ಬಂಟ್ವಾಳ:ಸುಮಂಗಲ ಕೋ. ಆಪರೇಟಿವ್ ಸೊಸೈಟಿಯ ಫರಂಗಿಪೇಟಯ ಶಾಖೆಯಲ್ಲಿ “ಕಾರವನ್ ಆಟೋಮೊಬೈಲ್ ” ಎಂಬ ಕಾರು ಮಾರಾಟ ಸಂಸ್ಥೆಯ ಹೆಸರಲ್ಲಿ 7 ಲಕ್ಷ  ರೂ.ವಾಹನ ಸಾಲ ಪಡೆದು ವಂಚಸಿರುವ ಪ್ರಕರಣಕ್ಕೆ ಸಂಬಂಧಿಸಿ ಒರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

IMG_20191227_173050ಮಂಗಳೂರು ಪಂಪ್ ವೆಲ್ ನ ಶೆಟ್ಟಿ ಅಪಾಟ್೯ಮೆಂಟ್ ನಲ್ಲಿ ವಾಸವಿರುವ   ಬಶೀರ್ ಯಾನೆ ಹಸನ್ ಬಶೀರ್ (42 ) ಬಂಧಿತ ಆರೋಪಿಯಾಗಿದ್ದಾನೆ.   ಈತ  ಕಾರವನ್ ಆಟೋಮೊಬೈಲ್ ನ ಹೆಸರಿನಲ್ಲಿ ವಿವಿಧ ಕಂಪೆನಿಯ ಕಾರು ಮಾರಾಟಗಾರ ಎಂದು  ವಾಹನ ಮಾರಾಟ ನಕಲಿ ಸಂಸ್ಥೆ ಮಾಡಿಕೊಂಡಿದ್ದಾನೆಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಸ್ಥೆಯ  ಹೆಸರಿನಲ್ಲಿ ಈತ ಫರಂಗಿಪೇಟೆಯ ಸುಮಂಗಲ ಕೋ. ಆಪರೇಟಿವ್ ಸೊಸೈಟಿ  ಶಾಖೆಯಲ್ಲಿ ನಕಲಿ ದಾಖಲಾತಿ ನೀಡಿ ಸಾಲ ಪಡೆದು ವಂಚಿಸಿದ್ದಲ್ಲದೆ,  ಈ ನಕಲಿ ವಾಹನ ಮಾರಾಟ ಸಂಸ್ಥೆಯ  ಹೆಸರಿನಲ್ಲಿ ಮಂಗಳೂರು, ಬಂಟ್ವಾಳ, ವಿಟ್ಲ, ಮೂಡಬಿದ್ರೆ ವಿವಿಧ ಬ್ಯಾಂಕ್ ಗಳಿಗೆ ಬೇರೆಯವರ ಹೆಸರಿನಲ್ಲಿ  ಸುಮಾರು 2 ಕೋ. ರೂ.ಗೂ ಅಧಿಕ ಹಣ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *