ಬಂಟ್ವಾಳ : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಶಾಲೆಗಳ ಒಕ್ಕೂಟ(ಎ.ಐ.ಸಿ.ಎಸ್)ವು ಮಂಗಳೂರಿನ ಕಾರ್ಮೆಲ್ ಶಾಲೆಯಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂಟ್ವಾಳದ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯು ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

IMG-20191123-WA0030 (1)14ರ ವಯೋಮಿತಿಯ ಬಾಲಕರ ತಂಡ ಪ್ರಥಮ, ಬಾಲಕಿಯರ ತಂಡ ದ್ವಿತೀಯ ಮತ್ತು 17ರ ವಯೋಮಿತಿಯ ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆದು ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. 8ನೇ ತರಗತಿಯ ಇಂಚರ ಶೆಟ್ಟಿ, ಸ್ವಯಂ ಎಸ್ ರೈ ಬೆಸ್ಟ್ ಪಾಸರ್ ಪ್ರಶಸ್ತಿ, ಕ್ರಿಸ್ ಜೊಸಿ ಬ್ಯಾಪ್ಟಿಸ್ಟ್ ಬೆಸ್ಟ್ ಸ್ಮ್ಯಾಷರ್ ಪ್ರಶಸ್ತಿ ಮತ್ತು 9ನೇ ತರಗತಿಯ ಆದ್ಯ ಬನ್ನಿಂತಾಯ ಆಲ್‍ರೌಂಡರ್ ಪ್ರಶಸ್ತಿ ಪಡೆದುಕೊಂಡರು. ವಿದ್ಯಾರ್ಥಿಗಳ ಸಾಧನೆಯನ್ನು ಪ್ರಾಂಶುಪಾಲೆ ಶ್ರೀಮತಿ ರಮಾಶಂಕರ್ ಸಿ ಅಭಿನಂದಿಸಿ ಶುಭಹಾರೈಸಿದ್ದಾರೆ. ದೈಹಿಕ ಶಿಕ್ಷಣ ತರಬೇತುದಾರೆ ಶ್ರೀಮತಿ ಶ್ರುತಿಕಾ ಮತ್ತು ಚಿತ್ರಕಲಾ ಶಿಕ್ಷಕ ಹರೀಶ್ ಎಂ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

By Suddi9

Leave a Reply

Your email address will not be published. Required fields are marked *