ಬಂಟ್ವಾಳ:  ತುಳು ಕೂಟ ಬಂಟ್ವಾಳ ಇದರ ವತಿಯಿಂದ ಬಿ.ಸಿ.ರೋಡಿನಲ್ಲಿ ಇದೇ ಮೊದಲ ಬಾರಿಗೆ ನಡೆದ ತುಳು ನೃತ್ಯ ಭಜನಾ ಸ್ಪರ್ಧೆಯಲ್ಲಿ ತಾಲೂಕಿನ ಕೊಯಿಲ ಬದನಾಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆದುಕೊಂಡಿದೆ.    ಸಜೀಪಪಡು ಕೋಟೆಕಣಿ ಶ್ರೀ ರಾಮ ಭಜನಾ ಮಂಡಳಿ ದ್ವಿತೀಯ,ಸಿದ್ದಕಟ್ಟೆ ಕೊರಿಯಾರ್ ಶ್ರೀ ಮಹಮ್ಮಾಯಿ ದೇವಿ ದೇವಸ್ಥಾನದ ಭಜನಾ ಮಂಡಳಿ ತೃತೀಯ ಸ್ಥಾನ ಪಡೆಯಿತು.ಹಾಗೆಯೇ ಅಗಸ್ತೇಶ್ವರ ನೃತ್ಯ ಭಜನಾ ತಂಡ ಕರಿಯಂಗಳ,ಗುರುಕುಲ ಕಲಾ ಕೇಂದ್ರ ಮೆಲ್ಕಾರ್ ‘ಬಿ’   ತಂಡ ಪ್ರೋತ್ಸಾಹಕರ ಬಹುಮಾನವನ್ನು ಪಡೆದುಕೊಂಡಿದೆ.
DSC_4885                                      ತುಳುಕೂಟ ಅಧ್ಯಕ್ಷ ಸುದರ್ಶನ್ ಜೈನ್ ಅವರ ಅಧ್ಯಕ್ಷತೆಯಲ್ಲಿ  ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ನಿಕಟಪೂರ್ವ ಅಧ್ಯಕ್ಷ ಎ.ಸಿ.ಭಂಡಾರಿಯವರು ವಿಜೇತರಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಜೇಶ್ ಎಲ್.ನಾಯಕ್, ಸ್ವರ್ಣೋದ್ಯಮಿ ನಾಗೇಂದ್ರ ಬಾಳಿಗಾ ಬಂಟ್ವಾಳ, ಉದ್ಯಮಿಗಳಾದ ಟಿ.ವರದರಾಜ ಪೈ,ಗಣೇಶ್ ಶೆಣೈ ಬಂಟ್ವಾಳ, ತೀರ್ಪುಗಾರರಾದ ರಾಮಕೃಷ್ಣ ಕಾಟುಕುಕ್ಕೆ, ಅರುಣಾ ರಾವ್ ಕಟೀಲು ಮತ್ತು ಕಿಶೋರ್ ಪೆರ್ಲ,ರಮೇಶ್ ನಾಯಕ್ ರಾಯಿ,                 ತುಳುಕೂಟ ಕಾರ್ಯದರ್ಶಿ ಎಚ್.ಕೆ.ನಯನಾಡು, ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಭಜನಾ ಸಮಿತಿ ಸಂಚಾಲಕ ಮಂಜು ವಿಟ್ಲ  ಮೊದಲಾದವರು ವೇದಿಕೆಯಲ್ಲಿದ್ದರು.
DSC_4908                                           ಇದೇ ವೇಳೆ ಖ್ಯಾತ ಭಜನಾ ಕೀರ್ತನೆಗಾರರಾದ ದೇವದಾಸ ಪ್ರಭು ಬಂಟ್ವಾಳ ಇವರನ್ನು ಸನ್ಮಾನಿಸಲಾಯಿತು.  ಸುಮಾರು 25 ಕ್ಕು ಹೆಚ್ಚು ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇದೇ ಮಾದಲ ಬಾರಿಗೆ ತುಳುಕೂಟ ಬಂಟ್ವಾಳ ಆಯೋಜಿಸಿದ ನೃತ್ಯ ಭಜನೆ ತುಳು ಸ್ಪರ್ಶ ದೊರೆತಿದ್ದು,ವ್ಯಾಪಕ ಪ್ರಶಂಶೆಗು ಪಾತ್ರವಾಯಿತು.ನೂರಾರು ಸಂಖ್ಯೆಯಲ್ಲಿ ಭಜನಾ ಆಸಕ್ತರು,ಕುತೂಹಲಿಗರು ಸೇರಿದ್ದರು.

 

By suddi9

Leave a Reply

Your email address will not be published. Required fields are marked *