ಬಂಟ್ವಾಳ : ಪಂಜಿಕಲ್ಲು ಗ್ರಾ.ಪಂ.ನಲ್ಲಿ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ಮಂಗಳವಾರ ದಡ್ಡಲಕಾಡು ಶಾಲೆಯಲ್ಲಿ ಶಾಂತಯುತ ಮತದಾನ ನಡೆಯಿತು. ಚುನಾವಣಾಧಿಕಾರಿಕಾರಿಯಾಗಿದ್ದ ಎಂಜಿನಿಯರ್ ಮಹೇಶ್ ಹಾಗೂ ಸಹಾಯಕ ಚುನಾವಣಾಧಿಕಾರಿ ಶಿಕ್ಷಕ ಕಮಲಾಕ್ಷ ಅವರು ಸೇರಿದಂತೆ ಚುನಾವಣಾ ಸಿಬಂದಿ ಮತದಾನ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿದರು.

1211ks1a ph

1211ks1 ph
ಪೊಲೀಸ್ ಸಿಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಸನ್ನ ಅವರು ಮತಗಟ್ಟೆಗೆ ಭೇಟಿ ನೀಡಿ ಶಾಂತಿಯುತ ಮತದಾನದ ಕುರಿತು ಪರಿಶೀಲಿಸಿದರು. ಗ್ರಾ.ಪಂ.ನ ತೆರವಾದ ಒಂದು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರವೀಣ ಡಿ.ಸಪಲ್ಯ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸುರೇಶ್ ಜೆ.ಪೂಜಾರಿ ಅವರು ಕಣದಲ್ಲಿದ್ದು, ಎರಡೂ ಪಕ್ಷಗಳ ಪ್ರಮುಖರು ಕೂಡ ಮತಗಟ್ಟೆಯ ಹೊರಭಾಗದಲ್ಲಿ ಕೊನೆ ಕ್ಷಣ ತಮ್ಮ ಅಭ್ಯರ್ಥಿಯ ಪರ ಮತ ಚಲಾಯಿಸುವಂತೆ ಮತದಾರರ ಮನವೊಲಿಸುವ ದೃಶ್ಯ ಕಂಡು ಬಂತು.

1211ks1b ph

ಪೋಟೊ: ಮತದಾರರು ಸರತಿಯಲ್ಲಿ ನಿಂತು ಮತ ಚಲಾಯಿಸಿದರು. ೯೪ರ ಹರೆಯದ ಲಿಂಗಪ್ಪ ದಡ್ಡಲಕಾಡು ಅವರು ವೀಲ್‌ಚೇರ್ ಮೂಲಕ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

By Suddi9

Leave a Reply

Your email address will not be published. Required fields are marked *