ಉಡುಪಿ : ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲ ಇದರ ರಾಷ್ಟ್ರೀಯ ಸೇವಾ ಯೋಜನೆ ವಾಷಿ೯ಕ ವಿಶೇಷ ಶಿಬಿರ ಸಕಾ೯ರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರ ದಲ್ಲಿ ಡಿ.19 ರಂದು ಉದ್ಘಾಟನೆಗೊಂಡಿತು.
ಕಾಯ೯ಕ್ರಮವನ್ನು ಉದ್ಘಾಟಿಸಿದ ಜಿ.ಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಯುವಜನರು ಈ ರೀತಿಯ ಶಿಬಿರದ ಮೂಲಕ ಜೀವನ ಮೌಲ್ಯವನ್ನು ಕಲಿಯಬಹುದಾಗಿದೆ ಎಲ್ಲಾ ಶಾಲೆಯಲ್ಲಿ ಈ ರೀತಿಯ ಶಿಬಿರ ಪ್ರಾರಂಭಿಸಿದರೆ ಉತ್ತಮ ಎಂದರು.

IMG_20191219_215411
ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ರಾಧಿಕಾ ಪೈ ವಹಿಸಿದ್ದರು.ಆಡಳಿತಾಧಿಕಾರಿ ದಯಾನಂದ ಶೆಟ್ಟಿ, ನಂಬಿಕೆಯು ಜೀವನದ ಅತ್ಯಂತ ಮುಖ್ಯ ಅಂಗವಾಗಿದೆ ಗಾಂಧಿಜಿಯವರ ನೂರನೇ ಜನ್ಮ ದಿನಾಚರಣೆಯ ಸಂದಭ೯ದಲ್ಲಿ ಪ್ರಾರಂಭವಾದ ಈ ಯೋಜನೆ ದೇಶಾಧ್ಯoತ ಹರಡಿದೆ ಎಂದರು.

ವೇದಿಕೆಯಲ್ಲಿ ವಾರಂಬಳ್ಳಿ ಗ್ರಾ.ಪಂ ಅಧ್ಯಕ್ಷ ನವೀನಚಂದ್ರ ನಾಯಕ್, ಎಸ್.ಡಿ.ಎಂ.ಸಿ ಅಧ್ಯಕ್ಷ ಪಾಂಡುರಂಗ ಕುಲಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್ ಪ್ರಕಾಶ್, ಸಕಾ೯ರಿ ಪ.ಪೂ ಕಾಲೇಜಿನ ಪ್ರಾಂಶುಪಾಲ ರವೀಂದ್ರ ಉಪಾಧ್ಯ’ ಮುಖ್ಯ ಶಿಕ್ಷಕ ಮಲ್ಲಿಕಾಜು೯ನ್, ಹಳೆ ವಿದ್ಯಾಥಿ೯ ಸoಘ ಅಧ್ಯಕ್ಷ ರಾಘವೇಂದ್ರ ಪ್ರಭು, ಕವಾ೯ಲು, ಇನ್ನರ್ ವಿಲ್ ಅಧ್ಯಕ್ಷರು ಭಾಗವಹಿಸಿದ್ದರು.ಚಿರಂಜನ್ ಶೇರಿಗಾರ್ ಸ್ವಾಗತಿಸಿದರು.ಶ್ರೀನಿವಾಸ್ ವೈದ್ಯ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *