ಶ್ರೀನಿವಾಸಪುರ: ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಲು, ಹೊಸದಾಗಿ ನೋಂದಣಿ ಮಾಡಿಕೊಳ್ಳುವ ದಿನಾಂಕವನ್ನು ಡಿ.23 ರವರೆಗೆ ವಿಸ್ತರಿಸಲಾಗಿದೆ ಎಂದು ತಹಶೀಲ್ದಾರ್‌ ಕೆ.ಎನ್.ಸುಜಾತ ತಿಳಿಸಿದ್ದಾರೆ.
  ಅರ್ಹ ಪದವೀಧರರು ಅರ್ಜಿ ನಮೂನೆ 18, ಇತ್ತೀಚಿನ 2 ಭಾವಚಿತ್ರ, ಗೆಜಿಟೆಡ್‌ ಅಧಿಕಾರಿಯಿಂದ ದೃಢೀಕರಿಸಿದ ಪದವಿ ಪ್ರಮಾಣ ಪತ್ರದ ಜೆರಾಕ್ಸ್‌ ಪ್ರತಿ, ಚುನಾವಣಾ ಕ್ಷೇತ್ರದ ಮತದಾರರ ಗುರುತಿನ ಚೀಟಿ ಮತ್ತು ಗೆಜಿಟೆಡ್‌ ಅಧಿಕಾರಿಯಿಂದ ದೃಢೀಕರಿಸಿದ ಆಧಾರ್‌ ಕಾರ್ಡ್‌ ಜರಾಕ್ಸ್‌ ಪ್ರತಿಯನ್ನು ತಾಲ್ಲೂಕು ಕಚೇರಿಯ ಚುನಾವಣಾ ವಿಭಾಗದಲ್ಲಿ  ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *