ಕಟೀಲು :ಕೊಡೆತ್ತೂರು ಹುಲಿಗೆ ೫೦ ವರ್ಷ ಸಂದಿದೆ, ಆದರೆ ಇದು ಮರಿ ಇಡುವ ಹುಲಿಯಲ್ಲ ನವರಾತ್ರಿ ಹುಲಿ ತುಳುನಾಡಿನ ದಾರ್ಮಿಕ ನಂಬಿಕೆಗಳಲ್ಲ್ಲಿಹುಲಿ ವೇಷ ಪ್ರಧಾನವಾಗಿರುವ ನವರಾತ್ರಿ ಮೆರವಣಿಗೆಯೂ ಒಂದು.
ಹೌದು ಹುಲಿವೇಷ ಬರೀ ಕಲೆ ಅಷ್ಟೇ ಅಲ್ಲ. ಕರಾವಳಿಗರ ಜೀವಾಳ. ಅದು ಕೇವಲ ಕಲೆಯಾಗಿ ಉಳಿದುಕೊಂಡಿರದೆ, ಸೇವೇಯ ರೂಪವನ್ನೂ ಪಡೆದಿದೆ. ದಕ್ಷಿಣ ಕನ್ನಡದ ಪ್ರಸಿದ್ಧ ದಾರ್ಮಿಕ ಕೇಂಧ್ರ ಕಟೀಲಿನಲ್ಲಿ ಕಳೆದ ೪೯ ವರ್ಷಗಳಿಂದ ನವರಾತ್ರಿ ಮೆರವಣಿಗೆ ನಡೆದು ಕೊಂಡು ಬರುತ್ತಿದೆ ಅದುವೇ ಕೊಡೆತ್ತೂರು ನವರಾತ್ರಿ ಮೆರವಣಿಗೆ ಕೊಡೆರ್ ದ್ದ ಪಿಲಿ ಎಂದೇ ಪ್ರಖ್ಯಾತಿಯನ್ನು ಪಡೆದಿದೆ ಹೌದು, ಕೊಡೆತ್ತೂರು ನವರಾತ್ರಿ ಮೆರವಣಿಗೆಗೆ ಈ ವರ್ಷ ೫೦ರ ಸಂಭ್ರಮ ಕಂಡಿದೆ, ನಿರಂತರ ೪೯ ವರ್ಷಗಳಿಂದ ನಿರಂತರ ನಡೆದ ಈ ಹುಲಿವೇಷ ಮೆರವಣಿಗೆ ಈ ಬಾರಿ “ಸುವರ್ಣ ನವರಾತ್ರಿ ಮೆರವಣಿಗೆ, ಎಂಬ ಹೆಸರಿನಲ್ಲಿ ಬಹಳ ವಿಜ್ರಂಭಣೆಯಿಂದ ಆಚರಣೆಯಾಗಿದೆ, ಈ ದಾರ್ಮಿಕ ನಂಬಿಕೆಯು ಕೇವಲ ಕೊಡೆತ್ತೂರು ಅಥವಾ ಕಟೀಲಿಗೆ ಸೀಮಿತವಾಗಿಲ್ಲ ಈ ಕಾರ್ಯಕ್ರಮಕ್ಕಾಗಿಯೇ ಊರ ಪರಊರ ಸಾವಿರಾರು ಮಂದಿ ನೆರೆದಿದ್ದು ಕಟೀಲು ದೇವಿಯ ಸೇವೆಯಲ್ಲಿ ತಾವೂ ಬಾಗಿಯಾಗಿದ್ದಾರೆ ಎಂಬ ಸಂತೋಷ.

kodetturu huli (3) kodetturu huli (4)

kodetturu huli (2) (1)

kodetturu huli (6)

kodetturu huli (1)
ದಕ್ಷಿಣ ಕನ್ನಡದ ಪ್ರಸಿದ್ಧ ಶಕ್ತಿ ಕೇಂಧ್ರ ಕಟೀಲು. ತಾಯಿ ದುರ್ಗೆ ನೆಲೆಸಿದ ಪುಣ್ಯ ಸ್ಥಳವೇ ಈ ಕಟೀಲು. ಮಂಗಳೂರಿನಿಂದ ಸುಮಾರು ೨೯ ಕಿಲೋಮೀಟರ್ ದೂರದಲ್ಲಿರುವ ಈ ದೇವಸ್ಥಾನಕ್ಕೆ ಊರು ಪರವೂರುಗಳಿಂದ ಭಕ್ತರ ದಂಡೇ ಹರಿದು ಬರುತ್ತದೆ. ಇಂತಹ ಪುಣ್ಯ ಸ್ಥಳದಲ್ಲಿ ನಡೆಯುವ ಆಚಾರ ವಿಚಾರ, ಜನರ ನಂಬಿಕೆ, ಇದೆಲ್ಲವನ್ನು ಒಂದೇ ಬಾರಿ ಹಿಡಿದಿಡಲು ಸಾಧ್ಯವಾಗದ ಮಾತು. ಆದರೆ ಈ ಕ್ಷೇತ್ರಕ್ಕೆ ಸಂಬಂಧ ಪಟ್ಟ ಊರೊಂದು ನಡೆಸಿಕೊಂಡು ಬರುತ್ತಿರುವ ಆಚರಣೆ ನಮ್ಮನಿಮ್ಮೆಲ್ಲರ ಚಿತ್ತ ಕದಿಯುವಂತದ್ದು. ಅದುವೇ ನವರಾತ್ರಿ ಮೆರವಣಿಗೆ ಅಷ್ಟಮಿ, ಚೌತಿ, ಸಂದರ್ಭ ಹುಲಿವೇಷ ಹಾಕಿ ಮನೆ ಮನೆಗೆ ಹೋಗಿ ಕುಣಿದು ತಮ್ಮ ಸೇವೆ ಸೇವೆ ಸಲ್ಲಿಸುತ್ತಾರೆ, ಆದರೆ ನವರಾತ್ರಿ ಸಂದರ್ಭ, ಹುಲಿವೇಷ ದಾರಿಗಳು ಹೆಚ್ಚಾಗಿ ಹರಕೆ ಸಲ್ಲಿಸಿರುತ್ತಾರೆ ಅದಕ್ಕಾಗಿ ವೇಷ ಹಾಕಿ ದೇವಿಯ ಸನ್ನಿದಿಯಲ್ಲಿ ಕುಣಿದು ತಮ್ಮ ಹರಕೆಯನ್ನು ತೀರಿಸುವವರು ಇದ್ದಾರೆ. ಕೆಲವರು ಮನೆಮನೆಗೆ ತಿರುಗಾಟ ನಡೆಸುವುದು ಸಾಮಾನ್ಯ. ಆದರೆ ಕಟೀಲಿನಲ್ಲಿ ಇನ್ನೊಂದು ಸಂಪ್ರದಾಯವಿದೆ ೯ ದಿನ ನಡೆಯುವ ನವರಾತ್ರಿ ಉತ್ಸವದಲ್ಲಿ ಕಟೀಲು, ಎಕ್ಕಾರು ಮತ್ತು ಕೊಡೆತ್ತೂರಿನಿಂದ, ಹುಲಿ ವೇಷ ಮೆರವಣಿಗೆಗಳು ನಡೆಯುತ್ತದೆ, ಅದರಲ್ಲಿ ೫ ನೇ ದಿನ ಅಂದರೆ ಲಲಿತ ಪಂಚಮಿ ದಿನ ನಡೆಯುದೇ ಕೊಡೆತ್ತೂರು ನವರಾತ್ರಿ ಮೆರವಣಿಗೆ ಆದ್ರೆ ಈ
ಕೊಡೆತ್ತೂರಿನಲ್ಲಿ ಹುಲಿ ವೇಷ ಕಲೆಗೆ ಮಾತ್ರ ಸೀಮಿತವಾಗಿಲ್ಲ , ಸಂಕಟ ನಿವಾರಣೆಗೆ ಹರಕೆ ರೂಪವನ್ನು ಪಡೆದುಕೊಂಡಿದೆ. ಅಂದರೆ ಇಲ್ಲಿ ಹರಕೆ ಹೊತ್ತು ಹುಲಿ ವೇಷವನ್ನು ಹಾಕುವವರೂ ಇದ್ದಾರೆ. ಕೊಡೆತ್ತೂರು, ಕಟೀಲು ದೇವಸ್ಥಾನಕ್ಕೆ ಹತ್ತಿರದ ಸಂಭದ. ಕಟೀಲಿನಲ್ಲಿ ಯಾವುದೇ ವಿಶೇಷ ಕಾರ್ಯ ಕ್ರಮಕ್ಕೆ ಕೊಡೆತ್ತೂರು ಮತ್ತು ಅತ್ತೂರು ಗ್ರಾಮಗಳ ಪ್ರಮುಖರ ಪಾಲ್ಗೋಳುವಿಕೆಯಲ್ಲಿ ನಡೆಯುತ್ತದೆ, ಕಟೀಲಿನ ಜಾತ್ರಾ ಮಹೋತ್ಸವ ಸಂದರ್ಭ ನಡೆಯುವ ತೂಟೆದಾರದಲ್ಲಿ ಅತ್ತೂರು, ಕೊಡೆತ್ತೂರು ಭಕ್ತರಿಂದ ನಡೆಯುತ್ತದೆ, ಅದೇ ರೀತಿ ಕಟೀಲಿಗೆ ಸಂಬಂಧ ಪಟ್ಟ ಕೊಡೆತ್ತೂರು ಈ ದಾರ್ಮಿಕ ಆಚರಣೆಯನ್ನು ನಡೆಸಿಕೊಂಡು ಬರುತ್ತಿದೆ. ಕೊಡೆತ್ತೂರು ಮೆರವಣಿಗೆ ಆರಂಭವಾಗುದು ಕೊಡೆತ್ತೂರಿನ ಮೂಡುಮನೆಯಿಂದ ೪೯ ವರ್ಷಗಳ ಹಿಂದೆ ಊರ ಹಿರಿಯರ ಮುಂದಾಳತ್ವದಲ್ಲಿ ಕೊಡೆತ್ತೂರು ಮೂಡುಮನೆ ಅಂಗಳದಲ್ಲಿ ಹರಕೆ ಸೇವೆ ಪ್ರಾರಂಭವಾಯಿತು ಎನ್ನುತ್ತಾರೆ, ಕೊಡೆತ್ತೂರಿನ ಈ ಮೂಡು ಮನೆ ಲಲಿತಾ ಪಂಚಮಿಯಂದು ದೇವಸ್ಥಾನದ ಮಹತ್ವ ಪಡೆಯುತ್ತದೆ. ಇದೇ ಮನೆಯ ಅಂಗಳದಲ್ಲಿ ಹುಲಿವೇಷದಾರಿಗಳಿಗೆ ಬಣ್ಣಬಳಿಯಲಾಗುವುದು ರಾತ್ರಿ ೮ ಗಂಟೆಗೆ ಗಣಪತಿ ಸ್ವಸ್ತಿಯನ್ನಿಟ್ಟು, ಊರಸಮಸ್ತರು