ಮಂಗಳೂರು: ಮನೆಯ ಮೈನ್ ಸ್ವಿಚ್ ತೆಗೆದು ಮನೆಯೊಳಗೆ ನುಗ್ಗಲು ಯತ್ನಿಸಿದ ಒರಿಸ್ಸಾ ಮೂಲದ ವ್ಯಕ್ತಿಗೆ ಸಾರ್ವಜನಿಕರು ತಪರಾಕಿ ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೊಲ್ಯ ಕನೀರುತೋಟ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ನಡೆದಿದೆ.

main switch
ಕನೀರುತೋಟ ನಿವಾಸಿ ಶಮಾ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ತಡರಾತ್ರಿ ವೇಳೆ ನುಗ್ಗಲು ಯತ್ನಿಸಿದ ವ್ಯಕ್ತಿ ಮೈನ್ ಸ್ವಿಚ್ ಮೊದಲು ಬಂದ್ ಮಾಡಿದ್ದನು. ಈತ ಮನೆಯೊಳಗೆ ನುಗ್ಗಿರುವ ವಿಷಯ ಮನೆಯಲ್ಲಿದ್ದವರಿಗೆ ತಿಳಿದಿರಲಿಲ್ಲ.
ಇತರ ಮನೆಗಳಲ್ಲಿ ವಿದ್ಯುತ್ ಇದ್ದರೂ ತಮ್ಮ ಮನೆಯಲ್ಲಿ ಯಾಕಿಲ್ಲ ಎಂದು ವಿಚಾರಿಸುತ್ತಿದ್ದಾಗ, ವ್ಯಕ್ತಿಯೋರ್ವ ಮನೆಯೊಳಗಿರುವುದು ಕಂಡುಬಂದಿದೆ. ಕೂಡಲೇ ಮನೆಮಂದಿ ಕಿರುಚಿದ ಹಿನ್ನೆಲೆಯಲ್ಲಿ ಸ್ಥಳೀಯರು ವ್ಯಕ್ತಿಯನ್ನು ಹಿಡಿದು ವಿಚಾರಿಸಿದ್ದರು. ಆದರೆ ಯಾವುದೇ ಮಾಹಿತಿಯನ್ನು ನೀಡದೇ ಇದ್ದಾಗ, ತದುಕಿದ್ದಾರೆ. ಬಳಿಕ ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಸಾರ್ವಜನಿಕರಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ಮೊದಲಿಗೆ ಪೊಲೀಸರು ಕೊಂಡೊಯ್ಯಲು ಹಿಂದೇಟು ಹಾಕಿದ್ದರೂ, ನಂತರ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಸ್ಥಳೀಯವಾಗಿ ಕಾಮಗಾರಿ ನಡೆಯುತ್ತಿರುವ ಕಟ್ಟಡದಲ್ಲಿ ಕಾರ್ಮಿಕ ಹಾಗೂ ಒರಿಸ್ಸಾ ಮೂಲದವನೆಂದು ತಿಳಿದುಬಂದಿದೆ. ಕಳವು ನಡೆಸಲು ಬಂದಿರುವುದೇ ಅಥವಾ ಮನೆಯಲ್ಲಿ ಮಹಿಳೆಯರೇ ಇರುವುದನ್ನು ನೋಡಿ ಬಂದಿರುವ ಮಾಹಿತಿ ವಿಚಾರಣೆ ಬಳಿಕ ತಿಳಿದು ಬರಬೇಕಿದೆ

By suddi9

Leave a Reply

Your email address will not be published. Required fields are marked *