ಬಂಟ್ವಾಳ  : ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿ “ಎಂ.ಆರ್.ಗೌಡ ಚಾರಿಟೇಬಲ್ ಟ್ರಸ್ಟ್(ರಿ)” ಇದರ ವತಿಯಿಂದ ನೂತನವಾಗಿ ನಿರ್ಮಾಣವಾದ “ಮಧ್ವ ಪ್ಯಾಲೇಸ್” ಎಂಬ ಸಮುದಾಯ ಭವನವನ್ನು ಅಕ್ಟೋಬರ್ 28 ರಂದು ಬಂಟ್ವಾಳ ಕ್ಷೇತ್ರದ ಶಾಸಕರಾದ ಶ್ರೀ ಉಳಿಪಾಡಿ ರಾಜೇಶ್ ನಾೈಕ್ ದೀಪ ಬೆಳಗಿಸಿ ಲೋಕಾರ್ಪಣೆಗೊಳಿಸಿ ಗ್ರಾಮೀಣ ಪ್ರದೇಶದಲ್ಲಿ ಸಮುದಾಯ ಭವನದ ಅಗತ್ಯತೆಯ ಬಗ್ಗೆ ತಿಳಿಸಿದರು. ಆದಿಚುಂಚನಗಿರಿ ಶಾಖಾಮಠ ಮಂಗಳೂರು ಇಲ್ಲಿಯ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಲಯನ್ ಜಿಲ್ಲಾ ಗವರ್ನರ್ ಲಯನ್ ರೊನಾಲ್ಡ್ ಗೋಮ್ಸ್ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.

WhatsApp Image 2019-11-02 at 12.49.52 PM

ಕಾವಳಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ ಪ್ರಮೋದ್ ಕುಮಾರ್ ರೈ,ಉಪಾಧ್ಯಕ್ಷರಾದ ಶ್ರೀಮತಿ ಭವಾನಿ ಶ್ರೀಧರ ಪೂಜಾರಿ, ಸದಸ್ಯರಾದ ಶ್ರೀ ಚಂದ್ರಶೇಖರ ಕರ್ಣ, ಬಂಟ್ವಾಳ ತಾಲೂಕು ಗೌಡ ಸಂಘದ ಅಧ್ಯಕ್ಷರಾದ ಶ್ರೀ ಮೋಹನ ಗೌಡ ಕಾಯರ್‍ಮಾರ್ , ವಿ ಜಿ ಯಸ್ ಸಹಕಾರಿ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಲೋಕಯ್ಯ ಗೌಡ ಹಾಗೂ ಕಾವಳಪಡೂರು ಗ್ರಾಮ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀ ಶಿವಪ್ಪ ಗೌಡ ನಿನ್ನಿಕಲ್ಲುಇವರೆಲ್ಲಾ ಉಪಸ್ಥಿತರಿದ್ದು ಶುಭಹಾರೈಸಿದರು. ಮೇನೇಜಿಂಗ್ ಟ್ರಸ್ಟಿ ಶ್ರೀ ಯಂ. ರುಕ್ಮಯ್ಯ ಸ್ವಾಗತಿಸಿದರು. ಶ್ರೀಮತಿ ರಶ್ಮಿತಾ ಹರ್ಷವರ್ಧನ್ ವಂದಿಸಿದರು. ಶ್ರೀಮತಿ ಜಲಜಾಕ್ಷಿ ಬಾಲಕೃಷ್ಣ ಪೆನ್ನೆತ್ತಡಿ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *