ಬಂಟ್ವಾಳ: ಕಿವಿಗಡಚ್ಚುವ ಡಿಜೆ ಸೌಂಡ್, ಮದ್ಯಪಾನದ ಮೋಜು ಇದು ಇತ್ತೀಚಿನ ದಿನಗಳಲ್ಲಿ ಮದುವೆಯ ಮುನ್ನ ನಡೆಯುವ ಮದರಂಗಿ ಶಾಸ್ತ್ರದಲ್ಲಿ ಕಂಡು ಬರುವ ಸಾಮಾನ್ಯು ದೃಶ್ಯ. ಇದರಿಂದಾಗಿ ಅದೇಷ್ಟೋ ಮದುವೆ ಸಮಾರಂಭಗಳು ಕಳಾಹೀನವಾದ ಉದಾಹರಣೆಗಳಿವೆ, ಕುಡಿದ ಮತ್ತಿನಲ್ಲಿ ಅನಾಹುತಗಳನ್ನು ತಂದುಕೊಂಡ ನಿದರ್ಶನಗಳಿವೆ. ಇದಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬಂಟ್ವಾಳದ ಅಜೆಕಲ ನಿವಾಸಿ ಹರೀಶ್ ಸಾಲ್ಯಾನ್ ಅವರು ತಮ್ಮ ಮದುವೆಯ ಮದರಂಗಿ ಶಾಸ್ತ್ರವನ್ನು ಮದ್ಯಪಾನ ಮುಕ್ಯವಾಗಿ, ಡಿಜೆ ಸೌಂಡ್ ರಹಿತವಾಗಿ ಮಾಡಿ ಗಮನ ಸೆಳೆದಿದ್ದಾರೆ. ವಿಶೇಷವೆಂದರೆ ಇದೇ ಮದರಂಗಿ ಶಾಸ್ತ್ರದ ವೇದಿಕೆಯಲ್ಲಿ ಬಂಟ್ವಾಳ ಯುವವಾಹಿನಿ ಘಟಕದ ಸದಸ್ಯರು ಸಹಿತ 20 ಮಂದಿ ತರುಣರು ತಮ್ಮ ಮದುವೆಯ ಮೆಹಂದಿ ಶಾಸ್ತ್ರವನ್ನು ಮದ್ಯಮುಕ್ತವಾಗಿ ನೆರೆವೇರಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ.

ಬಂಟ್ವಾಳ ಯುವವಾಹಿನಿಯ ಸದಸ್ಯನಾಗಿರುವ ಹರೀಶ್ ಸಾಲ್ಯಾನ್ ತಮ್ಮ ಮದರಂಗಿ ಶಾಸ್ತ್ರವನ್ನು ಮದ್ತಮುಕ್ತವಾಗಿ ಮಾಡಬೇಕೆನ್ನುವ ಸಂಕಲ್ಪ ತೊಟ್ಟಿದ್ದರು. ಅದರಂತೆ ಬುಧವಾರ ಸಂಜೆ ನಡೆದ ಮದರಂಗಿ ಕಾರ್ಯಕ್ರಮದಲ್ಲಿ ತನ್ನ ಇಚ್ಛೆಯಂತೆ ಮದ್ಯಮುಕ್ತ ಸಮಾರಂಭ ನಡೆಸಿದ್ದರು. ಬಂಟ್ವಾಳ ಯುವವಾಹಿನಿ mಘಟಕ ಹರೀಶ್ ಅವರ ಆಸೆಗೆ ಬೆನ್ನೆಲುಬಾಗಿ ನಿಂತಿದ್ದಲ್ಲದೆ ಯುವವಾಹಿನಿಯ ತರುಣರು ಕೂಡ ತಮ್ಮ ಮದುವೆಯ ಮದರಂಗಿ ಶಾಸ್ತ್ರವನ್ನು ಮದ್ಯಮುಕ್ತವಾಗಿ ಮಾಡುವ ಸಂಕಲ್ಪ ಕೈಗೊಂಡರು.

