ಕುಪ್ಪೆಪದವು :ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಬಂಡವಾಳ ಶಾಹಿಗಳ ಪರವಾಗಿ ನಿಂತು, ದುಡಿಯುವ ಬಡ ಕಾರ್ಮಿಕ ವಿರೋಧಿ ನಿಲುವುಗಳಿಂದಾಗಿ, ಕಾರ್ಮಿಕರು, ಉದ್ಯೋಗ ಕಳೆದು ಕೊಂಡು ಅತಂತ್ರ ಸ್ಥಿತಿ ತಲುಪಿದ್ದಾರೆ ಎಂದು ಕಾರ್ಮಿಕ ಮುಖಂಡ ಯೋಗೀಶ್ ಜಪ್ಪಿನಮೊಗರು ಹೇಳಿದ್ದಾರೆ.
IMG_20191124_103658ಅವರು ಆದಿತ್ಯವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ವತಿಯಿಂದ,  ಕುಪ್ಪೆಪದವು ಪಂಚಾಯತ್ ಸಭಾ ಭವನದಲ್ಲಿ ನಡೆದ, ಕುಪ್ಪೆಪದವು ವಲಯ ಮಟ್ಟದ ಕಾರ್ಮಿಕರ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು ಬಂಡವಾಳ ಶಾಹಿಗಳಿಗೆ 143 ಲಕ್ಷ ಕೋಟಿ ರೂಪಾಯಿ ನೀಡುವ ಸರಕಾರ, ದುಡಿಯುವ ಬಡಕಾರ್ಮಿಕರಿಗೆ ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ, ಸಾರ್ವಜನಿಕ ಉದ್ದಿಮೆಗಳನ್ನು ಖಾಸಾಗೀಕರಣ ಮಾಡುವ ಮೂಲಕ ಅವುಗಳಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರನ್ನು ಅತಂತ್ರ ಗೊಳಿಸಿದೆ,  ತಪ್ಪು ಆರ್ಥಿಕ ನೀತಿಗಳಿಂದ ಉತ್ಪಾದನಾ ವಲಯ ಪಾತಾಳಕ್ಕೆ ಕುಸಿದಿದ್ದು, ಕಾರ್ಮಿಕರು, ಬಡವರು ಗಂಭೀರ ಪರಿಸ್ಥಿತಿಯನ್ನೆದುರಿಸುತ್ತಿದ್ದಾರೆ, ಕೇಂದ್ರ ಸರಕಾರ ಸಾಮಾಜಿಕ ಸುರಕ್ಷಾ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದ್ದು, ಈ ಮಸೂದೆ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳನ್ನು ಮತ್ತು ಹಕ್ಕುಗಳನ್ನು  ಕಸಿದುಕೊಳ್ಳಲ್ಲಿದ್ದು, ಈ ಕರಾಳ ಮಸೂದೆಯ ವಿರುದ್ಧ ಮುಂದಿನ ಜನವರಿ 8 ರಂದು ಕಾರ್ಮಿಕರು ದೇಶವ್ಯಾಪಿ ಮುಸ್ಕರ ಹೂಡಲಿದ್ದಾರೆ ಎಂದು ಹೇಳಿದರು.ಫೆಡರೇಷನ್ ನ ಕುಪ್ಪೆಪದವು ವಲಯದ ಅಧ್ಯಕ್ಷ ಗಂಗಾಧರ ಪೂಜಾರಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು, ಸಿಐಟಿಯು ಗುರುಪುರ ವಲಯ ಕಾರ್ಯದರ್ಶಿ ನೋಣಯ ಗೌಡ,ಜಿಲ್ಲಾ  ಮುಖಂಡರು ಸದಾಶಿವದಾಸ್ ಕುಪ್ಪೆಪದವು, ಫೆಡರೇಶನ್ ನ ಕುಪ್ಪೆಪದವು ವಲಯ ಕಾರ್ಯದರ್ಶಿ ಶ್ರೀಮತಿ ವಸಂತಿ, ಸಂಮಾವೇಶವನ್ನುದ್ದೇಶಿಸಿ ಮಾತನಾಡಿದರು, ಕುಪ್ಪೆಪದವು ವಲಯದ ಅಧ್ಯಕ್ಷ ದಿನೇಶ್ ಪೂಜಾರಿ, ಮುತ್ತೂರು ವಲಯದ ಅಧ್ಯಕ್ಷ ರಾಮಣ್ಣಶೆಟ್ಟಿಗಾರ್, ಇಬ್ರಾಹಿಂ, ರಾಘವ  ಮುಂತಾದವರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *