ಉಡುಪಿ : ಆರೋಗ್ಯ ಜೀವನ ನಮ್ಮದಾಗಬೇಕಾದರೆ ನಿಯಮಿತವಾದ ಅಹಾರ, ವ್ಯಾಯಾಮ ಮತ್ತು ಜೀವನ ಪದ್ದತಿ ರೂಡಿಸಿಕೊಳ್ಳಬೇಕು ಎoದು ಭಾರತೀಯ ವೈದ್ಯ ಸಂಘದ ಉಡುಪಿ ಕರಾವಳಿ ಅಧ್ಯಕ್ಷ ಡಾ||ಉಮೇಶ್ ಪ್ರಭು ಹೇಳಿದರು.
ಅವರು ನ.3ರಂದು ಕಲ್ಯಾಣಪುರ ಬಲ್ಲಾಳ ಹೆಲ್ತ್ ಸೆಂಟರ್ ನಲ್ಲಿ ನಡೆದ ಮೂಳೆ ಸಾಂದ್ರತೆ, ಮಧುಮೇಹ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ಅಂಬಲಪಾಡಿ ದೇವಳದ ಧಮ೯ದಶಿ೯ ಡಾ|| ವಿಜಯ ಬಲ್ಲಾಳ, ಮೂಳೆ ತಜ್ಞರಾದ ಡಾ|| ಅಜು೯ನ್ ಬಲ್ಲಾಳ, ಡಾ||ಶೃತಿ ಬಲ್ಲಾಳ , ಕಟ್ಟಡದ ಮಾಲಕರಾದ ಜಾನ್ ಕೆ ಮುಂತಾದವರಿದ್ದರು. ರಾಘವೇಂದ್ರ ಕವಾ೯ಲು ನಿರೂಪಿಸಿದರು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದರು
Attachments area

