ಬಂಟ್ವಾಳ : ಭಾರತೀಯ ಜನತಾ ಪಾರ್ಟಿ ಬೂತ್ -35ರ ಸಮಿತಿ ಪುನರ್ರಚನೆಯು ಬಿಜೆಪಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷರಾದ ದೇವಪ್ಪ ಪೂಜಾರಿಯವರ ನೇತೃತ್ವದಲ್ಲಿ ಯಕ್ಷಗಾನ ಕಲಾ ಸಂಘ ಬಾಳಿಕೆ ಇದರ ಸಭಾಂಗಣದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ದಯಾನಂದ ಅಂಬೋಡಿಮಾರು ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಥ್ ರಾವ್ ಬಾಳಿಕೆ ಆಯ್ಕೆಯಾದರು. ಈ ಸಂಧರ್ಭದಲ್ಲಿ ಪಕ್ಷದ ಹಿರಿಯರಾದ ಚಂದ್ರಶೇಖರ್ ರಾವ್ ಬಾಳಿಕೆ, ಮೋಹನ್ ದಾಸ್ ಕೊಟ್ಟಾರಿ, ಜಯಂತ ತಂಬದ ಗುಡ್ಡೆ, ಶ್ರೀನಿವಾಸ್ ಅಂಬೋಡಿಮಾರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


