವಾರ್ಷಿಕ ಸಂಚಿಕೆ “ಮಜಲ್ಮ್ ಣಿಹಾರ”  ವನ್ನು ಶಾಲಾ ಕಾರ್ಯಧ್ಯಕ್ಷ ಚಂದ್ರಶೇಖರ್ ಅವರು ಬಿಡುಗಡೆ ಗೊಳಿಸಿದರು. ಸ್ಥಳದಾನಿ ಯೂಸೂಫ್ ಅವರು ಬೆಳ್ಳಿಹಬ್ಬ ಕಾರ್ಯಕ್ರಮದ ಲೋಗೋ ಅನಾವರಣ ಗೊಳಿಸಿದರು. ವೇದಿಕೆಯಲ್ಲಿ ತಾ.ಪಂ.ಸದಸ್ಯರಾದ ಮಹಾಬಲ ಶೆಟ್ಟಿ,  ಗ್ರಾ.ಪಂ. ಸದಸ್ಯ ರಾದ ಮೋನಪ್ಪ ದೇವಸ್ಯ, ರಾಜೇಶ್ ಕೊಟ್ಟಾರಿ, ಜಯಶ್ರೀ, ಜಯಂತಿ,  ಹಿರಿಯ ರಾದ ಸುಂದರ ಶೆಟ್ಟಿ, ನಾರಾಯಣ ಪೂಜಾರಿ, ಚಿ.ರಮೇಶ್, ನವೀನ್ ರಾಜ್ , ಸೀತಾರಾಮ ಮಾಸ್ಟರ್‌,  ಶಾಲಾಭಿವೃದ್ದಿ ಸದಸ್ಯ ರಾದ  ಕೃಷ್ಣಪ್ಪ ಪೂಜಾರಿ , ನಾಗೇಶ್ ಪೂಜಾರಿ ನೆಕ್ಕರಾಜೆ, ನಾರಾಯಣ,  ಮುಖ್ಯೋಪಾಧ್ಯಾಯಿನಿ ಸುಜಾತ  ಕಲ್ಲಡ್ಕ ರೈತ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕಿ ವಿಜಯ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕಿ ಸುಜಾತ ವಾರ್ಷಿಕ ವರದಿ ವಾಚಿಸಿದರು. ಕಾರ್ಯಧ್ಯಕ್ಷ ಚಂದ್ರಶೇಖರ್ ಸ್ವಾಗತಿಸಿದರು.   ನಳಿನಿ ವಂದಿಸಿದರು. ಶಿಕ್ಷಕ ಶಂಕರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯದಲ್ಲಿ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಸಭಾ ಕಾರ್ಯಕ್ರಮ ದ ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

 

By suddi9

Leave a Reply

Your email address will not be published. Required fields are marked *