ಬಂಟ್ವಾಳ,ಸೆ.30: ಆಯುವರ್ೇದಿಕ್ ಧನ್ವಂತರಿ ವೈದ್ಯ ಪ್ರಶಸ್ತಿ ಪುರಸ್ಕೃತ, ದ.ಕ.ಜಿಲ್ಲಾ ವೈದ್ಯರ ಸಂಘದ ಉಪಾಧ್ಯಕ್ಷ, ಬಂಟ್ವಾಳದ ಹಿರಿಯ ವೈದ್ಯ ಡಾ| ನರೇಂದ್ರ ಆಚಾರ್ಯ( 78) ಸೆ. 30ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಬಂಟ್ವಾಳ ರೋಟರಿ ಕ್ಲಬ್ ಸ್ಧಾಪಕ ಸದಸ್ಯರು ಮತ್ತು ಸಂಸ್ಥೆಯಲ್ಲಿ ನೂರು ಶೇ. ಹಾಜರಾತಿ ಖ್ಯಾತಿಯನ್ನು ಹೊಂದಿದ್ದರು. ಬಂಟ್ವಾಳ ಮೆಡಿಕಲ್ ಸಂಸ್ಥೆಯ ಪೂವರ್ಾಧ್ಯಕ್ಷರು. ಬಂಟ್ವಾಳದ ಎಸ್.ವಿ.ಎಸ್.ಶಾಲೆ, ಎಸ್.ವಿ.ಎಸ್. ಕಾಲೇಜು, ಬಂಟ್ವಾಳ ಯಶವಂತ ವ್ಯಾಯಾಮ ಶಾಲೆಯ ಆಡಳಿತ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.ಹಿಂದೂ ಶವದಹನ ಸಂಸ್ಕಾರ ಸಂಘ ಬಂಟ್ವಾಳದ ಕೋಶಾಕಾರಿ.
ವಿಷದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವುದರಲ್ಲಿ ನಿಷ್ಣಾತರು. ಒಮ್ಮೆ ಅವರು ವಿಷ ಸರ್ಪದ ಕಡಿತಕ್ಕೆ ಒಳಗಾಗಿ ತನ್ನ ಒಂದು ಬೆರಳಿನ ತುದಿಯನ್ನು ಕಳೆದುಕೊಂಡಿದ್ದರು.
ಅವರ ತಂದೆ ಶುಕ್ಕಾಚಾರ್ಯರು ಆಯುವರ್ೆದಿಕ್ ಪಂಡಿತರಾಗಿದ್ದು ಔಷ ನೀಡುತ್ತಿದ್ದು ಅದನ್ನು ಮುಂದುವರಿಸಿಕೊಂಡು ಬಂಟ್ವಾಳದಲ್ಲಿ ಅವರು ಕಳೆದ ಐವತ್ತೈದು ವರ್ಷಗಳಿಂದ ಆಯುವರ್ೇದಿಕ್ ಔಷಯನ್ನು ನೀಡುತ್ತಿದ್ದು ಪಯರ್ಾಯವಾಗಿ ಶುಕ್ಕಾಚಾರ್ಯ ಎಂದೇ ಕರೆಯಲ್ಪಡುತ್ತಿದ್ದರು.
ಅವರು ಪುನಗಿನ ಬೆಕ್ಕನ್ನು ಸಾಕುತ್ತಿದ್ದು ಅದರ ರಜಸ್ಸಿನಿಂದ ಬಿಳಿತೊನ್ನು ರೋಗಕ್ಕೆ ನೀಡುತ್ತಿದ್ದ ಔಷದಿ ಪ್ರಖ್ಯಾತವಾಗಿದ್ದು ದೇಶವಿದೇಶದಿಂದ ಅವರಲ್ಲಿಗೆ ಜನರು ಬರುತ್ತಿದ್ದರು. ಬಂಟ್ವಾಳ ಶ್ರೀ ತಿರುಮಲ ವೆಂಕರಮಣ ದೇವಳದ ಆಚಾರ್ಯ ಮನೆತನದವರು.
ಮೃತರು ಪುತ್ರ ಡಾ| ನಿರಂಜನ ಆಚಾರ್ಯ ಮತ್ತು ಒಬ್ಬಳು ಪುತ್ರಿಯನ್ನು ಅಗಲಿದ್ದಾರೆ.
ಬಂಟ್ವಾಳ ರೋಟರಿ ಕ್ಲಬ್ನ ಅಧ್ಯಕ್ಷ ಯನ್. ಪ್ರಕಾಶ್ ಕಾರಂತ್, ಕಾರ್ಯದಶರ್ಿ ಸಂಜೀವ ಪೂಜಾರಿ ಗುರುಕೃಪ, ಅಸಿಸ್ಟೆಂಟ್ ಗವರ್ನರ್ ಅಶ್ವನಿ ಕುಮಾರ್ ರೈ , ಜಿಲ್ಲೆಯ ವಿವಿಧ ರೋಟರಿ ಸಂಸ್ಥೆಗಳ ಸದಸ್ಯರು ಹಾಗೂ ಸರ್ವ ಸದಸ್ಯರು ಅವರ ಮನೆಗೆ ಭೇಟಿ ನೀಡಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
