ಬಂಟ್ವಾಳ: ಬಿ.ಸಿ.ರೋಡಿನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘ ಹಾಗೂ ಬಂಟ್ವಾಳ ಲಯನ್ಸ್ ಕ್ಲಬ್ ನ ಸಹಯೋಗದಲ್ಲಿ “ವಿದ್ಯಾರ್ಥಿಗಳ ಭವಿಷ್ಯ ಮಾರ್ಗದರ್ಶನ” ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು. ಲಯನ್ಸ್ ಕ್ಲಬ್ ನ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ ಕಾರ್ಯಕ್ತಮವನ್ನು ಉದ್ಘಾಟಿಸಿಶುಭಹಾರೈಸಿದರು.
ಮಂಗಳೂರು ಮನಶ್ಶಾಂತಿ ಕನ್ಸ್ ಲ್ಟಿಂಗ್ ರಿಸಚ್೯ ಹಾಗೂ ಟ್ರೈನಿಂಗ್ ಸೆಂಟರಿನ ನಿರ್ದೇಶಕರಾದ ರಮಿಲಾ ಶೇಖರ್ ಅವರುಸಂಪನ್ಮೂಲ ವ್ಯಕ್ತಿಯಾಗಿ ಭಾಹವಹಿಸಿ ಮಾರ್ಗದರ್ಶನ ನೀಡಿದರು. ಲಯನ್ಸ್ ಕ್ಲಬ್ ನ ಉಪರಾಜ್ಯಪಾಲ ವಸಂತ ಶೆಟ್ಟಿ,ಕೋಆರ್ಡಿನೇಟರ್ ಉಮೇಶ್ ಆಚಾರ್,ಕೋಶಾಧಿಕಾರಿ ದೇವಿಕಾ ದಾಮೋದರ್,ಶಾಲಾ ಆಡಳಿತಾಧಿಕಾರಿ ಕೆ.ಮಹಾಬಲ ಆಳ್ವ,ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪಿ.ಕಿಶೋರ್ ಭಂಡಾರಿ,ಗೌರವಾಧ್ಯಕ್ಷ ಅಪ್ಪಯ್ಯ ಶೆಟ್ಟಿ,ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯರಾದ ವಿದ್ಯಾ ಉಪಸ್ಥಿತರಿದ್ದರು.ಲಯನ್ಸ್ ಕ್ಲಬ್ ನ ಪದಾಧಿಕಾರಿಗಳಾದ ಪುಪ್ಪರಾಜ ಶೆಟ್ಟಿ,ಲಕ್ಷ್ಮಣ್,ವಸಂತಿ,ಯಲ್ ಶೆಟ್ಟಿ,ಅನಿತಾ ಶೆಟ್ಟಿ,ಶಿಕ್ಷಕ-ರಕ್ಷಕ ಸಂಘದ ಪಾದಾಧಿಕಾರಿಗಳು ಹಾಜರಿದ್ದರು.ಅಧ್ಯಾಪಕಿ ಪವಿತ್ರ ಸ್ವಾಗತಿಸಿದರು.ಶಶ್ ಮಿತಾ ವಂದಿಸಿದರುನೀತಾ ಕಾರ್ಯಕ್ರಮ ನಿರೂಪಿಸಿದರು.
