ಕೃಷಿಯಲ್ಲೂ ಸಂಸ್ಕೃತಿ, ಸಂಸ್ಕಾರ ಹಾಗೂ ಸಾಂಸ್ಕøತಿಕ ಮೌಲ್ಯಗಳನ್ನು ಗುರುತಿಸಿ ಆರಾಧಿಸುವುದು  ಗಮನಾರ್ಹ. ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಸಂಬಂಧಿಸಿ ಭಂಡಾರದಮನೆ ಕಾವರಮನೆಯಲ್ಲಿ ಭಾನುವಾರ ಸಾಂಪ್ರದಾಯಿಕ ಪೂಕರೆ ಕಂಬಳ ಸಂಪನ್ನಗೊಂಡಿತು. ಸುಗ್ಗಿಯ ಸಾಗುವಳಿಗೆ ಪೂರ್ವಭಾವಿಯಾಗಿ ಎಕ್ಕಾರು ಶ್ರೀ ಕೃಷ್ಣಮಠದ  ಉಡುಪರು ಸೂಚಿಸಿದ  ನಿಗಧಿತ ದಿನ ದಂದು ಕಂಬಳದ ಏರ್ಪಡು ಮಾಡಿ ಎಕ್ಕಾರಿನ ನಾಲ್ಕು ಕರೆಗಳಾದ  ತಾಂಗಡಿ ಕರೆ, ನಡ್ಯೋಡಿ ಕರೆ, ಬಡಕೆರೆ, ಮೇಲೆಕ್ಕಾರು ಕರೆಗಳಿಗೆ ಕ್ರಮಪ್ರಕಾರ ಹೇಳಿಕೆಯಾಗಿ ಊರಿನ ಸಮಸ್ತರಿಗೂ ಕಂಬಳಕ್ಕೆ ಆಹ್ವಾನಿಸಲಾಗುತ್ತದೆ.kambala3

ಪೂಕರೆಯ ತಯಾರಿ:
ಎಕ್ಕಾರು ಗ್ರಾಮದ  ವಿಶ್ವಕರ್ಮರು ಸೇರಿ ನಿಗಧಿತ ಮೂಹೂರ್ತ ದಲ್ಲಿ ಜೀವಂತ ಕಂಗು (ಅಡಕೆ ಮರ) ಕಡಿದು ಟವರ್ ಮಾದರಿಯಲ್ಲಿ ರಚಿಸಿ ಹಲಸಿನ ಮರದಿಂದ  ತಯಾರಿಸಿದ ಶಿಖರ (ಮುಗುಳಿ) ಇಟ್ಟು ಹಿಂಗಾರ ಹಾಗೂ ಕೇಪಳ ಹೂಗಳಿಂದ  ಅಲಂಕರಿಸಿ ಪೂಕರೆಯನ್ನು ಸಿದ್ದ ಪಡಿಸುತ್ತಾರೆ. ಪೂಕರೆಗೆ ಹಾಲು ಹಾಗೂ ಸೀಯಾಳ ಅಭಿಷೇಕದ  ವಿಧಿಯನ್ನು ತಿಮಣ್ಣ ಕಾವರು ( ಕಾವರ ಮನೆ) ಅವರು ನೆರವೇರಿಸುತ್ತಾರೆ.kambala000000

ಈಗ ಮಾಗಣೆಯಲ್ಲಿ ಕೋಣಗಳೇ ಇಲ್ಲ:

