ಪೊಳಲಿ : ಶ್ರೀ ಕ್ಷೇತ್ರ ಪೊಳಲಿಗೆ ಹತ್ತಿರದಲ್ಲಿರುವ ರಾಮಕೃಷ್ಣ ತಪೋವನದಲ್ಲಿ ಕಂಪ್ಯೂಟರ್, ಹೊಲಿಗೆ, ಎಂಬ್ರಾಯ್ಡರಿ ಮತ್ತು ಬ್ಯೂಟಿಷಿಯನ್ ತರಬೇತಿ ತರಗತಿ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಳ್ಳಬಹುದು.ಆರು ತಿಂಗಳಿಂದ ಎಂಟು ತಿಂಗಳವರೆಗೆ ಬೇಸಿಕ್, ಡಿಪ್ಲೋಮಾ, ಮಾಸ್ಟರ್ ಡಿಪ್ಲೋಮಾ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದ್ದು, ಅಭ್ಯರ್ಥಿಗಳು ನಿರ್ದಿಷ್ಟ ಬ್ಯಾಚಿನಲ್ಲಿ ಕೈಗೆಟಕುವ ಶುಲ್ಕ ಪಾವತಿಸಿ ತರಬೇತಿ ಪಡೆಯಲು ಅವಕಾಶವಿದೆ. ವಿಶೇಷತಃ ಕಂಪ್ಯೂಟರಿನಲ್ಲಿ ಟ್ಯಾಲಿ, ಬರೆಹ, ನುಡಿ ಟೈಪಿಂಗ್ ತರಬೇತಿ ನೀಡಲಾಗುವುದು. ಕಂಪ್ಯೂಟರಿನಲ್ಲಿ ಒಂದು ತಿಂಗಳು, ನಾಲ್ಕು, ಆರು ಮತ್ತು ಎಂಟು ತಿಂಗಳ ತರಬೇತಿ ನಿಗದಿಪಡಿಸಲಾಗಿದೆ. ಒಂದು ತಿಂಗಳಾವಧಿಯ ಹೊಲಿಗೆ ತರಬೇತಿ ಸಂಪೂರ್ಣ ಉಚಿತವಾಗಿದೆ.

ಜೊತೆಗೆ ಎರಡು ತಿಂಗಳ ಬ್ಯೂಟಿಷಿಯನ್ ಹಾಗೂ ಎಂಬ್ರಾಯ್ಡರಿ ತರಬೇತಿ ನೀಡಲಾಗುವುದು. ಪೊಳಲಿ, ಮಳಲಿ, ಕೈಕಂಬ, ಗಂಜಿಮಠ, ಗುರುಪುರ ಹಾಗೂ ಸುತ್ತಲ ಪ್ರದೇಶಗಳ ಅಭ್ಯರ್ಥಿಗಳು ತರಬೇತಿ ಪ್ರಯೋಜನ ಪಡೆಯಬಹುದು. ಆಸಕ್ತರು 8722441939/0824-2266655/2266455 ಅಥವಾ 9845165108/9744974206ಕ್ಕೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದೆಂದು ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *