ಬಂಟ್ವಾಳ : ರೈತರು ಒಂದೇ ಬೆಳೆಯನ್ನು ನಂಬರದೆ ಮಿಶ್ರ ಬೆಳೆಯನ್ನು ಬೆಳೆಯಬೇಕು. ಒಂದು ಬೆಳೆ ಕೈ ಕೊಟ್ಟರೆ ಇನ್ನೊಂದು ಬೆಳೆಯು ರೈತರ ಕೈ ಹಿಡಿಯುವುದು, ಖಂಡಿತ ಕೃಷಿಯಲ್ಲಿನ ಖರ್ಚನ್ನು ಕಡಿಮೆ ಮಾಡಲು ರೈತರು ಸಹಜ ಕೃಷಿ ಪದ್ಧತಿಯನ್ನು ಅಳವಡಿಸಬೇಕು ಎಂದು ಕೃಷಿಕರಾದ ಶ್ರೀ ಚಂದಪ್ಪ ಮೂಲ್ಯ ಕೊೈಲ ಹೇಳಿದರು. ಅವರು ಸಂಗಬೆಟ್ಟು ಮದಂಗೋಡಿ ಶ್ರೀ ನೀಲಯ ನಾಯ್ಕರವರ ಮನೆಯ ವಠಾರದಲ್ಲಿ ನಡೆದ ಶೂನ್ಯ ಬಂಡವಾಳ ಕೃಷಿ ಹಾಗೂ ಕೊಳವೆ ಬಾವಿಗೆ ಜಲ ಮರುಪೂರಣ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಬಂಟ್ವಾಳ, ಕಾಮಧೇನು ಕೃಷಿಕರ ಅಭಿವೃದ್ಧಿ ಸಂಘ ಸಂಗಬೆಟ್ಟು, ದಿಶಾ ಟ್ರಸ್ಟ್ (ರಿ) ಕೈಕಂಬ ಇವರ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಾಮಧೇನು ಕೃಷಿಕರ ಸಂಘದ ಅಧ್ಯಕ್ಷರಾದ ಶ್ರೀ ಜನಾರ್ಧನ ನಾಯ್ಕ್ ಅಗರ್‍ಲಚ್ಚಿಲ್ ವಹಿಸಿದ್ದರು. ದಿಶಾ ಸಂಸ್ಥೆಯ ಕ್ಷೇತ್ರ ಸಂಯೋಜಕ ರುದೇಶ್ ಮುಖ್ಯ ಅತಿಥಿಯಾಗಿ ಮಾತನಾಡಿದ್ದರು. ದಿಶಾ ಸಂಸ್ಥೆಯ ಕ್ಷೇತ್ರ ಮೇಲ್ವಿಚರಕಾರದ ಶ್ರೀಮತಿ ರಂಜಿನಿ, ಕಾಮಧೇನು ಕೃಷಿಕರ ಸಂಘದ ಉಪಾಧ್ಯಕ್ಷರಾದ ಶ್ರೀ ರಾಮಣ್ಣ ಪೂಜಾರಿ, ಕಾರ್ಯದರ್ಶಿ ಶ್ರೀಮತಿ ಹರಿಣಿ, ಕೋಶಾಧಿಕಾರಿ ಶ್ರೀ ಸಂತೋಷ್ ಮೋರಾಸ್, ಜತೆ ಕಾರ್ಯದರ್ಶಿ ಶ್ರೀ ಫ್ರಾನ್ಸಿಸ್ ಡಿ ಸೋಜ,ಕರ್ಪೆ ಕುಂಭಕಂಠಿಣಿ ಕೃಷಿಕರ ಸಂಘದ ಉಪಾಧ್ಯಕ್ಷರಾದ ಶ್ರೀ ರಾಮಕೃಷ್ಣ ನಾಯಕ್ ಕಿನ್ನಾಜೆ ಉಪಸ್ಥಿತರಿದ್ದರು.