ಪ್ರಾರ್ಥನೆ ನೆರವೇರಿಸಿ, ಹುಲಿವೇಷದ ಪರಿಕರಗಳಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಆ ಮುಖವಾಡಗಳನ್ನು ವೇಷಧಾರಿಗಳಿಗೆ ವಿತರಿಸಲಾಗುತ್ತದೆ. ನಂತರ ವೇಷಧಾರಿಗಳು ಅದನ್ನು ದರಿಸಿ ಕೈ ಮುಗಿದು ಮನೆಯಿಂದ ಹಿಮ್ಮುಖವಾಗಿ ಚಲಿಸುತ್ತಾ ಮನೆಯಿಂದ ಹೊರ ಬಂದು ಮೊದಲ ಪ್ರದರ್ಶನ ನೀಡುತ್ತಾರೆ. ಅಲ್ಲದೆ ಸ್ತಬ್ಧ ಚಿತ್ರಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವೇಷಗಳು ಮೂಡುಮನೆ ಅಂಗಳದಲ್ಲಿ ಕುಣಿದು ಹೊರಡುದು ಇಲ್ಲಿನ ಸಂಪ್ರದಾಯ ಈ ಮೆರವಣಿಗೆಯಲ್ಲಿ ಮುಖ್ಯವಾಗಿ ಹುಲಿವೇಷವಿದ್ದರೆ, ಅಕ್ಕಪಕ್ಕ ಇನ್ನು ಕೆಲ ವೇಷಗಳು ಸಾಥ್ ಕೊಡೆತ್ತೂರು ಹುಲಿಗೆ ೫೦ ವರ್ಷ, ವಿಜ್ರಂಭಣೆಯಿಂದ ನಡೆಯದ ನವರಾತ್ರಿ ಮೆರವಣಿಗೆ ಕೊಡೆತ್ತೂರು ಹುಲಿಗೆ ೫೦ ವರ್ಷ ಸಂದಿದೆ, ಆದರೆ ಇದು ಮರಿ ಇಡುವ ಹುಲಿಯಲ್ಲ ನವರಾತ್ರಿ ಹುಲಿ ತುಳುನಾಡಿನ ದಾರ್ಮಿಕ ನಂಬಿಕೆಗಳಲ್ಲ್ಲಿಹುಲಿ ವೇಷ ಪ್ರಧಾನವಾಗಿರುವ ನವರಾತ್ರಿ ಮೆರವಣಿಗೆಯೂ ಒಂದು.
ಹೌದು ಹುಲಿವೇಷ ಬರೀ ಕಲೆ ಅಷ್ಟೇ ಅಲ್ಲ. ಕರಾವಳಿಗರ ಜೀವಾಳ. ಅದು ಕೇವಲ ಕಲೆಯಾಗಿ ಉಳಿದುಕೊಂಡಿರದೆ, ಸೇವೇಯ ರೂಪವನ್ನೂ ಪಡೆದಿದೆ. ದಕ್ಷಿಣ ಕನ್ನಡದ ಪ್ರಸಿದ್ಧ ದಾರ್ಮಿಕ ಕೇಂಧ್ರ ಕಟೀಲಿನಲ್ಲಿ ಕಳೆದ ೪೯ ವರ್ಷಗಳಿಂದ ನವರಾತ್ರಿ ಮೆರವಣಿಗೆ ನಡೆದು ಕೊಂಡು ಬರುತ್ತಿದೆ ಅದುವೇ ಕೊಡೆತ್ತೂರು ನವರಾತ್ರಿ ಮೆರವಣಿಗೆ ಕೊಡೆರ್ ದ್ದ ಪಿಲಿ ಎಂದೇ ಪ್ರಖ್ಯಾತಿಯನ್ನು ಪಡೆದಿದೆ ಹೌದು, ಕೊಡೆತ್ತೂರು ನವರಾತ್ರಿ ಮೆರವಣಿಗೆಗೆ ಈ ವರ್ಷ ೫೦ರ ಸಂಭ್ರಮ ಕಂಡಿದೆ, ನಿರಂತರ ೪೯ ವರ್ಷಗಳಿಂದ ನಿರಂತರ ನಡೆದ ಈ ಹುಲಿವೇಷ ಮೆರವಣಿಗೆ ಈ ಬಾರಿ “ಸುವರ್ಣ ನವರಾತ್ರಿ ಮೆರವಣಿಗೆ, ಎಂಬ ಹೆಸರಿನಲ್ಲಿ ಬಹಳ ವಿಜ್ರಂಭಣೆಯಿಂದ ಆಚರಣೆಯಾಗಿದೆ, ಈ ದಾರ್ಮಿಕ ನಂಬಿಕೆಯು ಕೇವಲ ಕೊಡೆತ್ತೂರು ಅಥವಾ ಕಟೀಲಿಗೆ ಸೀಮಿತವಾಗಿಲ್ಲ ಈ ಕಾರ್ಯಕ್ರಮಕ್ಕಾಗಿಯೇ ಊರ ಪರಊರ ಸಾವಿರಾರು ಮಂದಿ ನೆರೆದಿದ್ದು ಕಟೀಲು ದೇವಿಯ ಸೇವೆಯಲ್ಲಿ ತಾವೂ ಬಾಗಿಯಾಗಿದ್ದಾರೆ ಎಂಬ ಸಂತೋಷ.
