ಬಂಟ್ವಾಳ : ತಾಲೂಕಿನ ಸಿದ್ದಕಟ್ಟೆ ಪದವಿ ಪೂರ್ವ ಕಾಲೇಜಿಗೆ ಅವಶ್ಯಕವಾಗಿರುವ ಹೆಚ್ಚುವರಿ ಕೊಠಡಿ, ಪ್ರಯೋಗಾಲಯ ಕೊಠಡಿ, ಶೌಚಾಲಯ ಸಹಿತ ವಿವಿಧ ಅಭಿವೃದ್ದಿ ಕಾಮಗಾರಿಗೆ ೧ ಕೋಟಿ ರೂ. ಸರಕಾರ ಮಂಜೂರಾತಿ ನೀಡಿದ್ದು, ಈ ವರ್ಷದೊಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಎಂದು ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಹೇಳಿದ್ದಾರೆ.

ಶನಿವಾರ ಬಂಟ್ವಾಳ ತಾ.ನ ಸಿದ್ದಕಟ್ಟೆ ಪದವಿ ಪೂರ್ವ ಕಾಲೇಜಿನ ೨೦೧೯-೨೦ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತಿ ಆಗಲಿರುವ ಉಪನ್ಯಾಸಕಿಯವರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅತಿಥಿಯಾಗಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ, ಪ್ರಭಾಕರ ಪ್ರಭು ಮಾತನಾಡಿ ದೇಶದ ಭವಿಷ್ಯ ಯುವಜನತೆಯ ಕೈಯಲ್ಲಿದ್ದು,ಭವಿಷ್ಯದ ಯುವಜನಾಂಗದ ನಿರ್ಮಾಣ ಕಾಲೇಜಿನ ಕ್ಯಾಂಪಸ್ನಲ್ಲಿ ಆಗುತ್ತಿದೆ. ಜಾತಿ ಮತ ಭೇದವಿಲ್ಲದೆ ಯುವ ಜನತೆ ವಿದ್ಯೆಯೇ ಜಾತಿ ಎಂದೂ ಮನಗಂಡು, ರಾಷ್ಟ್ರ ಪ್ರೇಮದೊಂದಿಗೆ ಧನಾತ್ಮಕವಾಗಿ ಮುಂದುವರಿದಾಗ ಭಾರತ ದೇಶ ಜಗತಿಗೆ ಮಾದರಿಯಾಗಲಿದೆ ಎಂದರು. ಇದೇ ಸಂಧರ್ಭದಲ್ಲಿ ನಿವೃತ್ತಿಯಾಗಲಿರುವ ಉಪಾನ್ಯಾಸಕಿ ವಸಂತಿ ವಿ ರವರನ್ನು ಶಾಸಕರು ಸನ್ಮಾನಿಸಲಾಯಿತು.

ಕಾಲೇಜಿಗೆ ಸಹಕಾರ ನೀಡಿದ ಸಮಿತಿ ಸದಸ್ಯರಾದ ಹೇಮಚಂದ್ರ ಗೌಡ, ನೋಣಯ್ಯ ಶೆಟ್ಟಿಗಾರ್ ಮತ್ತು ೨೦೧೮-೧೯ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕಗಳಿಸಿ ಸರಕಾರಿ ಕಾಲೇಜು ಮಟ್ಟದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿಕೊಟ್ಟ ೬ ವಿಧ್ಯಾರ್ಥಿಗಳನ್ನು ಪ್ರತಿಭಾಪುರಸ್ಕಾರದೊಂದಿಗೆ ಅಭಿನಂದಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಉದಯ ಕುಮಾರ್ ವರದಿ ವಾಚಿಸಿದರು.
ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ಶೆಟ್ಟಿ, ನಿವೃತ್ತ ಪ್ರಾಂಶುಪಾಲರು ಪದ್ಮನಾಭ ರೈ, ಮಾಜಿ ಎಪಿಎಂಸಿ ಸದಸ್ಯ ರತ್ನ ಕುಮಾರ್ ಚೌಟ, ಗ್ರಾ.ಪಂ.ಸದಸ್ಯರಾದ ಎಸ್.ಪಿ.ಶ್ರೀಧರ್, ಬೇಬಿ ಪೂಜಾರಿ, ಪದವಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸಂದೇಶ್ ಶೆಟ್ಟಿ, ನಿವೃತ್ತ ಶಿಕ್ಷಕರಾದ ಕೆ.ನಾರಾಯಣ ನಾಯಕ್, ಗೋವಿಂದ ಭಟ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಪ್ರಪುಲ್ಲ ರೈ, ಸುದೀಪ್ ಕುಮಾರ್ ಜೈನ್, ಮಂದರತಿ ಎಸ್.ಶೆಟ್ಟಿ, ವಸಂತಿ ಶೆಟ್ಟಿ ಅಚ್ಯುತ ಆಚಾರ್ಯ, ರಾಜೇಂದ್ರ ನೆಟ್ಲಾಜೆ, ಯೋಗೀಶ್ ಕರ್ಪೆ, ಸೀತಾರಾಮ ಶೆಟ್ಟಿ, ಉಮನಾಥ ನಾಯಕ್,ವಿಶ್ವನಾಥ ಶೆಟ್ಟಿಗಾರ್, ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಉಮೇಶ್ ಗೌಡ, ಕೊಯಿಲ ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು, ಉಮೇಶ್ ಅರಳ, ವಿದ್ಯಾರ್ಥಿ ನಾಯಕ ಪವನ್ರಾಜ್ ವೆದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ಉಪನ್ಯಾಸಕ ಶ್ರೀನಿವಾಸ ನಾಯಕ್ ಸ್ವಾಗತಿಸಿದರು. ಉಪನ್ಯಾಸಕ ಸಂಜಯ್ ಬಿ.ಎಸ್. ಕಾರ್ಯಕ್ರಮ ನಿರ್ವಹಿಸಿ, ಉಪನ್ಯಾಸಕ ಶೀನಪ್ಪ ಎನ್ ವಂದಿಸಿದರು.
[
