ಹದಿಹರೆಯದಲ್ಲಿ ಹೆಣ್ಣುಮಕ್ಕಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದನ್ನುತಜ್ಞ ವೈದ್ಯೆಯರಲ್ಲಿ ಕೇಳಿ ಪರಿಹರಿಸಿಕೊಳ್ಳಲು ಸಾಧ್ಯವಿದೆ. ಯಾವುದೇ ಮಾನಸಿಕ, ದೈಹಿಕ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡಾಗ ಅವುಗಳಿಗೆ ಪರಿಹಾರಕಾಣಲು ಸಾಧ್ಯವಿದೆಎಂಬುದಾಗಿಆನ್ಸ್‍ಡಾ.ಸೌಮ್ಯ ಜಿ. ಹೇಳಿದರು.

ಅವರುತುಂಬೆ ಪದವಿ ಪೂರ್ವಕಾಲೇಜಿನಲ್ಲಿ ಪ್ರೌಢಶಾಲೆ ಮತ್ತುಕಾಲೇಜು ವಿದ್ಯಾರ್ಥಿನಿಯರಿಗಾಗಿತುಂಬೆ ಪದವಿ ಪೂರ್ವಕಾಲೇಜಿನಇಂಟರ್ಯಾಕ್ಟ್‍ಕ್ಲಬ್, ರೋಟರಿಕ್ಲಬ್ ಬಂಟ್ವಾಳ ಟೌನ್ ಮತ್ತುಆನ್ಸ್‍ಕ್ಲಬ್ ಬಂಟ್ವಾಳ ಇವುಗಳು ಜಂಟಿಯಾಗಿ ಏರ್ಪಡಿಸಿದ್ದ ಕಿಶೋರಿಯರ ಹದಿಹರೆಯದ ಸಮಸ್ಯೆ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂಟ್ವಾಳ ಟೌನ್‍ರೋಟರಿಕ್ಲಬ್‍ನ ಕಾರ್ಯದರ್ಶಿ ಪಲ್ಲವಿ ಕಾರಂತ್ ಮೊದಲಿಗೆಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆನ್ಸ್ ಸೌಮ್ಯ ಜಿ., ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್. ಗಂಗಾಧರ ಆಳ್ವ ಇವರುಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ರೋಟರಿಕ್ಲಬ್‍ಟೌನ್‍ನಅಧ್ಯಕ್ಷಜಯರಾಜ್, ಸಹಕಾರ್ಯದರ್ಶಿಯಾಗಿರುವ ಮಹಮ್ಮದ್ ಹನೀಫ್, ತುಂಬೆಇಂಟರ್ಯಾಕ್ಟ್‍ಕ್ಲಬ್‍ನ ನಿರ್ದೇಶಕರಾದ ಶ್ರೀ ನವೀನ ರಾವ್ ಟಿ., ಶ್ರೀಮತಿ ಮಲ್ಲಿಕಾ ಶೆಟ್ಟಿ, ಶ್ರೀಮತಿ ಜ್ಯೋತ್ಸ್ನಾ ಮತ್ತಿತರರು ಪಾಲ್ಗೊಂಡಕಾರ್ಯಕ್ರಮದಲ್ಲಿಕುಮಾರಿ ಶ್ರೇಯಾ ನಿರೂಪಿಸಿ, ಸ್ವಾಗತಿಸಿದರು. ಕುಮಾರಿ ಮುಫೀದಾ ವಂದಿಸಿದರು.