ದಕ್ಷಿಣ ಕನ್ನಡದ ಪ್ರಸಿದ್ಧ ಶಕ್ತಿ ಕೇಂಧ್ರ ಕಟೀಲು. ತಾಯಿ ದುರ್ಗೆ ನೆಲೆಸಿದ ಪುಣ್ಯ ಸ್ಥಳವೇ ಈ ಕಟೀಲು. ಮಂಗಳೂರಿನಿಂದ ಸುಮಾರು ೨೯ ಕಿಲೋಮೀಟರ್ ದೂರದಲ್ಲಿರುವ ಈ ದೇವಸ್ಥಾನಕ್ಕೆ ಊರು ಪರವೂರುಗಳಿಂದ ಭಕ್ತರ ದಂಡೇ ಹರಿದು ಬರುತ್ತದೆ. ಇಂತಹ ಪುಣ್ಯ ಸ್ಥಳದಲ್ಲಿ ನಡೆಯುವ ಆಚಾರ ವಿಚಾರ, ಜನರ ನಂಬಿಕೆ, ಇದೆಲ್ಲವನ್ನು ಒಂದೇ ಬಾರಿ ಹಿಡಿದಿಡಲು ಸಾಧ್ಯವಾಗದ ಮಾತು. ಆದರೆ ಈ ಕ್ಷೇತ್ರಕ್ಕೆ ಸಂಬಂಧ ಪಟ್ಟ ಊರೊಂದು ನಡೆಸಿಕೊಂಡು ಬರುತ್ತಿರುವ ಆಚರಣೆ ನಮ್ಮನಿಮ್ಮೆಲ್ಲರ ಚಿತ್ತ ಕದಿಯುವಂತದ್ದು. ಅದುವೇ ನವರಾತ್ರಿ ಮೆರವಣಿಗೆ ಅಷ್ಟಮಿ, ಚೌತಿ, ಸಂದರ್ಭ ಹುಲಿವೇಷ ಹಾಕಿ ಮನೆ ಮನೆಗೆ ಹೋಗಿ ಕುಣಿದು ತಮ್ಮ ಸೇವೆ ಸೇವೆ ಸಲ್ಲಿಸುತ್ತಾರೆ, ಆದರೆ ನವರಾತ್ರಿ ಸಂದರ್ಭ, ಹುಲಿವೇಷ ದಾರಿಗಳು ಹೆಚ್ಚಾಗಿ ಹರಕೆ ಸಲ್ಲಿಸಿರುತ್ತಾರೆ ಅದಕ್ಕಾಗಿ ವೇಷ ಹಾಕಿ ದೇವಿಯ ಸನ್ನಿದಿಯಲ್ಲಿ ಕುಣಿದು ತಮ್ಮ ಹರಕೆಯನ್ನು ತೀರಿಸುವವರು ಇದ್ದಾರೆ. ಕೆಲವರು ಮನೆಮನೆಗೆ ತಿರುಗಾಟ ನಡೆಸುವುದು ಸಾಮಾನ್ಯ. ಆದರೆ ಕಟೀಲಿನಲ್ಲಿ ಇನ್ನೊಂದು ಸಂಪ್ರದಾಯವಿದೆ ೯ ದಿನ ನಡೆಯುವ ನವರಾತ್ರಿ ಉತ್ಸವದಲ್ಲಿ ಕಟೀಲು, ಎಕ್ಕಾರು ಮತ್ತು ಕೊಡೆತ್ತೂರಿನಿಂದ, ಹುಲಿ ವೇಷ ಮೆರವಣಿಗೆಗಳು ನಡೆಯುತ್ತದೆ, ಅದರಲ್ಲಿ ೫ ನೇ ದಿನ ಅಂದರೆ ಲಲಿತ ಪಂಚಮಿ ದಿನ ನಡೆಯುದೇ ಕೊಡೆತ್ತೂರು ನವರಾತ್ರಿ ಮೆರವಣಿಗೆ ಆದ್ರೆ ಈ ಕೊಡೆತ್ತೂರಿನಲ್ಲಿ ಹುಲಿ ವೇಷ ಕಲೆಗೆ ಮಾತ್ರ ಸೀಮಿತವಾಗಿಲ್ಲ , ಸಂಕಟ ನಿವಾರಣೆಗೆ ಹರಕೆ ರೂಪವನ್ನು ಪಡೆದುಕೊಂಡಿದೆ. ಅಂದರೆ ಇಲ್ಲಿ ಹರಕೆ ಹೊತ್ತು ಹುಲಿ ವೇಷವನ್ನು ಹಾಕುವವರೂ ಇದ್ದಾರೆ. ಕೊಡೆತ್ತೂರು, ಕಟೀಲು ದೇವಸ್ಥಾನಕ್ಕೆ ಹತ್ತಿರದ ಸಂಭದ. ಕಟೀಲಿನಲ್ಲಿ ಯಾವುದೇ ವಿಶೇಷ ಕಾರ್ಯ ಕ್ರಮಕ್ಕೆ ಕೊಡೆತ್ತೂರು ಮತ್ತು ಅತ್ತೂರು ಗ್ರಾಮಗಳ ಪ್ರಮುಖರ ಪಾಲ್ಗೋಳುವಿಕೆಯಲ್ಲಿ ನಡೆಯುತ್ತದೆ, ಕಟೀಲಿನ ಜಾತ್ರಾ ಮಹೋತ್ಸವ ಸಂದರ್ಭ ನಡೆಯುವ ತೂಟೆದಾರದಲ್ಲಿ ಅತ್ತೂರು, ಕೊಡೆತ್ತೂರು ಭಕ್ತರಿಂದ ನಡೆಯುತ್ತದೆ, ಅದೇ ರೀತಿ ಕಟೀಲಿಗೆ ಸಂಬಂಧ ಪಟ್ಟ ಕೊಡೆತ್ತೂರು ಈ ದಾರ್ಮಿಕ ಆಚರಣೆಯನ್ನು ನಡೆಸಿಕೊಂಡು ಬರುತ್ತಿದೆ. ಕೊಡೆತ್ತೂರು ಮೆರವಣಿಗೆ ಆರಂಭವಾಗುದು ಕೊಡೆತ್ತೂರಿನ ಮೂಡುಮನೆಯಿಂದ ೪೯ ವರ್ಷಗಳ ಹಿಂದೆ ಊರ ಹಿರಿಯರ ಮುಂದಾಳತ್ವದಲ್ಲಿ ಕೊಡೆತ್ತೂರು ಮೂಡುಮನೆ ಅಂಗಳದಲ್ಲಿ ಹರಕೆ ಸೇವೆ ಪ್ರಾರಂಭವಾಯಿತು ಎನ್ನುತ್ತಾರೆ, ಕೊಡೆತ್ತೂರಿನ ಈ ಮೂಡು ಮನೆ ಲಲಿತಾ ಪಂಚಮಿಯಂದು ದೇವಸ್ಥಾನದ ಮಹತ್ವ ಪಡೆಯುತ್ತದೆ. ಇದೇ ಮನೆಯ ಅಂಗಳದಲ್ಲಿ ಹುಲಿವೇಷದಾರಿಗಳಿಗೆ ಬಣ್ಣಬಳಿಯಲಾಗುವುದು ರಾತ್ರಿ ೮ ಗಂಟೆಗೆ ಗಣಪತಿ ಸ್ವಸ್ತಿಯನ್ನಿಟ್ಟು, ಊರಸಮಸ್ತರು ಪ್ರಾರ್ಥನೆ ನೆರವೇರಿಸಿ, ಹುಲಿವೇಷದ ಪರಿಕರಗಳಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಆ ಮುಖವಾಡಗಳನ್ನು ವೇಷಧಾರಿಗಳಿಗೆ ವಿತರಿಸಲಾಗುತ್ತದೆ. ನಂತರ ವೇಷಧಾರಿಗಳು ಅದನ್ನು ದರಿಸಿ ಕೈ ಮುಗಿದು ಮನೆಯಿಂದ ಹಿಮ್ಮುಖವಾಗಿ ಚಲಿಸುತ್ತಾ ಮನೆಯಿಂದ ಹೊರ ಬಂದು ಮೊದಲ ಪ್ರದರ್ಶನ ನೀಡುತ್ತಾರೆ. ಅಲ್ಲದೆ ಸ್ತಬ್ಧ ಚಿತ್ರಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವೇಷಗಳು ಮೂಡುಮನೆ ಅಂಗಳದಲ್ಲಿ ಕುಣಿದು ಹೊರಡುದು ಇಲ್ಲಿನ ಸಂಪ್ರದಾಯ ಈ ಮೆರವಣಿಗೆಯಲ್ಲಿ ಮುಖ್ಯವಾಗಿ ಹುಲಿವೇಷವಿದ್ದರೆ, ಅಕ್ಕಪಕ್ಕ ಇನ್ನು ಕೆಲ ವೇಷಗಳು ಸಾಥ್ ನೀಡುತ್ತವೆ. ನಿನ್ನೆ ನಡೆದ ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಕೀಲಿಕುದುರೆ, ಯಕ್ಷಗಾನದ ವೇಷ, ನಾನಾ ಸ್ತಬ್ಧ ಚಿತ್ರಗಳು ಮೆರವಣಿಗೆಗೆ ಕಳೆ ನೀಡಿದವು ಮೂಡುಮನೆಯಿಂದ ಪ್ರಾರಂಭವಾಗಿ ಕಟೀಲಿನಲ್ಲಿ ಸಮಾಪ್ತಿದ ಈ ಮೆರವಣಿಗೆಯಲ್ಲಿ. ದಾರಿಯುದ್ದಕ್ಕೂ ಯುವಕರ ದಂಡು ಹಾಡುತ್ತಾ ಕುಣಿಯುತ್ತಾ, ಸಾಗಿದರು, ಕೆಲ ಹುಲಿಗಳು ತೆರೆದ ವಾಹನದಲ್ಲಿ ತಮ್ಮ ಝಲಕ್ ತೋರಿದರೆ ಇನ್ನುಕೆಲ ಹುಲಿಗಳು ದಾರಿಯುದ್ದಕ್ಕೂ ಸಾಹಸ ಪ್ರದರ್ಶನ ಮಾಡಿದರೆ, ಅದರ ನಡುವೆ ಕಾಲಿಗೆ ಕೋಲು ಕಟ್ಟಿ ನಡೆವ ಹುಲಿಗಳು ವಿಶೇಷವಾಗಿ ಜನಾಕರ್ಷಣೆಗೆ ಪಾತ್ರರಾದವು, ಉರುಳುವ ಹಾರುವ ಹುಲಿಗಳನ್ನು ನೋಡಲು ಎರಡು ಕಣ್ಣು ಸಾಲದು. ಇಷ್ಟೇ ಅಲ್ಲ. . ಮೆರವಣಿಗೆ ನಡುವೆ ಸುಡು ಮದ್ದುಗಳ ಆರ್ಭಟ ನಡೆಯುತ್ತಿದ್ದವು.
