ಉಡುಪಿ : ಹಳೆ ಜಿ.ಪಂ ಕಚೇರಿ ಸಂಕೀಣ೯ದಲ್ಲಿ ಕಾಯ೯ ನಿವ೯ಹಿಸುತ್ತಿರುವ ನೆಮ್ಮದಿ ಕೇಂದ್ರದಲ್ಲಿ ಮತ್ತೊoದು ವಿಭಾಗವನ್ನು ತೆರೆಯಬೇಕೆಂದು ಜೇಸಿಐ ಉಡುಪಿ ಸಿಟಿ ವತಿಯಿಂದ ಬಂದರು ಮತ್ತು ಮೀನುಗಾರಿಕೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸೆ.25 ಬುಧವಾರ ಮನವಿ ಸಲ್ಲಿಸಲಾಯಿತು.
IMG_20190925_122127
ನೆಮ್ಮದಿ ಕೇಂದ್ರದಲ್ಲಿ ವಿವಿಧ ಸಕಾ೯ರಿ ಕೆಲಸಗಳಿಗಾಗಿ ಸಾವಿರಾರು ಜನರು ಭೇಟಿ ನೀಡುತ್ತಿದ್ದು ಕೇವಲ ಒಂದು ಕಂಪ್ಯೂಟರ್ ಮೂಲಕ ಕೆಲಸ ಕಾಯ೯ ನಡೆಯುತ್ತಿದ್ದು ಇದರಿಂದ ಹಿರಿಯ ನಾಗರಿಕರು, ದೂರದ ಗ್ರಾಮಸ್ಥರಿಗೆ ಇಡೀ ದಿನ ಕಾಯುವ ಪ್ರಮೇಯ ಎದುರಾಗಿದೆ.ಹೀಗಾಗಿ ಈ ಸಮಸ್ಯೆಗೆ ಪರಿಹಾರ ಅದೇ ರೀತಿ ಮೂಲಭೂತ ಸೌಕಯ೯ಕ್ಕೆ ಆದ್ಯತೆ ನೀಡಬೇಕೆoದು ಮನವಿಯಲ್ಲಿ ತಿಳಿಸಲಾಗಿದೆ. ನಿಯೋಗದಲ್ಲಿ ಅಧ್ಯಕ್ಷ ಜಗದೀಶ ಶೆಟ್ಟಿ, ರಾಘವೇಂದ್ರ ಪ್ರಭು, ಕವಾ೯ಲು , ಉದಯ್ ನಾಯ್ಕ, ರಫೀಕ್ ಮುಂತಾದವರಿದ್ದರು.
Attachments area

 

By suddi9

Leave a Reply

Your email address will not be published. Required fields are marked *