ಮುಂಬಯಿ: ಮಂಗಳೂರು ಧರ್ಮತೋಟ ಫಜೀರು ನಿವಾಸಿ ಲೂಸಿ ಮಾರ್ಸೆಲ್ ಡಿಸೋಜಾ (89.) ಇಂದಿಲ್ಲಿ ಮಂಗಳವಾರ ವೃದ್ಧಾಪ್ಯದಿಂದ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.

ಅಪಾರ ಸಾಮಾಜಿಕ ಕಳಕಳಿ, ಧರ್ಮ ನಿಷ್ಠಾಳು ಆಗಿದ್ದ ಮೃತರು ರೆ| ಫಾ| ಪಾವ್ಲ್ ಡಿಸೋಜಾ (ವಾರಣಾಸಿ ಧರ್ಮಪ್ರಾಂತ್ಯ), ರೆ| ಫಾ| ಬೊನಿಫಸ್ ಡಿಸೋಜಾ (ಕಾರ್ಮೆಲಿತ್) ಸೇರಿದಂತೆ ಏಳು ಗಂಡು, ಮೂರು ಹೆಣ್ಣು ಮತ್ತು ಬಂಧು ಬಳಗ ಆಗಲಿದ್ದಾರೆ. ಮೃತರ ಅಂತ್ಯಕ್ರಿಯೆ (ಡಿ.05) ಗುರುವಾರ ಅವರ್ ಲೇಡಿ ಆಫ್ ಮರ್ಸಿ ಇಗರ್ಜಿ ಫಜೀರು ಇಲ್ಲಿ ನೆರವೇರಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.
