ಮಂಗಳೂರು: ಅ.4ರ ಸಂಜೆ ಸಂಜೆ 4-00 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಆಕರ್ಷಕ ಮೆರವಣಿಗೆ ಇರುವ ಕಾರಣದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ವಾಹನಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಸೂಚಿಸಿ ಜಿಲ್ಲಾ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಅಧಿಸೂಚನೆ ಹೊರಡಿಸಿದ್ದಾರೆ.
ಆ ದಿನ ನವದುಗರ್ೆಯರು, ಶಾರದೆ, ಗಣೇಶ ವಿಗ್ರಹ, ವಿವಿಧ ಟ್ಯಾಬ್ಲೋಗಳು ಮತ್ತು ಅಷ್ಟೇ ಸಂಖ್ಯೆಯ ಜನರೇಟರ್ ವಾಹನಗಳನ್ನೊಳಗೊಂಡ ಶೋಭಾಯಾತ್ರೆಯು ಮಣ್ಣಗುಡ್ಡೆ-ಲೇಡಿಹಿಲ್-ಲಾಲ್ಭಾಗ್-ಪಿವಿಎಸ್-ನವಭಾರತ್ ವೃತ್ತ-ಕೆಎಸ್ಆರ್ ರಸ್ತೆ-ಕೆ.ಬಿ. ವೃತ್ತ-ಗಣಪತಿ ಹೈಸ್ಕೂಲ್ ರಸ್ತೆ-ಮೋಹಿನಿ ವಿಲಾಸ-ಓಂಮಹಲ್ ಜಂಕ್ಷನ್-ರಥಬೀದಿ-ಲೋವರ್ ಕಾರ್ಸ್ಟ್ರೀಟ್-ನ್ಯೂಚಿತ್ರ-ಅಳಕೆಯ ಮೂಲಕ ಕುದ್ರೋಳಿ ದೇವಸ್ಥಾನಕ್ಕೆ ಬಂದು ದೇವಳದ ಕೆರೆಯಲ್ಲಿ ಜಲಸ್ಥಂಭನಗೊಳ್ಳಲಿದೆ. ಈ ಸಮಯ ಸುಮಾರು 30,000 ಕ್ಕಿಂತಲೂ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇರುತ್ತದೆ. ಅಲ್ಲದೇ ಮೆರವಣಿಗೆಯುದ್ದಕ್ಕೂ ಜನರು ನಿಂತು ಮೆರವಣಿಗೆ ವೀಕ್ಷಿಸಲಿದ್ದಾರೆ. ಈ ಸಮಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸದರಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಸೂಚಿಸಿ ಅಧಿಸೂಚನೆ ಹೊರಡಿಸುವಂತೆ ಸಹಾಯಕ ಪೊಲೀಸ್ ಆಯುಕ್ತರು, ಸಂಚಾರ ಉಪ ವಿಭಾಗ, ಮಂಗಳೂರು ನಗರ ರವರು ಆಯುಕ್ತರಲ್ಲಿ ಕೋರಿದ್ದರು.
ಅಂತೆಯೇ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿದ ಆಯುಕ್ತ ಹಿತೇಂದ್ರ ಸಾರ್ವಜನಿಕ ಹಿತದೃಷ್ಠಿಯಿಂದ ಹಾಗೂ ವಾಹನಗಳ ಸುಗಮ ಸಂಚಾರ ದೃಷ್ಠಿಯಿಂದ ರಸ್ತೆಯಲ್ಲಿ ವಾಹನ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾಪರ್ಾಡು ಮಾಡುವುದು ಅಗತ್ಯವೆಂದು ಪರಿಗಣಿಸಿ ಕೆಲವು ಬದಲಿ ವ್ಯವಸ್ಥೆಯನ್ನು ಮಾಡಿದ್ದಾರೆ.

hitendra

1. ಕೊಟ್ಟಾರ ಚೌಕಿ ಮತ್ತು ಬಜಪೆ ಕಡೆಗಳಿಂದ ನಗರಕ್ಕೆ ಬರುವ ಎಲ್ಲಾ ತರಹದ ವಾಹನಗಳು ಕುಂಟಿಕಾನ-ಕೆ.ಪಿ.ಟಿ-ನಂತೂರು ಮುಖೇನ ನಗರ ಪ್ರವೇಶಿಸುವುದು.
2. ನಗರದಿಂದ ಕೊಟ್ಟಾರ, ಕುಂಟಿಕಾನ, ಬಜಪೆ, ಉಡುಪಿ, ಕಾರ್ಕಳ ಕಡೆಗೆ ಹೋಗುವ ಎಲ್ಲಾ ತರಹದ ವಾಹನಗಳು ಬಂಟ್ಸ್ ಹಾಸ್ಟೇಲ್ ಮೂಲಕ ನಂತೂರು ಸೇರಿ ಹೆದ್ದಾರಿ ಮುಖೇನ ಮುಂದುವರಿಯುವುದು.
3. ಮೆರವಣಿಗೆ ಆರಂಭವಾದ ಕೂಡಲೆ ಯಾ ಜನಸಂದಣಿ ಅನುಸರಿಸಿ ಅದಕ್ಕೆ ಮೊದಲೇ ನ್ಯೂಚಿತ್ರಾದಿಂದ ಕುದ್ರೋಳಿ ಕಡೆಗೆ, ಅಳಕೆ ಜಂಕ್ಷನ್ನಿಂದ ಕುದ್ರೋಳಿ ದೇವಸ್ಥಾನದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇಧಿಸಬೇಕಾಗಿದೆ. ಸದರಿ ವಾಹನಗಳು ಕಂಡತ್ಪಳ್ಳಿ-ಮಂಡಿ-ಕುದ್ರೋಳಿ-ಬೊಕ್ಕಪಟ್ಣ ಮೂಲಕ ಸಂಚರಿಸುವುದು.
4. ಮೆರವಣಿಗೆ ಮುಖ್ಯರಸ್ತೆಗೆ ಬಂದ ಕೂಡಲೇ ಲೇಡಿಹಿಲ್ ಕಡೆಯಿಂದ ಕುದ್ರೋಳಿ ಕಡೆಗೆ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
5. ಮೆರವಣಿಗೆಯು ಲೇಡಿಹಿಲ್ ಜಂಕ್ಷನ್ ಬಂದ ಕೂಡಲೇ ಉವರ್ಾ ಕಡೆಯಿಂದ ಬರುವ ಎಲ್ಲಾ ತರಹದ ವಾಹನಗಳು ಬೋಳೂರು ನಸರ್ಿಂಗ್ ಹೋಮ್ನಿಂದ ಕೋಟೆಕಣಿ ರಸ್ತೆಯಾಗಿ ಕಾಪಿಕಾಡು-ಕೆ.ಎಸ್.ಆರ್.ಟಿ.ಸಿ ಮುಖೇನ ಸಂಚರಿಸುವುದು.
6. ಮೆರವಣಿಗೆಯು ಲಾಲ್ಬಾಗ್ ತಲುಪುವಷ್ಟರಲ್ಲಿ ಕೆ.ಎಸ್.ಆರ್.ಟಿ.ಸಿ. ಕಡೆಯಿಂದ ಎಂಜಿ ರಸ್ತೆಗೆ, ಬಿಜೈ ಕಡೆಯಿಂದ ಕೆಎಸ್ಆರ್ಟಿಸಿ ಕಡೆಗೆ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಬೇಕಾಗಿದೆ. ಈ ಸಮಯ ಕುಂಟಿಕಾನ ಕಡೆಯಿಂದ ಬರುವ ವಾಹನಗಳು ಕೆ.ಎಸ್.ಆರ್.ಟಿ.ಸಿ. ವೃತ್ತದ ಬಳಿ ಎಡಕ್ಕೆ ತಿರುಗಿ ಬಿಜೈ ಮೂಲಕ ಸಂಚರಿಸುವುದು. ಅದೇ ರೀತಿ ಪಶು ಆಸ್ಪತ್ರೆ ಜಂಕ್ಷನ್ (ಕಪುಚಿನ್ ಚಚರ್್)ನಿಂದ ಕೋರಿರೊಟ್ಟಿ ಜಂಕ್ಷನ್ ಕಡೆಗೆ ಎಲ್ಲಾ ತರಹದ ವಾಹನ ಸಂಚಾರ ನಿಷೇಧಿಸಲಾಗಿದೆ.
7. ಮೆರವಣಿಗೆಯು ಪ್ರಾರಂಭವಾದ ನಂತರ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣಕ್ಕೆ ಬಂದು ಹೋಗುವ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಕೆ.ಪಿ.ಟಿ – ಕುಂಟಿಕಾನದ ಮೂಲಕವೇ ಸಂಚರಿಸುವುದು.
8. ಮೆರವಣಿಗೆಯು ಆಯಾ ಜಂಕ್ಷನ್ಗಳನ್ನು ತಲುಪುವ ಸಂದರ್ಭದಲ್ಲಿ ಎದುರಿನಿಂದ ಮತ್ತು ಕೂಡು ರಸ್ತೆಗಳಿಂದ ಬರುವ ಎಲ್ಲಾ ತರಹದ ವಾಹನಗಳನ್ನು ನಿಷೇಧಿಸಲಾಗಿದೆ.
9. ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಬೇಕಾಗಿದೆ.
10. ಮೆರವಣಿಗೆ ವೀಕ್ಷಿಸಲು ಬರುವವರು ತಮ್ಮ ವಾಹನಗಳನ್ನು ಇತರ ವಾಹನಗಳು ಮತ್ತು ಜನರ ಸಂಚಾರಕ್ಕೆ ಅಡ್ಡ್ಡಿಪಡಿಸದಂತೆ ಲಭ್ಯ ಇರುವ ಪ್ರದೇಶಗಳಲ್ಲಿ ನಿಲುಗಡೆ ಮಾಡುವುದು,

ಈ ಆದೇಶದನ್ವಯ ಸದ್ರಿ ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆ ಬಗ್ಗೆ ಅವಶ್ಯವಿರುವ ಸೂಚನಾ ಫಲಕ ಅಳವಡಿಸಲು ಹಾಗೂ ಸಂಚಾರ ನಿಯಂತ್ರಣಕ್ಕೆ ಸಿಬ್ಬಂದಿಯನ್ನು ನೇಮಕಗೊಳಿಸಲು ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ಉತ್ತರ ಉಪ ವಿಭಾಗ, ಮಂಗಳೂರು ನಗರ ಇವರು ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 116 ರ ಪ್ರಕಾರ ಆದೇಶ ಹೊರಡಿಸಿದ್ದಾರೆ

By suddi9

Leave a Reply

Your email address will not be published. Required fields are marked *