ಕುಪ್ಪೆಪದವು: ಸಣ್ಣ ನೀರಾವರಿ ಇಲಾಖೆ ಯು, ಕುಪ್ಪೆಪದವಿನ ದೊಡ್ಡಲಿಕೆ ಎಂಬಲ್ಲಿ ನಿರ್ಮಿಸುತ್ತಿರುವ, ಸೇತುವೆ ಸಹಿತ ಅಣೆಕಟ್ಟೆಯಿಂದಾಗಿ ಮುಳುಗಡೆಯಾಗುವ ಕೃಷಿ ಭೂಮಿಗೆ ಪರಿಹಾರ ನೀಡುವಂತೆ ಇಲ್ಲಿನ ರೈತರು ಸರಕಾರವನ್ನು ಆಗ್ರಹಿಸಿದ್ದಾರೆ. ದೊಡ್ಡಲಿಕೆಯಲ್ಲಿರುವ ಕಿರು ಅಣೆಕಟ್ಟೆಯಿಂದ ಕಾಲುವೆಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನೀಯರ್ ಕೃಷ್ಣ ಕುಮಾರ್ ಅವರಲ್ಲಿ ತಮ್ಮ ಅಳಲನ್ನು ತೋಡಿಕೊಂಡ ರೈತರು, ಇಲ್ಲಿ ನಿರ್ಮಾಣವಾಗುವ ಅಣೆಕಟ್ಟೆಯಲ್ಲಿ ನಾಲ್ಕು ಮೀಟರ್ ನೀರು ಸಂಗ್ರಹ ವಾಗಲಿದ್ದು,
ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ನೀರು ನಿಲ್ಲಲಿದೆ ಇದರಿಂದ ನದಿಯ ದಂಡೆಯ ಸುಮಾರು ಎಂಟು ಎಕರೆಯಷ್ಟು ಅಡಿಕೆ, ತೆಂಗಿನ ತೋಟಗಳು ಸೇರಿದಂತೆ ಕೃಷಿ ಭೂಮಿ ಮುಳುಗಡೆಯಾಗಲಿದ್ದು, ಇದೇ ಜೀವನಾಧಾರ ವಾಗಿರುವ ನಮಗೆ ಕೃಷಿಭೂಮಿ ಮುಳುಗಡೆಯಾದರೆ ಜೀವನಸಾಗಿಸುವುದೂ ಕಷ್ಟವಾಗಲಿದೆ ಆದುದರಿಂದ ಮುಳುಗಡೆಯಾಗುವ ಕೃಷಿಭೂಮಿಗೆ ಪರಿಹಾರ ನೀಡಿ ಎಂದು ಆಗ್ರಹಿಸಿದ್ದಾರೆ.
ಈ ಸಂಧರ್ಭದಲ್ಲಿ ಹಾಜರಿದ್ದ ಮುತ್ತೂರು ಗ್ರಾ. ಪಂಚಾಯತ್ ಸದಸ್ಯರಾದ ಸತೀಶ್ ಬಳ್ಳಾಜೆ, ಪ್ರವೀಣ್ ಆಳ್ವ ಗುಂಡ್ಯ ರೈತರ ಮುಳುಗಯಾಗುವ ಕೃಷಿಭೂಮಿಯನ್ನು ಸರಕಾರ ಸ್ವಾಧೀನಪಡಿದಿಸಿಕೊಂಡು, ಸರಕಾರದ ನಿಯಮಾವಳಿಗಳ ಪ್ರಕಾರ ಭೂಮಿಯ ಮೌಲ್ಯ ವನ್ನು ರೈತರಿಗೆ ಪಾವತಿಸುವ ಬಗ್ಗೆ ಕ್ರಮಕೈಗೊಳ್ಳುವಂತೆ ಇಂಜಿನೀಯರ್ ರವರಿಗೆ ಮನವಿಮಾಡಿದರು.ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಕೃಷ್ಣ ಕುಮಾರ್ ಭರವಸೆ ನೀಡಿದರು, ರೈತರುಗಳಾದ ಜಯರಾಮ್ ಶೆಟ್ಟಿ, ಶ್ರೀಧರ್ ಶೆಟ್ಟಿ, ಗಂಗಾಧರ್ ಪೂಜಾರಿ, ದೀಪಕ್ ಶೆಟ್ಟಿ ಕುಟ್ಟೆಚಾರ್, ವಿಜಯಕುಮಾರ್ ಶೆಟ್ಟಿ ಮೇಗಿನಮನೆ ಬೊಳಿಯ ಮೊದಲಾದವರಿದ್ದರು.Attachments area