ಇನ್ನು ಸ್ತಬ್ಧ ಚಿತ್ರಗಳ ಸಾಥ್ ಇಲ್ಲದಿದ್ದರೆ ಯಾವುದೇ ಮೆರವಣಿಗೆ ಸ್ವಲ್ಪ ಕಳೆಗುಂದುತ್ತದೆ. ಆದ್ರೆ ಕೊಡೆತ್ತೂರಿನಲ್ಲಿ ಆದರ ಕಥೆಯೇ ಬೇರೆ. ೧೮ ಕಿಂತಲೂ ಹೆಚ್ಚು ಸ್ತಬ್ಧ ಚಿತ್ರಗಳು ಇಲ್ಲಿ ಮೇಳೈಸುತ್ತಿತ್ತು ಒಂದೆಡೆ ಪೌರಾಣಿಕ ಕಥೆಗಳ ಸ್ತಬ್ದ್ದ ಎಲ್ಲಾರ ಗಮನ ಸೆಳೆದರೆ ಇನ್ನಿತರ ಸ್ತಬ್ದ್ದ ಚಿತ್ರಗಳು ಪ್ರೇಕ್ಷಕರ ಮನ ರಂಜಿಸಿದವು. ಎಲ್ಲಾ ಕಲೆಗಳು ಕೊನೆಯದಾಗಿ ಪ್ರದರ್ಶನ ನೀಡುದು ಕಟೀಲು ದೇವಳದಲ್ಲಿ ಹಾಕಿದ ವೇದಿಕೆಯಲ್ಲಿ ನಂತರ ಎಲ್ಲಾ ವೇಷದಾರಿಗಳು ಮತ್ತು ಊರವರು ಶ್ರೀ ದೇವಿಯ ದೇವಸ್ಥಾನದ ಮುಖ್ಯದ್ವಾರದ ಬಳಿ ಜಮಾಯಿಸುತ್ತಾರೆ. ಅಲ್ಲಿ ದೇವತಾ ತೀರ್ಥದೊಂದಿಗೆ ಆಗಮಿಸುವ ಆಸ್ರಣ್ಣರು, ತೀರ್ಥ ಪ್ರೋಕ್ಷಣೆ ಮಾಡಿ ಆ ವರ್ಷದ ಲಲಿತಾಪಂಚಮಿಯ ಮೆರವಣಿಗೆ ಸೇವೆಯನ್ನು ಸಮಾಫ್ತಿಗೊಳಿಸುತ್ತಾರೆ. ಇದೇ ವೇಳೆ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಗುತ್ತದೆ. ಈ ಎಲ್ಲಾ ಸಂಬ್ರಮವನ್ನು ನೋಡಲು ಕಟೀಲಿನ ಸಾವಿರಾರು ಜನ ಕಿಕ್ಕಿರಿದು ನಿಂತಿರುತ್ತಾರೆ. ವಿಶೇಷವೆಂದರೆ ಕೊಡೆತ್ತೂರಿನಿಂದ ಜೀವನ ಅರಸುತ್ತಾ ಬೇರೆ ರಾಜ್ಯ ಮತ್ತು ದೇಶದಲ್ಲಿರುವವರು ಈ ಹುಲಿವೇಷ ಸೇವೆಯಂದು ತಪ್ಪದೇ ಊರಿಗೆ ಬಂದು ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದು ಊರವರ ಹೆಮ್ಮೆಯ ಮಾತುಗಳು…. . ನವರಾತ್ರಿ ಮೆರವಣಿ ಎಂಬುದು ಕಟ್ಟುಕಟ್ಟಳೆಯಲ್ಲ ಇದರ ಹಿಂದೆ ದಾರ್ಮಿಕ ನಂಭಿಕೆ ಇದೆ. ಹುಲಿವೇಷವನ್ನು ಹರಕೆಗಾಗಿ ತೊಟ್ಟು, ಕುಣಿದು, ದೇವರ ಮುಂದೆ ಸೇವೆ ನೀಡಿ, ನಾವು ಮತ್ತಷ್ಡು ಉದ್ಧಾರ ವಾಗಿದೇವೆ. ಊರಿನ ಅಭಿವೃದ್ಧಿಯಾಗಿದೆ ಎಂಬ ನಂಬಿಕೆ ಇದೆ. ಅಷ್ಟಕ್ಕೂ ಈ ಹುಲಿವೇಷ ಸೇವೆ ಪ್ರಾರಂಬದ ಹಿಂದೆ, ಗ್ರಾಮದ ದೌಲತ್ತು ತೋರಿಸುವ ಪ್ರಶ್ನೆ ಅಥವಾ ಸಮೃದ್ಧಿ ತೋರುವ ಯತ್ನ ಇರುದಿಲ್ಲ. ಅಲ್ಲಿರುದು ಕೇವಲ ಸೇವಾ ಮನೋಭಾವ ಮಾತ್ರ. ಪ್ರತೀ ಬಾರಿ ಮೆರವಣಿಗೆ ಸಮಿತಿಯ ಜನರ ಕಣ್ಣಲ್ಲಿ ಕಾಣುತ್ತಿದ್ದದ್ದು ಬರೀ ಸಂಭ್ರಮ ಮಾತ್ರವಲ್ಲ. ಹಿರಿಯರು ಹಾಕಿಕೊಟ್ಟ ಹೆಜ್ಜೆಯಲ್ಲಿ ನಿರಂತರ ದೇವರ ಸೇವೆಯನ್ನು ನಾವು ಮಾಡಿದ್ದೇವೆ ಎಂಬ ಸಂತೋಷ, ಇಲ್ಲಿ ಹುಲಿವೇಷ ಧರಿಸಲು ಜಾತಿಮತಗಳ ಅಡೆತಡೆಇಲ್ಲ. ವಯಸ್ಸಿನ ಮಿತಿಯಿಲ್ಲ. ದೇವರಿಗೆ ಹರಕೆ ಕೊಡಬೇಕು. ಸೇವೆ ಮಾಡಬೇಕು ಎಂಬ ಮನೋಭಾವ ಒಂದೇ ಸಾಕು. ಮೈತುಂಬಾ ಬಣ್ಣಹಚ್ಚಿಸಿಕೊಂಡು ಸಂಭ್ರಮ ಪಡುವರು. ನಿಶಾಂತ್ ಕಿಲೆಂಜೂರು
ನೀಡುತ್ತವೆ. ನಿನ್ನೆ ನಡೆದ ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಕೀಲಿಕುದುರೆ, ಯಕ್ಷಗಾನದ ವೇಷ, ನಾನಾ ಸ್ತಬ್ಧ ಚಿತ್ರಗಳು ಮೆರವಣಿಗೆಗೆ ಕಳೆ ನೀಡಿದವು ಮೂಡುಮನೆಯಿಂದ ಪ್ರಾರಂಭವಾಗಿ ಕಟೀಲಿನಲ್ಲಿ ಸಮಾಪ್ತಿದ ಈ ಮೆರವಣಿಗೆಯಲ್ಲಿ. ದಾರಿಯುದ್ದಕ್ಕೂ ಯುವಕರ ದಂಡು ಹಾಡುತ್ತಾ ಕುಣಿಯುತ್ತಾ, ಸಾಗಿದರು, ಕೆಲ ಹುಲಿಗಳು ತೆರೆದ ವಾಹನದಲ್ಲಿ ತಮ್ಮ ಝಲಕ್ ತೋರಿದರೆ ಇನ್ನುಕೆಲ ಹುಲಿಗಳು ದಾರಿಯುದ್ದಕ್ಕೂ ಸಾಹಸ ಪ್ರದರ್ಶನ ಮಾಡಿದರೆ, ಅದರ ನಡುವೆ ಕಾಲಿಗೆ ಕೋಲು ಕಟ್ಟಿ ನಡೆವ ಹುಲಿಗಳು ವಿಶೇಷವಾಗಿ ಜನಾಕರ್ಷಣೆಗೆ ಪಾತ್ರರಾದವು, ಉರುಳುವ ಹಾರುವ ಹುಲಿಗಳನ್ನು ನೋಡಲು ಎರಡು ಕಣ್ಣು ಸಾಲದು. ಇಷ್ಟೇ ಅಲ್ಲ. . ಮೆರವಣಿಗೆ ನಡುವೆ ಸುಡು ಮದ್ದುಗಳ ಆರ್ಭಟ ನಡೆಯುತ್ತಿದ್ದವು.
