ವಿಟ್ಲ: ಎಳೆಯರ ಬಳಗ ವಿದ್ಯಾವರ್ಧಕ ಸಂಘ ಮತ್ತು ಆಯುರ್ವೇದ ಅಧ್ಯಯನ ಸಂಶೋಧನಾ ಕೇಂದ್ರ ವಿಟ್ಲ ಇದರ 42 ನೇ ವರ್ಷದ ಧನ್ವಂತರಿ ಜಯಂತಿ ಮಹೋತ್ಸವವು 27-10-2019 ರಂದು ವಿಟ್ಲ ಶ್ರೀರಾಮ ನಗರದ ಮಂಗಳಾ ಮಂಟಪದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲ ಮುನಿಯಾಲ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ| ಸತ್ಯನಾರಾಯಣ ವಿಶೇಷ ಉಪನ್ಯಶ ನೀಡಿದರು.SHV_6158

ಮುಖ್ಯ ಅತಿಥಿಗಳಾಗಿ ಪತ್ರಕರ್ತ ಮತ್ತು ಖ್ಯಾತ ಅಂಕಣಕಾರ ನಾ ಕಾರಂತ ಪೆರಾಜೆ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ ಇವರು ಭಾಗವಹಿಸಿದ್ದರು. ನಿವೃತ್ತ ಅಧ್ಯಾಪಕ ಶ್ರೀನಿವಾಸ ಮರಡಿತ್ತಾಯ ವನಭೋಜನ ವಿಟ್ಲ ಇವರು ಅಧ್ಯಕ್ಷತೆ ವಹಿಸಿದ್ದರು.SHV_6166

ಡಾ| ಪದ್ಮರಾಜ್ ಪ್ರಸ್ತಾವಿಸಿದರು. ಸುಮತಿ ಶಂಕರ ಭಟ್ ಪ್ರಾರ್ಥಿಸಿದರು. ಬದನಾಜೆ ಶಂಕರ ಭಟ್ ಸ್ವಾಗತಿಸಿದರು. ಡಾ| ಮಹೇಶ್ ಬಿ ಸಿ ರೋಡ್ ವಂದಿಸಿದರು. ಶಂಕರನಾರಾಯಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಜಯಕೃಷ್ಣ ಸಹಕರಿಸಿದರು. ವೇದಮೂರ್ತಿ ಕುರಿಯತ್ತಡ್ಕ ನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಧನ್ವಂತರಿ ಪೂಜಾ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *