ಬಂಟ್ವಾಳ: ರಾಷ್ಟ್ರೀಯ ಚಿಂತನೆಯನ್ನು ಮೈಗೂಡಿಸಿಕೊಂಡು ಎತ್ತರಕ್ಕೆ ಬೆಳೆದ ದಿವಂಗತ ಜಿ.ಆನಂದ ಒರ್ವ ರಾಷ್ಟ್ರಸಂತ ಎಂದು ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರು ಹೇಳಿದ್ದಾರೆ. ಶುಕ್ರವಾರ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಳದ ಸಭಾಂಗಣದಲ್ಲಿ  ಬಿಜೆಪಿ ಹಿರಿಯ ಕಾರ್ಯಕರ್ತ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಆನಂದ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು  ಮಾತನಾಡುತ್ತಿದ್ದರು.IMG-20191227-WA0059

‌ಕಾರ್ಯಕರ್ತರಿಗೆ ಸಮಸ್ಯೆ ಅದಾಗ ಜೀವನವನ್ನು ಮುಡಿಪಾಗಿಟ್ಟು ಸ್ಪಂದಿಸುತ್ತಿದ್ದಲ್ಲದೆ, ನೂರು ಜನರಿಗೆ ಜಾಮೀನು ನೀಡಿದ ವ್ಯಕ್ತಿಯು ಆಗಿದ್ದಾರೆ ಎಂದ ಅವರು ಕಾರ್ಯಕರ್ತರ ಜೊತೆ ಅತ್ಯಂತ ಮೃದು ಸ್ವಭಾವದಿಂದ ವ್ಯವಹರಿಸಿ ಅರಳುವ ಹೂವಾಗಿದ್ದರು. ಅವರ ಹೆಜ್ಜೆ ಹಾಕಿದ ಸಹಕಾರಿ  ಶೈಕ್ಷಣಿಕ , ಸಾಮಾಜಿಕ ಕ್ಷೇತ್ರವನ್ನು ಬೆಳೆಸುವ ಪ್ರಯತ್ನವಾಗಬೇಕು ಎಂದರು . ‌

IMG-20191227-WA0058
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಮಾತನಾಡಿ  ನನಗೆ ರಾಜಕೀಯ ಜೀವನಕ್ಕೆ ದಿವಂಗತ  ಜಿ.ಆನಂದ ಅವರು ಪ್ರೇರಣೆ ನೀಡಿದ್ದರು ಎಂದು ಹೇಳಿದರು.
2013 ರಲ್ಲಿ  ಬಂಟ್ವಾಳ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ವೇಳೆ ಇಡೀ ಬಂಟ್ವಾಳ ಕ್ಷೇತ್ರದ ಕಾರ್ಯಕರ್ತರನ್ನು  ಪರಿಚಯಿಸಿದ ಜಿ.ಆನಂದರು,ನೀವು ಶಾಸಕನಾದ ಮೇಲೆ ನಾನು ಸಾಯುವುದು ಎಂಬ ಮಾತನ್ನು ಹೇಳಿರುವುದನ್ನು ಶಾಸಕ ರಾಜೇಶ್ ನಾಯ್ಕ್ ಸ್ಮರಿಸಿ ಅವರ ಸಾವು ನನ್ನ ವಯಕ್ತಿಕ ಮತ್ತು  ಪಕ್ಷಕ್ಕೆ ಅಪಾರ ನಷ್ಟ ತಂದಿದೆ ಎಂದು ಹೇಳಿದರು.

IMG-20191227-WA0054

ರಾಜ್ಯಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಸಂಜೀವ ಮಠಂದೂರು, ಲಾಲಜಿ ಮೆಂಡನ್, ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ.ಸದಸ್ಯರಾದ ರವೀಂದ್ರ ಕಂಬಳಿ, ಕಮಲಾಕ್ಷೀ ಕೆ.ಪೂಜಾರಿ, ತುಂಗಪ್ಪ ಬಂಗೇರ, ಪದ್ಮಶೇಖರ್ ಜೈನ್, ಮಾಜಿ ಸಚಿವರಾದ ನಾಗರಾಜ್ ಶೆಟ್ಟಿ, ಬಿ.ರಮಾನಾಥ ರೈ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಶಕುಂತಲಾ ಶೆಟ್ಟಿ, ಗಣೇಶ್ ಕಾರ್ಣಿಕ್,ಮೋನಪ್ಪ ಭಂಡಾರಿ ಪ್ರಮುಖರಾದ ಪ್ರಸಾದ್ ಕುಮಾರ್, ಹರಿಕೃಷ್ಣ ಬಂಟ್ವಾಳ, ಬೃಜೇಶ್ ಚೌಟ, ಕಿಶೋರ್ ಕುಮಾರ್ ರೈ, ಪ್ರತಾಪ್ ಸಿಂಹ ನಾಯಕ್, ರಂದೀಪ್ ಕಾಂಚನ್, ನಮಿತಾ ಶ್ಯಾಮ್, ಉದಯಕುಮಾರ್ ರಾವ್, ಸುಲೋಚನಾ ಜಿ‌.ಕೆ ಭಟ್, ಗೋವಿಂದ ಪ್ರಭು, ದೇವದಾಸ್ ಶೆಟ್ಟಿ, ಚೆನ್ನಪ್ಪ ಕೋಟ್ಯಾನ್, ಶ್ರೀಕಾಂತ್ ಶೆಟ್ಟಿ, ತನಿಯಪ್ಪ ಮಡಿವಾಳ, ವೆಂಕಪ್ಪ ಪೂಜಾರಿ, ಬಾಲಕೃಷ್ಣ ಪೆರಾಜೆ, ಪುರಸಭಾ ಸದಸ್ಯರಾದ, ವಿದ್ಯಾವತಿ ಪ್ರಮೋದ್ ಕುಮಾರ್, ಹರಿಪ್ರಸಾದ್, ರಾಮಕೃಷ್ಣ ಆಳ್ವ, ಮಾಜಿ ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಬೇಬಿ ಕುಂದರ್, ರಾಜಾರಾಂ ಭಟ್, ವಜ್ರನಾಥ ಕಲ್ಲಡ್ಕ, ಯಶವಂತ ಪೊಳಲಿ, ರಾಮ್ ದಾಸ್ ಬಂಟ್ವಾಳ, ಜಿತೇಂದ್ರ ಕೊಟ್ಟಾರಿ, ಸಂದೇಶ್ ಶೆಟ್ಟಿ, ರಾಮಚಂದ್ರ ಗೌಡ ಮಣಿ,ಬಂಟ್ವಾಳ ವ್ಯವಸಾಯ ಬ್ಯಾಂಕ್ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ನಿರ್ದೇಶಕರುಗಳು ಹಾಗೂ ಸಿಬ್ಬಂದಿಗಳು, ಗ್ರಾ.ಪಂ.ಸದಸ್ಯರು ಸಹಿತ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಶೃದ್ದಾಂಜಲಿ ಅರ್ಪಿಸಿದರು. ಜಿ.ಆನಂದ ಅವರ ಪತ್ನಿ,ಪುತ್ರ ಸಮರ್ಥ್,ಪತ್ರಿ  ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *