ಶ್ರೀರಾಮ ವಿದ್ಯಾಕೇಂದ್ರಕ್ಕೆ ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರ ಸಚಿವರಾದ ಪ್ರಹ್ಲಾದ್ ಜೋಶಿಯವರು ಭೇಟಿ ನೀಡಿದರು. ಪ್ರಾರಂಭದಲ್ಲಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ವೀಕ್ಷಣೆ ಮಾಡಿದರು. ನಂತರಮಾತನಾಡಿದ ಇವರು”ಭಾರತೀಯ ಸಂಸ್ಕøತಿಯನ್ನು ಶಿಕ್ಷಣದೊಂದಿಗೆ ಕಲಿಸುವಂತಹ ಏಕೈಕ ಶಾಲೆ ಶ್ರೀರಾಮ ವಿದ್ಯಾಕೇಂದ್ರ, ಇಂತಹ ಶಾಲೆಯಲ್ಲಿ ಕಲಿಯುವಂತಹ ಮಕ್ಕಳು ಪುಣ್ಯವಂತರು, ಇಲ್ಲಿ ಕಲಿಸುವಂತಹ ಭಗವದ್ಗೀತೆಯನ್ನು ಜೀವನದೊಂದಿಗೆ ಒಂದಾಗಿಸುವಂತೆ ಮಾಡಿ ಇಲ್ಲಿನ ವಿದ್ಯಾರ್ಥಿಗಳು ವಿಶ್ವದಾದ್ಯಂತ ಪ್ರಖ್ಯಾತರಾಗುವುದರಲ್ಲಿ ಸಂಶಯವಿಲ್ಲ.
ಇಂತಹ ಕೊಡುಗೆ ನೀಡುತ್ತಿರುವ ಶ್ರೀರಾಮ ವಿದ್ಯಾಕೇಂದ್ರದಂತಹ ವಿದ್ಯಾಸಂಸ್ಥೆ ಜಗತ್ತಿನಲ್ಲಿ ಎಲ್ಲೂ ಇಲ್ಲ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿಯ ವಿಭಾಗ ಸಹಪ್ರಭಾರಿಯಾದ ಗೋಪಾಲ್, ಕರ್ನಾಟಕ ರಾಜ್ಯದ ಸಹವಕ್ತರರಾದ ಸುಲೋಚನ ಭಟ್, ಪುತ್ತೂರು ವಿವೇಕಾನಂದ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್,ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ,ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕಾರದ ರಮೇಶ್ ಎನ್, ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


