ಬಂಟ್ವಾಳ: ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಎಸ್.ಐ. ಅವಿನಾಶ್ ಅವರು ಇಂದು ಮಧ್ಯಾಹ್ನ ರಿಪೋರ್ಟ್ ಮಾಡಿದ್ದಾರೆ.ಠಾಣಾ ಎಸ್.ಐ.ಚಂದ್ರಶೇಖರ್ ಅವರು ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೋಲೀಸ್ ಠಾಣೆಯ ಎಸ್.ಐ.ಅವಿನಾಶ್ ಅವರು ಬಂಟ್ವಾಳ ನಗರ ಠಾಣೆಗೆ ವರ್ಗಾವಣೆ ಅಗಿ ಇಂದು ಅವರು ರಿಪೋರ್ಟ್ ಮಾಡಿದ್ದಾರೆ.
ಈ ವೇಳೆ ನಗರ ಪೋಲೀಸ್ ಠಾಣಾ ಪ್ರೋಬೆಷನರಿ ಎಸ್.ಐ.ಕುಮಾರ್ ಎಸ್.ಐ.ಅವಿನಾಶ್ ಅವರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು.ಈ ಸಂಧರ್ಭದಲ್ಲಿ ಎ.ಎಸ್.ಐ.ಜಯರಾಮ್ ಹಾಗೂ ಠಾಣಾ ಸಿಬ್ಬಂದಿಗಳು ಹಾಜರಿದ್ದರು.


