ಕುಪ್ಪೆಪದವು:  ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ, ತೀರಾ ಬಡತನದಿಂದ ಸಂಕಷ್ಟ ದಲ್ಲಿದ್ದ, ಇಲ್ಲಿನ ಕಿಲೆಂಜಾರು ಕಾಪಿಕಾಡಿನ ಇಮ್ರಾನ್ ಎಂಬವರಿಗೆ, ಕುಪ್ಪೆಪದವಿನ ಗಲ್ಫ್ ಗೈಸ್ ಸಂಘಟನೆ ಮನೆಯೊಂದನ್ನು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದೆ.
IMG-20191128-WA0001ಇಮ್ರಾನ್ ಅವರು ಅನಾರೋಗ್ಯಪೀಡಿತರಾಗಿ, ಅಂಗವಿಕಲತೆಯಿಂದ ನಡೆದಾಡಲೂ ಸಾಧ್ಯವಾಗದ ಸ್ಟಿಟಿಯಲ್ಲಿದ್ದು, ಅವರ ಮೂವರು ಮಕ್ಕಳಲ್ಲಿ, ಓರ್ವಮಗ ಕೂಡ ಅಂಗವಿಕಲತೆಯಿಂದ ಹಾಸಿಗೆಹಿಡಿದಿದ್ದಾನೆ.ಕಾಪಿಕಾಡು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ  ಇಮ್ರಾನ್ ಅವರ ಪತ್ನಿ ಮನೆಕೆಲಸ ಮಾಡಿ ತನ್ನ ಕುಟುಂಬವನ್ನು ಸಾಕುತ್ತಿದ್ದಾರೆ, ಇವರ ದಯನೀಯ ಪರಿಸ್ಥಿತಿಯನ್ನು ಗಮನಿಸಿದ ಕುಪ್ಪೆಪದವಿನ  ಗಲ್ಫ್ ಗೈಸ್ ಸಂಘಟನೆ, ಕೆಂಪುಗುಡ್ಡೆಯಲ್ಲಿದ್ದ ಸರಕಾರಿ ಜಾಗವನ್ನು, ಗ್ರಾಮಪಂಚಾಯತ್ ನಿಂದ ಪಡೆದುಕೊಂಡು, ದಾನಿಗಳು ಮತ್ತು ಸಂಘಟನೆ ಸದಸ್ಯರ ಸಹಕಾರದಿಂದ ಅಂದಾಜು ನಾಲ್ಕು ಲಕ್ಷ, ಎಪ್ಪತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ಚಿಕ್ಕದಾದ,ಸುಂದರವಾದ ಮನೆಯನ್ನು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದೆ, ಸಂಘಟನೆಯ ಈ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

By Suddi9

Leave a Reply

Your email address will not be published. Required fields are marked *