ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಻ಂಧಾಭಿಮಾನಿಗಳ ಪೈಕಿ 25 ಮಂದಿ ಆತ್ಮಹತ್ಯೆಗೆಶರಣಾಗಿದ್ದು, ಇಡೀ ದೇಶದಲ್ಲೇ ಆತಂಕ ಸೃಷ್ಟಿಯಾಗಿದೆ. ಅಲ್ಲದೆ ಸಮೂಹಸನ್ನಿಗೊಳಪಟ್ಟು ಇನ್ನಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುವರೇ ಎಂಬ ಆತಂಕ ಸೃಷ್ಟಿಯಾಗಿದೆ.
ಜಯಲಲಿತಾಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 100 ಕೋಟಿ ದಂಡ ವಿಧಿಸಿರುವುದನ್ನು ವಿರೋಧಿಸಿ ಅದರಲ್ಲಿ 15 ಮಂದಿ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದರೆ. ಉಳಿದಂತೆ 10 ಮಂದಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
amma

ನಿನ್ನೆ ಕಾಂಚಿಪುರಂ ಜಿಲ್ಲೆಯ ಕುರುವಿಮಲೈನಲ್ಲಿ ಜಯಾ ಬೆಂಬಲಿಗ ಬಾಬು ಎಂಬಾತ ಅಮ್ಮನಿಗೆ ಜಯವಾಗಲಿ ಎಂದು ಗೋಡೆ ಮೇಲೆ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮತ್ತೊಂದೆಡೆ ಕಡಲೂರು ಜಿಲ್ಲೆಯ ಕಾವೇರಿಕೊಪ್ಪ ಗ್ರಾಮದಲ್ಲಿ ಬಾಲಕೃಷ್ಣನ್ ಎಂಬಾತ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಳಿದಂತೆ ಸುಬ್ರಹ್ಮಣ್ಯನ್, ವೆಂಕಟೇಶ್, ಜೋತ್ತ್ನಾ ಎಂಬುವರು ಮೃತ ದುರ್ದೈವಿಗಳು.
ಮುಖ್ಯಮಂತ್ರಿಯಾಗಿದ್ದಾಗ ಜಯಲಲಿತಾ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುವ ಭರವಸೆ ನೀಡಿದ್ದರು. ಇದೇ ಆಸೆಯನ್ನಿಟ್ಟುಕೊಂಡಿದ್ದ ವಿದ್ಯಾರ್ಥಿನಿ ನಾಗಲಕ್ಷ್ಮಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಬ್ಬ ಹುಚ್ಚು ಅಭಿಮಾನಿ ರೆಟ್ಟೈ ಇಲೈ ಭೂಪತಿ ಎಂಬಾತ ಜಯಲಲಿತಾ ಜೈಲು ಸೇರಿರುವುದಕ್ಕೆ ತೀವ್ರ ಮನನೊಂದು ತನ್ನ ಕೈ ಬೆರಳುಗಳನ್ನೇ ಕತ್ತರಿಸಿಕೊಂಡಿದ್ದಾನೆ.

By suddi9

Leave a Reply

Your email address will not be published. Required fields are marked *