ಕಟೀಲು:ಮಹಾತ್ಮ ಗಾಂಧೀಜಿಯವರ “ಗ್ರಾಮ ರಾಜ್ಯ ರಾಮ ರಾಜ್ಯ” ದ ಕನಸನ್ನು ಗ್ರಾಮೋತ್ಸವ ಎಂಬ ಕಾರ್ಯಕ್ರಮದ ಮುಖೇನ ನನಸು ಮಾಡಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ರತ್ನಗಿರಿ – ನಿಡ್ಡೋಡಿಯಲ್ಲಿ ಜ್ಙಾನರತ್ನ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ)ಇದರ ಆಶ್ರಯದಲ್ಲಿ ನಡೆದ – ಗ್ರಾಮೋತ್ಸವ-XI ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಶಿಕ್ಷಣ ವ್ಯಾಪಾರೀಕರಣ ಆಗಿದೆ ಜ್ಞಾನ ಸಂಪನ್ನದ ಜೊತೆ ಅವನ ಬದುಕಿನಲ್ಲಿ ಸಂಸ್ಕಾರಯುತ ರಾಷ್ಟ್ರ ಚಿಂತಿತ ಭಾವನೆಯನ್ನು ಮೂಡಿಸಿ, ರಾಷ್ಟ್ರಕಟ್ಟುವ ದೊಡ್ಡ ಕಾರ್ಯ ಇಲ್ಲಿ ನಡೆದಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಭಾಸ್ಕರ ದೇವಸ್ಯ ಇವರು ಅತಿಥಿ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಉಪ್ಪಳ ಇಲ್ಲಿಯ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಎಂ.ಆರ್.ಪಿ.ಲ್. ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಶ್ರೀಮತಿ ಲಕ್ಷ್ಮೀ ಕುಮಾರನ್, ರೋಟರಿ ಪಿಯುಸಿ ಕಾಲೇಜು ಮೂಡುಬಿದಿರೆಯ ಪ್ರಾಂಶುಪಾಲರಾದ ರೊ.ವಿನ್ಸಂಟ್ ಡಿ’ಕೋಸ್ತ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯಾದ ಕಸ್ತೂರಿ ಪಂಜ, ಸಂಸ್ಥೆಯ ಕಾರ್ಯದರ್ಶಿ ಸಂಗೀತಾ ಭಾಸ್ಕರ ದೇವಸ್ಯ ಉಪಸ್ಥಿತರಿದ್ದರು. ನಿತೇಶ್ ಮಾರ್ನಾಡ್ ಕಾರ್ಯಕ್ರಮವನ್ನು ನಿರೂಪಿಸಿದರು.
