ಶ್ರೀರಾಮ ವಿದ್ಯಾಸಂಸ್ಥೆಗಳು ಫರಂಗಿಪೇಟೆ ಯಲ್ಲಿ ಪೋಷಕರ ಸಮಾವೇಶ ಸಮಾರಂಭ ದ ಅಧ್ಯಕ್ಷತೆ ಯನ್ನು ಫರಂಗಿಪೇಟೆ ಎಜುಕೇಶನ್ ಸೊಸೈಟಿ ಯ ಅಧ್ಯಕ್ಷ ರಾದಶ್ರೀ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ವಹಿಸಿದ್ದರು.ಮುಖ್ಯ ಅತಿಥಿ ಗಳಾಗಿ ಶಾಲಾಭಿವೃದ್ಧಿ ಮಂಡಳಿಯ ಅಧ್ಯಕ್ಷ ರಾದ ಶ್ರೀ ಎ ಕೆ ಜಯರಾಮ್ ಶೇಖ ರವರು ಪೋಷಕರ ಪಾತ್ರ ವನ್ನು ವಿಜ್ಞಾನಿ ಥಾಮಸ್ ಅಳ್ವ ಎಡಿಸನ್ ತಾಯಿ ಪಾತ್ರವನ್ನು ಉಲ್ಲೇಖಿಸಿ ಸ್ಫೂರ್ತಿ ದಾಯಕ ಭಾಷಣ ನೀಡಿದರು.

ಸಮಾವೇಶ ದಲ್ಲಿ ಶಿಕ್ಷಕಿ ಶ್ರೀಮತಿ ತನ್ಸೀರಾ ಪ್ರಾಥಮಿಕ ವಿಭಾಗ ದಿಂದ ಶ್ರೀಮತಿ ಮೀನಾಕ್ಷಿ ಹಾಗೂ ಪ್ರೌಢ ಶಾಲಾ ವಿಭಾಗದಿಂದ ಶಿಕ್ಷಕಿ ಶ್ರೀಮತಿ ಸುಕನ್ಯಾ ವರದಿ ವಾಚಿಸಿದರು. ಹಿರಿಯ ಶಿಕ್ಷಕರಾದ ಶ್ರೀ ದೇವದಾಸ ಕೆ ಆರ್ ಕಾರ್ಯಕ್ರಮದ ವಿಷಯ ಪ್ರಸ್ತಾವನೆಗೈದು, ಮುಖ್ಯ ಶಿಕ್ಷಕರಾದ ಶ್ರೀಮತಿ ಶ್ರೀವಿದ್ಯಾ. ಕೆ ಹಾಗೂ ಸಹ ಶಿಕ್ಷಕರಾದ ಶ್ರೀ ಜಯಕುಮಾರ್ ರವರು ಶೈಕ್ಷಣಿಕ ಮಾಹಿತಿ ನೀಡಿದರು. ಪೋಷಕರಾದ ಶ್ರೀಮತಿ ಜಯಶ್ರೀ ಉದಯಕುಮಾರ್, ಶ್ರೀ ಹರೀಶ್ ಕುಮಾರ್, ಶ್ರೀಮತಿ ಪದ್ಮಾವತಿ, ಶ್ರೀಮತಿ ಝಪಾಳಾ, ಶ್ರೀಮತಿನಮ್ರತಾ, ಶ್ರೀಮತಿ ಮುಮ್ತಾಜ್ ರವರು ಮಕ್ಕಳ ಕಲಿಕಾ ದೃಷ್ಟಿ ಯಿಂದ ಸಲಹೆ ನೀಡಿದರು.
ಶಾಲಾ ಮಕ್ಕಳು ಪ್ರಾರ್ಥಿಸಿದರು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೈಲಾ ರವರು ಸ್ವಾಗತಿಸಿದರು ಹಿರಿಯ ಶಿಕ್ಷಕ ಶ್ರೀ ಬಾಲಕೃಷ್ಣ ಕೆ ರವರು ಧನ್ಯವಾದವಿತ್ತರು. ಶ್ರೀಮತಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.