ಇನ್ನು ಸ್ತಬ್ಧ ಚಿತ್ರಗಳ ಸಾಥ್ ಇಲ್ಲದಿದ್ದರೆ ಯಾವುದೇ ಮೆರವಣಿಗೆ ಸ್ವಲ್ಪ ಕಳೆಗುಂದುತ್ತದೆ. ಆದ್ರೆ ಕೊಡೆತ್ತೂರಿನಲ್ಲಿ ಆದರ ಕಥೆಯೇ ಬೇರೆ. ೧೮ ಕಿಂತಲೂ ಹೆಚ್ಚು ಸ್ತಬ್ಧ ಚಿತ್ರಗಳು ಇಲ್ಲಿ ಮೇಳೈಸುತ್ತಿತ್ತು ಒಂದೆಡೆ ಪೌರಾಣಿಕ ಕಥೆಗಳ ಸ್ತಬ್ದ್ದ ಎಲ್ಲಾರ ಗಮನ ಸೆಳೆದರೆ ಇನ್ನಿತರ ಸ್ತಬ್ದ್ದ ಚಿತ್ರಗಳು ಪ್ರೇಕ್ಷಕರ ಮನ ರಂಜಿಸಿದವು. ಎಲ್ಲಾ ಕಲೆಗಳು ಕೊನೆಯದಾಗಿ ಪ್ರದರ್ಶನ ನೀಡುದು ಕಟೀಲು ದೇವಳದಲ್ಲಿ ಹಾಕಿದ ವೇದಿಕೆಯಲ್ಲಿ ನಂತರ ಎಲ್ಲಾ ವೇಷದಾರಿಗಳು ಮತ್ತು ಊರವರು ಶ್ರೀ ದೇವಿಯ ದೇವಸ್ಥಾನದ ಮುಖ್ಯದ್ವಾರದ ಬಳಿ ಜಮಾಯಿಸುತ್ತಾರೆ. ಅಲ್ಲಿ ದೇವತಾ ತೀರ್ಥದೊಂದಿಗೆ ಆಗಮಿಸುವ ಆಸ್ರಣ್ಣರು, ತೀರ್ಥ ಪ್ರೋಕ್ಷಣೆ ಮಾಡಿ ಆ ವರ್ಷದ ಲಲಿತಾಪಂಚಮಿಯ ಮೆರವಣಿಗೆ ಸೇವೆಯನ್ನು ಸಮಾಫ್ತಿಗೊಳಿಸುತ್ತಾರೆ. ಇದೇ ವೇಳೆ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಗುತ್ತದೆ. ಈ ಎಲ್ಲಾ ಸಂಬ್ರಮವನ್ನು ನೋಡಲು ಕಟೀಲಿನ ಸಾವಿರಾರು ಜನ ಕಿಕ್ಕಿರಿದು ನಿಂತಿರುತ್ತಾರೆ. ವಿಶೇಷವೆಂದರೆ ಕೊಡೆತ್ತೂರಿನಿಂದ ಜೀವನ ಅರಸುತ್ತಾ ಬೇರೆ ರಾಜ್ಯ ಮತ್ತು ದೇಶದಲ್ಲಿರುವವರು ಈ ಹುಲಿವೇಷ ಸೇವೆಯಂದು ತಪ್ಪದೇ ಊರಿಗೆ ಬಂದು ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದು ಊರವರ ಹೆಮ್ಮೆಯ ಮಾತುಗಳು…. . ನವರಾತ್ರಿ ಮೆರವಣಿ ಎಂಬುದು ಕಟ್ಟುಕಟ್ಟಳೆಯಲ್ಲ ಇದರ ಹಿಂದೆ ದಾರ್ಮಿಕ ನಂಭಿಕೆ ಇದೆ. ಹುಲಿವೇಷವನ್ನು ಹರಕೆಗಾಗಿ ತೊಟ್ಟು, ಕುಣಿದು, ದೇವರ ಮುಂದೆ ಸೇವೆ ನೀಡಿ, ನಾವು ಮತ್ತಷ್ಡು ಉದ್ಧಾರ ವಾಗಿದೇವೆ. ಊರಿನ ಅಭಿವೃದ್ಧಿಯಾಗಿದೆ ಎಂಬ ನಂಬಿಕೆ ಇದೆ. ಅಷ್ಟಕ್ಕೂ ಈ ಹುಲಿವೇಷ ಸೇವೆ ಪ್ರಾರಂಬದ ಹಿಂದೆ, ಗ್ರಾಮದ ದೌಲತ್ತು ತೋರಿಸುವ ಪ್ರಶ್ನೆ ಅಥವಾ ಸಮೃದ್ಧಿ ತೋರುವ ಯತ್ನ ಇರುದಿಲ್ಲ. ಅಲ್ಲಿರುದು ಕೇವಲ ಸೇವಾ ಮನೋಭಾವ ಮಾತ್ರ. ಪ್ರತೀ ಬಾರಿ ಮೆರವಣಿಗೆ ಸಮಿತಿಯ ಜನರ ಕಣ್ಣಲ್ಲಿ ಕಾಣುತ್ತಿದ್ದದ್ದು ಬರೀ ಸಂಭ್ರಮ ಮಾತ್ರವಲ್ಲ. ಹಿರಿಯರು ಹಾಕಿಕೊಟ್ಟ ಹೆಜ್ಜೆಯಲ್ಲಿ ನಿರಂತರ ದೇವರ ಸೇವೆಯನ್ನು ನಾವು ಮಾಡಿದ್ದೇವೆ ಎಂಬ ಸಂತೋಷ, ಇಲ್ಲಿ ಹುಲಿವೇಷ ಧರಿಸಲು ಜಾತಿಮತಗಳ ಅಡೆತಡೆಇಲ್ಲ. ವಯಸ್ಸಿನ ಮಿತಿಯಿಲ್ಲ. ದೇವರಿಗೆ ಹರಕೆ ಕೊಡಬೇಕು. ಸೇವೆ ಮಾಡಬೇಕು ಎಂಬ ಮನೋಭಾವ ಒಂದೇ ಸಾಕು. ಮೈತುಂಬಾ ಬಣ್ಣಹಚ್ಚಿಸಿಕೊಂಡು ಸಂಭ್ರಮ ಪಡುವರು.

ನಿಶಾಂತ್ ಕಿಲೆಂಜೂರು

By suddi9

Leave a Reply

Your email address will not be published. Required fields are marked *