ಬೈಕ್ ಸವಾರರೇ ಎಚ್ಚರ!
ಮಂಗಳೂರು: ಇನ್ನುಮುಂದೆ ಗುಣಮಟ್ಟ ಇಲ್ಲದ ಹೆಲ್ಮೆಟ್ ಧರಿಸಿ ಬೈಕ್ ಸಂಚಾರ ನಡೆಸಿದರೆ ಸೂಕ್ತ ಕಾನೂನು ಕ್ರ,ಮ ಖಚಿತಮುಂದೆನ ತಿಂಗಳು ನವೆಂಬರ್ 1ರಿಂದ ಇದು ಜಾರಿಗೆ ಬರಲಿದೆ. ಎಂದು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವ ಬಗ್ಗೆ ಭಾರತೀಯ ಮೋಟಾರು ವಾಹನ ಕಾಯ್ದೆ-1988 ಕಲಂ : 129ರ ಪ್ರಕಾರ ದ್ವಿಚಕ್ರ ವಾಹನ ಓಡಿಸುವಾಗ ಇಂಡಿಯನ್ ಸ್ಟ್ಯಾಂಡಡ್ಸರ್್ ಬ್ಯೂರೋ ಗುಣಮಟ್ಟದ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿರುತ್ತದೆ. ಆದರೆ ಬಹಳಷ್ಟು ದ್ವಿಚಕ್ರ ವಾಹನ ಸವಾರರು ಕಳಪೆ ಗುಣಮಟ್ಟದ ಹೆಲ್ಮೆಟ್ಗಳನ್ನು ಉಪಯೋಗಿಸುತ್ತಿದ್ದು, ಇದು ಕೂಡಾ ದೇಶದಲ್ಲಿ ಹೆಚ್ಚುತ್ತಿರುವ ಮಾರಣಾಂತಿಕ ಹಾಗೂ ಮಾರಣಾಂತಿಕವಲ್ಲದ ಅಪಘಾತಗಳಿಗೆ ಪೂರಕವಾದ ಅಂಶವಾಗಿರುತ್ತದೆ. ನಮ್ಮ ತಲೆ ಇಡೀ ದೇಹದಲ್ಲಿ ಭಾರವಾದ ವಸ್ತು. ಅಪಘಾತಕ್ಕೊಳಗಾದಾಗ ಮೊದಲು ನೆಲಕ್ಕೆ ಬೀಳುವುದು ಇದೇ ಮತ್ತು ಚಿಕಿತ್ಸೆ ಮಾಡಲು ಕಷ್ಟಸಾಧ್ಯವಾದ ಭಾಗವೂ ಇದೇ ಆಗಿರುತ್ತದೆ. ಅಪಘಾತಕ್ಕೊಳಗಾಗುವ ದ್ವಿಚಕ್ರ ವಾಹನ ಸವಾರರಲ್ಲಿ ಪ್ರತಿ ಶತ 90ಕ್ಕಿಂತ ಹೆಚ್ಚು ಜನ ಹೆಲ್ಮೆಟ್ ಧರಿಸದೇ ಇರುವುದರಿಂದ ಹಾಗೂ ಕೆಳದಜರ್ೆಯ ಹೆಲ್ಮೆಟ್ ಧರಿಸುವುದರಿಂದ ಮೃತಪಡುತ್ತಿದ್ದಾರೆ. ಇದನ್ನು ಮನಗಂಡು ಕನರ್ಾಟಕ ಸರಕಾರವು ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂಬುದಾಗಿ ಅಧಿಸೂಚನೆಯನ್ನು ಹೊರಡಿಸಿಸಲಾಗಿದೆ.
ಸಕರ್ಾರದ ಅಧಿಸೂಚನೆ ಸಂಖ್ಯೆ : ಹೆಚ್ಟಿಡಿ 278 ಎಸ್ಎಸ್ಟಿ 2004 ದಿನಾಂಕ : 29-06-2006, 01-08-2006 ಮತ್ತು 04-11-2006 ರಲ್ಲಿ ಕನರ್ಾಟಕ ರಾಜ್ಯದ ಬೆಂಗಳೂರು ಮಹಾನಗರಪಾಲಿಕೆಯೂ ಸೇರಿದಂತೆ ರಾಜ್ಯದ ಇತರ ನಗರ ಪಾಲಿಕೆಗಳಾದ ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಗುಲ್ಬರ್ಗಗಳಲ್ಲಿ ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ 4151 : 1993 ಮಾಪನ ಹೊಂದಿರುವ ಹೆಲ್ಮೆಟ್ ಧರಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿರುತ್ತದೆ.
ಐಎಸ್ಐ ಮಾಪನ ಹೊಂದಿರುವ ಹೆಲ್ಮೆಟ್ಗಳು ತಲೆಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸುವಂತಿರಬೇಕು. ಅದರಲ್ಲಿ ಚಿನ್ ಸ್ಟ್ರಾಪ್ ಇರಬೇಕು. ಹಿಂದುಗಡೆ ಕುತ್ತಿಗೆಯವರೆಗೆ ರಕ್ಷಣೆ ಕೊಡುವಂತಿರಬೇಕು. ಮುಂದುಗಡೆ ಗದ್ದಕ್ಕೆ ರಕ್ಷಣೆ ಒದಗಿಸಲು ಚಿನ್ ಕಪ್ ಇರಬೇಕು. ಕಣ್ಣಿಗೆ ರಕ್ಷಣೆ ಒದಗಿಸಲು ವೈಸರ್ ಇರಬೇಕು. ಹೆಲ್ಮೆಟ್ನ ಹಿಂದುಗಡೆ ರಿಫ್ಲೆಕ್ಟರ್ ಇರಬೇಕು. ಇಂತಹ ಐಎಸ್ಐ ಮಾಪನ ಹೊಂದಿರುವ ಹೆಲ್ಮೆಟ್ಗಳನ್ನು ಧರಿಸದ ದ್ವಿಚಕ್ರ ವಾಹನ ಸವಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
