ತುಮಕೂರು: ಖ್ಯಾತ ನಟ, ನಿರ್ದೇಶಕ ಉಪೇಂದ್ರ ಅವರ ಉಪೇಂದ್ರ ಚಲನಚಿತ್ರದಲ್ಲಿ ಬಳಸಲಾಗಿದ್ದ ಉಪೇಂದ್ರ ಭಾವಚಿತ್ರ ಬರೆದಿದ್ದ ಕಲಾವಿದ ಸಿದ್ದೇಶ್ ಇಂದು ಸಾವನ್ನಪ್ಪಿದ್ದರೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ದಾಸಲಕುಂಟೆ ಗ್ರಾಮದ ಸಿದ್ದೇಶ್ ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಸತತ ಎರಡು ತಿಂಗಳಿನಿಂದ ಹೊಟ್ಟೆಯಲ್ಲಿ ನೀರು ತುಂಬಿಕೊಂಡು ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದೇಶ್ ತುಮಕೂರಿನ ಸಿದ್ದಾರ್ಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು ಸ್ಪಲ್ಪ ಚೇತರಿಕೆ ಕಂಡ ಹಿನ್ನೆಲೆ ಸಿದ್ದೇಶ್ ಅವರನ್ನು ಮನೆಗೆ ಸ್ಥಳಾಂತರ ಮಾಡಲಾಗಿತ್ತು. ತಡರಾತ್ರಿ ಅನಾರೋಗ್ಯದಿಂದ ಹೊಟ್ಟೆಯಲ್ಲಿ ನೀರು ತುಂಬಿಕೊಂಡು ಸಾವನ್ನಪ್ಪಿದ್ದಾರೆ. ಉಪ್ಪಿ ಅಭಿಮಾನಿಗಳು ಕಲಾವಿದ ಸಿದ್ದೇಶ್ ಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

