ಬಂಟ್ವಾಳ: ಇಲ್ಲಿನ ಸಜೀಪ ಮೂಡ ಗ್ರಾಮದ ಬೊಳ್ಳಾಯಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ನರ ದೌರ್ಬಲ್ಯದ ಕಾಯಿಲೆಯಿಂದ ಬಳಲುತ್ತಿರುವ ಬಾಲಕನ ಚಿಕಿತ್ಸಾ ವೆಚ್ಚಕ್ಕೆ ಸಜೀಪ ಜನಸೇವಾ ಚಾರಿಟಬಲ್ ಟ್ರಸ್ಟ್   ವತಿಯಿಂದ ಹಾಗೂ ಒಮೆನ್ ದೇಶದಲ್ಲಿ ದುಡಿಯುತ್ತಿರುವ ತುಳುನಾಡು ಆಸರೆ ವಾಟ್ಸಪ್ ಬಳಗ ಜಂಟಿಯಾಗಿ ಸಹಾಯಧನವನ್ನು ಹಸ್ತಾಂತರಿಸಿದರು.
IMG-20191123-WA0068ಬೊಳ್ಳಾಯಿ ನಿವಾಸಿ ಸೌಮ್ಯ ಗಿರೀಶ ಶೆಟ್ಟಿ ಪುತ್ರ ಹತ್ತು ವರ್ಷ ಪ್ರಾಯದ ಭವಿತ್  ಕಳೆದ ಒಂದೂವರೆ ವರ್ಷದಿಂದ ಬಳಲುತ್ತಿದ್ದಾನೆ. ಈತನಿಗೆ ಸಹಾಯಧನದ ನೆರವು ನೀಡಲಾಯಿತು.ಈ ಸಂದರ್ಭ ಯಶವಂತ ದೇರಾಜೆ, ಶ್ರೀಕಾಂತ್ ಶೆಟ್ಟಿ ಸಂಕೇಶ, ಸುಬ್ರಹ್ಮಣ್ಯಭಟ್ ಮಂಜಿನಡ್ಕ, ವಿಶ್ವನಾಥ ಬೆಳ್ಚಡ ಕೂಡೂರು, ಸುರೇಶ್ ಬೊಟ್ಟ, ಪ್ರಶಾಂತ್ ,ಭಾಸ್ಕರ ,ಲೋಹಿತ್ ಪಣೋಲಿಬೈಲು ತುಳುನಾಡು ಆಸರೆ ವಾಟ್ಸಪ್ ಬಳಗಒಮೆನ್ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *