ಉದ್ಯೋಗ ಖಾತರಿ ಯೋಜನೆಯನ್ನು ರೈತರ ಜಮೀನಿನಲ್ಲಿ ಅಳವಡಿಸಿ ಜಮೀನಿನ ಅಭಿವೃದ್ಧಿ ಪಡಿಸಲು ವಿಫುಲ ಅವಕಾಶಗಳಿವೆ, ಅದಕ್ಕಾಗಿ ಜನಜಾಗೃತಿ ಹಾಗೂ ರೈತರ ಸಹಕಾರ ಅಗತ್ಯ. ಅವಕಾಶ ಇರುವಾಗ ರೈತರು ಮುಂದೆ ಬಂದು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಅರಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ.ಉತ್ತಮ ಚನ್ನಪ್ಪ ಬನಸೋಡೆ ಹೇಳೀದರು. ಅವರು ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಬಂಟ್ವಾಳ, ಅರಳ ಗ್ರಾಮ ಪಂಚಾಯತ್, ದಿಶಾ ಟ್ರಸ್ಟ್ (ರಿ)ಕೈಕಂಬ ಇವರ ಜಂಟಿ ಆಶ್ರಯದಲ್ಲಿ ಅರಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ ಜಾಗೃತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡುತ್ತಿದ್ದರು.

arala2
ಕಾರ್ಯಕ್ರಮವನ್ನು ಅರಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ .ತುಂಗಮ್ಮ ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಉಪಾಧ್ಯಾಕ್ಷರಾದ ಶ್ರೀ.ಜಗದೀಶ್ ಆಳ್ವ ಮಾತನಾಡಿದರು .

arala3ನೇತ್ರಾವತಿ ಒಕ್ಕೂಟದ ಉಪಾಧ್ಯಾಕ್ಷರಾದ ಶ್ರೀಮತಿ.ರೂಪ.ಎಲ್.ಶೆಟ್ಟಿ ಅರಳ ರೈತಸಂಜೀವಿನಿ ಕೃಷಿಕರ ಸಂಘದ ಉಪಾಧ್ಯಕ್ಷರಾದ ಶ್ರೀ.ವಲೇರಿಯನ್ ಪಿಂಟೋ ಕಾರ್ಯದರ್ಶಿ ಶ್ರೀಮತಿ.ರಂಜಿನಿ, ಅರಳ ನವಶಕ್ತಿ ಕೃಷಿಕರ ಅಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಶ್ರೀ.ಶಶಿಧರ ರೈ ವರಸರಿ, ದಿಶಾಸಂಸ್ಥೆಯ ಸಂಯೋಜಕರಾದ ಹೆನ್ರಿ ವಾಲ್ಡರ್, ಕ್ಷೇತ್ರ ಮೇಲ್ವಿಚಾಕರಾದ ಶ್ರೀಮತಿ.ವಿನೋದ ಹಾಗೂ ಶ್ರೀಮತಿ.ಪ್ರಭಾವತಿ ಉಪಸ್ಥಿತರಿದ್ದರು. 55 ಜನ ರೈತರು ಉಪಸ್ಥಿತರಿದ್ದು ಕಾರ್ಯಕ್ರವದ ಪ್ರಯೋಜ£ ಪಡೆದುಕೊಂಡರು.

arala1

By suddi9

Leave a Reply

Your email address will not be published. Required fields are marked *