ಬಂಟ್ವಾಳ: ಆರು ಗ್ರಾಮ ವ್ಯಾಪ್ತಿಯ ಸರ್ವಋತು ಜಲಪೂರಣ ೧೯.೧೮ ಕೋಟಿ ರೂ. ವೆಚ್ಚದ ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ನ.8 ರಂದು ಲೋಕಾರ್ಪಣೆಗೊಳ್ಳಲಿದೆ  ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.ಮಂಗಳವಾರ ಯೋಜನೆ ಅನುಷ್ಠಾನದ ನೇತ್ರಾವತಿ ನದಿ ಕಡೇಶ್ವಾಲ್ಯ ನೀರೇತ್ತುವ ಸ್ಥಾವರ, ಪೆರಾಜೆ ಗ್ರಾಮದ ಗಡಿಯಾರ ನೀರು ಸಂಗ್ರಹಣಾ ಮತ್ತು ಶುದ್ಧಿಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಣಿ ಬಹುಗ್ರಾಮ ಸರ್ವಋತು ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ 60-4೦ ರಂತೆ ಕ್ರಮವಾಗಿ  ಅನುದಾನದ ಪಾಲಿದೆ ಎಂದರು.IMG-20191105-WA0056

ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು, ಕಡೇಶ್ವಾಲ್ಯ, ಬರಿಮಾರು ಗ್ರಾಮದಲ್ಲಿನ ಈಗಿರುವ ಜನಸಂಖ್ಯೆಯನ್ನು ಗಮನಿಸಿಕೊಂಡು ಯೋಜನೆ ರೂಪಿಸಲಾಗಿದೆ ಎಂದ ಶಾಸಕರು ಯೋಜನೆಯ ಪ್ರಗತಿ ಹಂತದಲ್ಲಿ ೨. ೭೨ ಕೋಟಿ ರೂ. ಕೊರತೆ ಅನುದಾನವನ್ನು ಸಂಬಂಧಪಟ್ಟ ಸಚಿವರಲ್ಲಿ ಮಾತುಕತೆ ನಡೆಸಿ ಮಂಜೂರು ಮಾಡಿಸಲಾಗಿದೆ. ಹೆಚ್ಚುವರಿ ಜನವಸತಿ ಮತ್ತು ಗ್ರಾಮಗಳ ಸೇರ್ಪಡೆಯನ್ನು ಕೂಡಾ ಮಾಡಲಾಗಿದೆ ಎಂದರು. ರಾಜ್ಯದ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಯೋಜನೆಯನ್ನು ಉದ್ಘಾಟಿಸಲಿದ್ದು,

ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಜನ ಪ್ರತಿನಿಧಿಗಳ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ರಾಜೇಶ್ ನಾಯ್ಕ್ ಅವರು ಸ್ಥಾವರಕ್ಕೆ  ಭೇಟಿ  ನೀಡಿದ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಬಂಟ್ವಾಳ ಉಪವಿಭಾಗ ಸಹಾಯಕ ಕಾ.ನಿ. ಇಂಜಿನಿಯರ್ ಮಹೇಶ್, ಜ್ಯೂ.ಇಂಜಿನಿಯರ್ ಜಗದೀಶ್, ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ಮಾಣಿ ಗ್ರಾ.ಪಂ.ಸದಸ್ಯ ನಾರಾಯಣ ಶೆಟ್ಟಿ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ, ಕಡೇಶ್ವಾಲ್ಯ ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ ಶೆಟ್ಟಿ, ಸ್ಥಳೀಯರಾದ ವಿಧ್ಯಾದರ ರೈ ಕಡೇಶ್ವಾಲ್ಯ, ಗಣೇಶ್ ರೈ ಮಾಣಿ, ಪುಷ್ಪರಾಜ ಶೆಟ್ಟಿ, ಹಿರಿಯ ಸಹಕಾರಿ ನಾರಾಯಣ ಸಪಲ್ಯ,ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ  ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *