ಕುಪ್ಪೆಪದವು:ಕುಳವೂರು, ಮುತ್ತೂರು, ಮೊಗರು ಗ್ರಾಮಗಳ ರೈತರ ಬೆಳೆಗಳಿಗೆ,ಕಿಲೆಂಜಾರು ಗ್ರಾಮದ ದೊಡ್ಡಲಿಕೆ ಯಲ್ಲಿರುವ ಗುರುಪುರ ನದಿ (ಫಲ್ಗುಣಿ)ಗೆ ಕಟ್ಟಲಾಗಿರುವ ಕಿರು ಅಣೆಕಟ್ಟಿನಿಂದ ಕಾಲುವೆಯ ಮೂಲಕ ನೀರು ಹರಿಸುವ ಕಾರ್ಯಕ್ಕೆ,ಗುರುವಾರ ದೊಡ್ಡಲಿಕೆ ಆಣೆಕಟ್ಟೆಯ ಬಳಿ  ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನೀಯರ್ ಕೃಷ್ಣ ಕುಮಾರ್ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು,
IMG-20191205-WA0007ಸುಮಾರು ಐವತ್ತು ವರ್ಷದ ಹಿಂದೆ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿರುವ, ಪ್ರಸ್ತುತ ಸಣ್ಣ ನೀರಾವರಿ ಇಲಾಖೆಗೆ ಸೇರಿರುವ ಈ ಅಣೆಕಟ್ಟೆಯಿಂದ ಕುಳವೂರು, ಮುತ್ತೂರು ಗ್ರಾಮಗಳ ಮೂಲಕ  ಅಂದಾಜು ಎಂಟು ಕಿ. ಮೀಟರ್ ದೂರದ ಮುತ್ತೂರಿನ ನೊಣಲು ಎಂಬಲ್ಲಿಯವರೆಗೆ ಭ್ರಹತ್ತ್ ಕಾಲುವೆಯ ಮೂಲಕ ರೈತರ ಬೆಳೆಗಳಿಗೆ ಪ್ರತೀ ವರ್ಷ ಬೇಸಿಗೆ ಸಂಧರ್ಭದಲ್ಲಿ ನೀರು ಹರಿಸಲಾಗುತ್ತಿದೆ, ಗುರುಪುರನದಿಯ ದೊಡ್ಡಲಿಕೆ ಅಣೆಕಟ್ಟಿನ ರೈತರಿಗೆ ನೀರು ಸರಬರಾಜು ಉಸ್ತುವಾರಿ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಮೇಗಿನ  ಮನೆ,ಉಪಾಧ್ಯಕ್ಷ ಪ್ರದೀಪಕುಮಾರ ಕಡೆಗುಂಡ್ಯ  ಇಲಾಖಾ ಇಂಜಿನೀಯರುಗಳಾದ ತೃಪ್ತಿ ಶೆಟ್ಟಿ, ಆನಂದಬಂಜನ್ ಮುತ್ತೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಸತೀಶ್ ಬಳ್ಳಾಜೆ, ಪ್ರವೀಣ್ ಆಳ್ವ, ಗಂಜಿಮಠ ಪಂಚಾಯತ್ ಸದಸ್ಯರುಗಳಾದ ಸಂದೀಪ್ ಶೆಟ್ಟಿ ಮೊಗರು, ಜಯಾನಂದ ನಾಯ್ಕ್, ಶರತ್ ಕುಮಾರ್ ಶೆಟ್ಟಿ ಕಡೆಗುಂಡ್ಯ, ಶಿವರಾಜ್ ನಾರಳ, ಸೇರಿದಂತೆ ಕಾಲುವೆ ವ್ಯಾಪ್ತಿಯ ರೈತರು, ಮುಖಂಡರುಗಳು, ಜನಪ್ರತಿನಿಧಿಗಳು ಈ ಸಂಧರ್ಭದಲ್ಲಿ ಹಾಜರಿದ್ದರು.

By suddi9

Leave a Reply

Your email address will not be published. Required fields are marked *