ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಭಡ್ತಿಗೊಂಡು ವರ್ಗಾವಣೆಗೊಂಡ ಪೊಲೀಸ್ ಸಿಬಂದಿಗಳಿಗೆ ಅಭಿನಂದಿಸಿ ಬೀಳ್ಕೋಡುವ ಸಮಾರಂಭ ಠಾಣೆಯಲ್ಲಿ ನಡೆಯಿತು.     ಎ.ಎಸ್.ಐ ಅಗಿ  ಪದೋನ್ನತಿಗೊಂಡು ವೇಣೂರು ಪೊಲೀಸ್ ಠಾಣೆಗೆ ವರ್ಗಾವಣೆ ಗೊಂಡ  ಸುಭಾಶ್ ಶೆಣ್ಯೆ ಪುತ್ತೂರು ನಗರ ಠಾಣೆಗೆ ಹೆಡ್ ಕಾನ್ಸ್ ಟೇಬಲ್ ಅಗಿ ವರ್ಗಾವಣೆ ಗೊಂಡ, ಸುಬ್ರಹ್ಮಣ್ಯ ಹಾಗೂ ವಿಟ್ಲ ಠಾಣೆಗೆ  ವರ್ಗಾವಣೆ ಗೊಂಡ  ಜಯರಾಮ್ ಮತ್ತು ತರಬೇತಿ ಅವಧಿ ಮುಗಿದು ವರ್ಗಾವಣೆಗೊಂಡ ವಿನೋದ್ ರೆಡ್ಡಿ ಮತ್ತು ಜಂಬೂರಾಜ್ ಮಹಾಜನ್ ಅವರನ್ನು  ಬೀಳ್ಕೋಡಲಾಯಿತು.
IMG_2936 (1)
ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಕಾರ್ಯಕ್ರಮ ದ ಅಧ್ಯಕ್ಷೆತೆ ವಹಸಿ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ  ಸಾಮೂಹಿಕವಾಗಿ ಕೆಲಸ ಮಾಡಿದಾಗ ಕಠಿನ  ಪ್ರಕರಣಗಳನ್ನು  ಸುಲಭವಾಗಿ ತಾರ್ಕಿಕ ಅಂತ್ಯ ಕಾಣಿಸಲು ಸಾಧ್ಯ.ಇಲಾಖೆಯಲ್ಲಿ ಹಿರಿಯ ಸಿಬ್ಬಂದಿಗಳ ಅನುಭವವನ್ನು ಕಿರಿಯ ಸಿಬ್ಬಂದಿಗಳು ಪಡೆದುಕೊಂಡು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. ವೇದಿಕೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವಿನಾಶ್ ಗೌಡ ಎಚ್.ಜಿ.ಹಾಗೂ ಸಿಬ್ಬಂದಿ ಗಳು ಉಪಸ್ಥಿತರಿದ್ದರು.ಗ್ರಾಮಾಂತರ ಠಾಣಾ ಎಸ್.ಐ.ಪ್ರಸನ್ನ ಪ್ರಸ್ತಾವಿಕವಾಗಿ ಮಾತನಾಡಿದರು. ಸಿಬ್ಬಂದಿಗಳಾದ ಜನಾರ್ಧನ ಸ್ವಾಗತಿಸಿ, ಲೋಲಾಕ್ಷಿ ವಂದಿಸಿದರು. ಮನೋಜ್ ಆಚಾರ್ಯ ನಿರೂಪಿಸಿದರು. ‌

By suddi9

Leave a Reply

Your email address will not be published. Required fields are marked *