HARISH (1)

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಸಂಕಲ್ಪ ಪ್ರತಿಜ್ಞೆ ಬೋಧನೆಗೈದರು. ಮೂಡುಬಿದರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಆಶಯ ನುಡಿಗಳನ್ನಾಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಪ್ರೇಮನಾಥ್ ಪ್ರಾಸ್ತವಿಕವಾಗಿ ಮಾತನಾಡಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ತನ್ನ ಮದುವೆ ಮದರಂಗಿ ಶಾಸ್ತ್ರದಿಂದಲೇ ಸಮಾಜ ತಿದ್ದುವ ಕೈಂಕರ್ಯಕ್ಕೆ ಮುನ್ನುಡಿ ಬರೆಯ ಬೇಕೆನ್ನುವ, ಮದ್ಯಪ್ರಿಯ ಯುವಜನರಿಗೆ ಮದ್ಯಮುಕ್ತರಾಗುವಂತೆ ಪ್ರೇರಣೆ ನೀಡ ಬೇಕೆನ್ನುವ ಹರೀಶ್ ಸಾಲ್ಯಾನ್ ಅಭಿಲಾಷೆಗೆ ಬಂಧು ಮಿತ್ರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೂ ಅವಕಾಶ ನೀಡಲಾಯಿತು. ಯುವವಾಹಿನಿ ಯುವ ಮನಸ್ಸುಗಳ ಪ್ರೇರಣೆಯ ದಾರಿ ದೀಪವಾಗಿದೆ : ನರೇಶ್ ಕುಮಾರ್ ಸಸಿಹಿತ್ಲು ಸಮಾಜದಲ್ಲಿ ಯುವಕರು ದಾರಿ ತಪ್ಪುತ್ತಿದ್ದಾರೆ…ಸರಿದಾರಿಗೊಯ್ಯುವ ಪ್ರಯತ್ನ ಮಾಡಬೇಕು ಎಂಬ ಸೊಗಸಾದ ಮಾತುಗಳು ಕೇವಲ ಭಾಷಣ ಬಿಗಿಯುವ ಭಾಷಣಕಾರರ ಭಾಷಣಕ್ಕೆ ಮಾತ್ರ ಸೀಮಿತವಾಗಿ ಸಾರ್ವಜನಿಕರು ಅವರ ಭಾಷಣವನ್ನು ಸಭೆಯಲ್ಲಿ ಕುಳಿತು ಮೂಕಪ್ರೇಕ್ಷಕರಾಗಿ ಕೇಳುವ ಸನ್ನಿವೇಶಗಳೇ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ ಅದಕ್ಕೆ ಬದಲಾಗಿ ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯ ಹರೀಶ್ ಸಾಲ್ಯಾನ್ ಅಜಕಲ ರವರb ಮದುವೆಯ ಮದರಂಗಿ ಸಮಾರಂಭದ ಮದರಂಗಿಯ ಮಂಟಪವನ್ನೇರಿ ಸಮಾಜವನ್ನು ತಿದ್ದಿ ಸರಿದಾರಿಗೊಯ್ಯಲು ಶುಭಕಾರ್ಯಗಳನ್ನು ಮದ್ಯವರ್ಜಿತವನ್ನಾಗಿಸಲು ಪ್ರತಿಜ್ಞೆ ಸ್ವೀಕರಿಸಿ ಸಮಾಜದ ಬದಲಾವಣೆಗೆ ಪಣತೊಟ್ಟ ಮಾದರಿ ಯುವಕರು ಸಭೆಯಲ್ಲಿ ಆಸೀನರಾಗಿರುವವರನ್ನು ಮೂಕಪ್ರೇಕ್ಷಕರನ್ನಾಗಿಸಿದ ದೃಶ್ಯ ಅಪರೂಪದ ಘಟನೆಯಾದರೂ ಯುವವಾಹಿನಿಯ ಯುವಮನಸ್ಸುಗಳು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ಕು ಮಾರ್ ಸಸಿಹಿತ್ಲುರವರಿಂದ 'ಸಂಕಲ್ಪ ಪ್ರತಿಜ್ಞಾ ಬೋಧನೆ' ಯನ್ನು ಸ್ವೀಕರಿಸಿ ಸಮಾಜವನ್ನು ಬದಲಾವಣೆಯ ಹಾದಿಯಲ್ಲಿ ಮುನ್ನಡೆಸಲು ಸಾರಥಿಯಾದುದು ಶ್ಲಾಘನೀಯ. ಈ ಸಾರಥಿಗಳು ಇಡೀ ಯುವವಾಹಿನಿಗೆ ಮಾದರಿ.ಯುವವಾಹಿನಿ ಬಂಟ್ವಾಳಘಟಕದ ಸದಸ್ಯರು ನಮಗೆಲ್ಲರಿಗೂ ಪ್ರೇರಕರು.ಸಮಾಜದೆಲ್ಲೆಡೆ ಇಂತಹ ಕಾರ್ಯಗಳು ಬ್ರಹ್ಮಶ್ರೀ ನಾರಾಯಣಗುರುಗಳ ಆಶೀರ್ವಾದದಿಂದ ನಿರಂತರವಾಗಿ  ನಡೆದು ಕೊಂಡು ಬರಲಿ ಎಂದರು.

By suddi9

Leave a Reply

Your email address will not be published. Required fields are marked *