ಹಿಂದಿನ ವರ್ಷಗಳಲ್ಲಿ ಎಕ್ಕಾರು ಮಾಗಣೆಯ ಎಲ್ಲಾ ಮನೆಯವರೂ  ಕಾವರಮನೆಯ ಕಂಬಳಕ್ಕೆ ಕೋಣಗಳನ್ನು ತರುವ ಕ್ರಮವಿತ್ತು. ಹಾಗೆ 30-40 ಜೋಡಿಗಳು ಭಾಗವಹಿಸಿದರು  ಗಿಡ್ಡೇರು ಆಗಬೇಕೆಂಬ ನಿಯಮೇನೂ ಇಲ್ಲ. ಆದರೆ ಯಾಂತ್ರಿಕ ಕೃಷಿಯ ಭರಾಟೆಯಲ್ಲಿ ಎಕ್ಕಾರು ಗ್ರಾಮದಲ್ಲಿ ಯಾರಲ್ಲೂ ಈಗ ಕೋಣಗಳೇ ಇಲ್ಲದ  ಕಾರಣ ಇತ್ತೀಚಿನ ಕೆಲವರ್ಷಗಳಲ್ಲಿ ಕೋಣಗಳನ್ನು ಓಡಿಸುವ ಕ್ರಮ ಇಲ್ಲದೇ  ಕೇವಲ ಪೂಕರೆಯ ವಿಧಿ-ಕ್ರಮ ನೆರವೇರಿಸಲಾಗುತ್ತದೆ . ಭಂಡಾರದ  ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ ಪೂಕರೆಗೆ ಪೂಜೆ ಸಲ್ಲಿಸಿ ಹೊತ್ತೊಯುದು  ಕಂಬಳದ  ಗದ್ದೆಯ ಮಧ್ಯೆ ನೆಡಲಾದ ಕಲ್ಲಿನಮಧ್ಯೆ ಪೂಕರೆಯನ್ನು ಅಳವಡಿಸಿ ಪ್ರದಕ್ಷಿಣೆಗೈದು ಬಂದ ಬಳಿಕ ಆಗಮಿಸಿದ  ಎಲ್ಲರಿಗೂ ಊಟೋಪಚಾರದ  ವ್ಯವಸ್ಥೆ ಮಾಡಲಾಗಿತ್ತು.kambala7

kambala 8

kambala 9

kambala10ಅತಿಕಾರಿ ತಳಿ ನಾಟಿ:

ಕಂಬಳದ ಗದ್ದೆಯಲ್ಲಿ  ಅತಿಕಾರಿ ತಳಿಯನ್ನೇ ನೆಡಬೇಕೆಂಬುದು ಸಾಂಪ್ರದಾಯಿಕ ಕಟ್ಟಳೆಯಿದೆ . ಎಕ್ಕಾರು ಕೃಷ್ಣ ಮಠದ ಪ್ರಮುಖರೂ ಶ್ರೀ ಕೊಡಮಣಿತ್ತಾಯ ಕ್ಷೇತ್ರದ ಓರ್ವ ಮೊಕ್ತೇಸರರೂ ಆಗಿರುವ ವೇದ ಮೂರ್ತಿ ಹರಿಧಾಸ ಉಡುಪ, ಪ್ರಸನ್ನ ಮುಂಡಾ  ನಡ್ಯೋಡಿ ಕರೆ, ಗೋಪಾಲ ಶೆಟ್ಟಿ ಬಡಕೆರೆ, ಕೇಶವ ಶೆಟ್ಟಿ ಮೇಲೆಕ್ಕಾರು, ಕರುಣಾಕರ ಶೆಟ್ಟಿ, ಹಿರಿಯ ನ್ಯಾಯವಾದಿ ವೈ. ವಿಕ್ರಂ ಹೆಗ್ಡೆ, ಕೃಷ್ಣ ಪ್ರಸಾದ ರೈ, ಮಹೇಂದ್ರ  ಶೆಟ್ಟಿ, ಬಜಪೆ ವ್ಯವಸಾಯ ಸೇವಾ ಸಹಕಾರಿ  ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಎಕ್ಕಾರು ಬಂಟರ ಸಂಘದ  ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಮುಂತಾದ  ಪ್ರಮುಖರು ಉಪಸ್ಥಿತರಿದ್ದರು. ಬಹಳ ಹಿಂದಿನಿಂದ   ನಡೆದುಬಂದ  ಪರಂಪರೆಯ ಕಂಬಳವಿದು  ಮಾಗಣೆಯಲ್ಲಿ ಕೋಣಗಳೇ ಇಲ್ಲದ  ಕಾರಣ ಪ್ರಶ್ನೆಯಲ್ಲಿ ತಿಳಿದ  ಬಳಿಕ  ನಿಲ್ಲಿಸಲಾಗಿದ್ದ . ಉಳಿದಂ ತೆ ಕಂಬಳದ  ಎಲ್ಲಾ ಸಾಂಪ್ರಾದಾಯಿಕ ವಿಧಿಗಳೂ ಯಥಾಪ್ರಕಾರ ನಡೆಯುತ್ತವೆ. ತಿಮಪ್ಪ ಕಾವ (  ಕಾವರಮನೆ) ಗಡಿಕಾರರು, ಆಡಳಿತ ಮೊಕ್ತೇಸರರು ಶ್ರೀ ಕೊಡಮಣಿತ್ತಾಯ ದೈವಸ್ಥಾನ.

By suddi9

Leave a Reply

Your email address will not be published. Required fields are marked *