ಬಂಟ್ವಾಳ: ಹೆತ್ತವರು ಮಕ್ಕಳಿಗೆ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಲು ಪ್ರೋತ್ಸಾಹ  ನೀಡಿದಾಗ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಚಲನಚಿತ್ರ ನಟ ಶಿವಧ್ವಜ್ ಶೆಟ್ಟಿ ಹೇಳಿದರು.
 ಗುರುವಾರ ರಾತ್ರಿ ಬಿ.ಸಿ.ರೋಡ್ ಗಾಣದಪಡ್ಪು ಬಳಿಯ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಬಂಟ್ವಾಳ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಸಹಯೋಗದಲ್ಲಿ ನಡೆಯುತ್ತಿರುವ ಕರಾವಳಿ ಕಲೋತ್ಸವ-೨೦೧೯-೨೦ ಇದರ ೪ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
DSC_5734
ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆಸಾಕಷ್ಟು ಅವಕಾಶವಿದ್ದು, ಮುಖ್ಯವಾಗಿ ಅದಕ್ಕೆ ಪ್ರೋತ್ಸಾಹ ಅಗತ್ಯವಿರುತ್ತದೆ ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಕಲೆ-ಸಂಸ್ಕೃತಿ ಭಾರತದ ಮಣ್ಣಿನ ಕಲೆಯಾಗಿದ್ದು, ಪ್ರತಿಭೆ ಎನ್ನುವುದು ಜಾತಿ- ಧರ್ಮವನ್ನು ಮೀರಿದೆ. ನಮ್ಮ ಮಕ್ಕಳು ಕಲಾ ಕ್ಷೇತ್ರದಲ್ಲಿ ತೊಡಗಿದರೆ ಅವರು ಇಡೀ ದೇಶದ ಆಸ್ತಿಯಾಗುತ್ತಾರೆ ಎಂದರು.
ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ನ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು ಪ್ರಸ್ತಾವನೆಗೈದರು.
ಈ ವೇಳೆ ರಂಗಭೂಮಿ ಕಲಾವಿದ ಹರೀಶ್ ಆಲದಪದವು, ಕಲಾವಿದೆ ದೀಕ್ಷಾ ರಾವ್ ಕುಂಬ್ಳೆ ಅವರನ್ನು ಸಮ್ಮಾನಿಸಲಾಯಿತು. ಇದೇ ವೇಳೆ ನಾಟಕೋತ್ಸವ 2019-20 ಕ್ಕೆ ಚಾಲನೆ ನೀಡಲಾಯಿತು. ಗುರುಗಳಾದ ವಿದ್ವಾನ್ ವೆಂಕಟಕೃಷ್ಣ ಭಟ್, ಬಾಲಕೃಷ್ಣ ಮಂಚಿ, ಅರುಣ್ ಪ್ರಸಾದ್, ನಿರಂಜಯ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ರಾಡ್ರಿಗಸ್, ತುರಾವೇ ವಾಮದಪದವು ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಲಾವಿದ ಕರುಣಾಕರ ಶೆಟ್ಟಿ ಪಣಿಯೂರುಗುತ್ತು, ಪಾಂಡೇಶ್ವರ ಪೊಲೀಸ್ ಸಿಬಂದಿ ವಿಶಾಲಾಕ್ಷಿ, ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಕಲೋತ್ಸವ ಗೌರವಾಧ್ಯಕ್ಷ ಜಯರಾಮ ರೈ ಉಪಸ್ಥಿತರಿದ್ದರು.
ಶೈಲಜಾ ರಾಜೇಶ್ ವಂದಿಸಿದರು. ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *