ಕೈಕಂಬ :ಮಂಗಳೂರು ತಾಲೂಕು ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಮತ್ತು ಅಡ್ಡೂರು ಗ್ರಾಮಗಳಿಗೆ ಸಂಬಂಧಿಸಿದಂತೆ 2020-21 ನೇ ಸಾಲಿನ ನಮ್ಮ ಗ್ರಾಮ ನಮ್ಮ ಯೋಜನೆ (ಜನರ ಯೋಜನೆ ಜನರ ಅಭಿವೃದ್ದಿ) ವಿಶೇಷ ಗ್ರಾಮ ಸಭೆಯು ಈ ಕೆಳಗೆ ಕಾಣಿಸಿದ ದಿನಾಂಕದ ಸ್ಥಳಗಳಲ್ಲಿ ಜರಗಲಿದ್ದು ಸದ್ರಿ ಈ ಸಭೆಗೆ 5 ವರ್ಷಕ್ಕೆ ಒಳಗೊಂಡ ಎಲ್ಲಾ ರೀತಿಯ ಅಭಿವೃದ್ದಿ ಕಾರ್ಯಕ್ರಮ ,ಕಾಮಗಾರಿಗಳ ಪಟ್ಟಿಯನ್ನು ತರತಕ್ಕದ್ದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರನ್ನು ಸಬೆಗೆ ಆಹ್ವಾನಿಸಿ ಸಭೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.

ದಿನಾಂಕ ಮತ್ತು ಸ್ಥಳ ಈ ಕೆಳಗಿನಂತಿವೆ.

ಮೂಳೂರು 1 2 3 & 4 30-10-2019 ಗ್ರಾ.ಪಂ ಕಛೇರಿ ಸಭಾಭವನ . ಪೂ 10.30 ಅಡ್ಡೂರು 1 2 3 & 4 30-10-2019 ದ.ಕ ಜಿ ಪಂ ಹಿ ಪ್ರಾ ಶಾಲೆ ಅಡ್ಡೂರು . ಅ 12.30 ಕ್ಕೆ ಹಾಗೂ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ವಿಶೇಷ ಗ್ರಾಮ ಸಭೆಯು ಇದರೊಂದಿಗೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *