ಬಂಟ್ವಾಳ : ಸೊರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘವು ಸೋಮವಾರ ತನ್ನ ಹಾಲನ್ನು ಪಡೆಯಲು ನಿರಾಕರಿಸಿದೆ ಎಂದು ಪಂಜಿಕಲ್ಲು ನಿವಾಸಿ, ಹೈನುಗಾರ ಡೊನಾಲ್ಡ್ ಪಿಂಟೋ ಆರೋಪಿಸಿದ್ದಾರೆ.ಅವರು ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾನು ಕಳೆದ ೨ ವರ್ಷಗಳಿಂದ ಸೊರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಪೂರೈಸುತ್ತಾ ಬಂದಿದ್ದೇನೆ. ಆದರೆ, ತನಗೆ ೨ ವರ್ಷಗಳಿಂದ ವಾರ್ಷಿಕ ಲಾಭಾಂಶ ಹಾಗೂ ಸದಸ್ಯತ್ವ ನೀಡದೇ ಸತಾಯಿಸುತ್ತಿದ್ದಾರೆ ಎಂದು ದೂರಿದರು. 

ಈ ವಿಚಾರವಾಗಿ ಸೆ. ೨೨ರಂದು ಸಂಘದ ಕಚೇರಿ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಸಲಾಗಿತ್ತು. ಈ ಕಾರಣಕ್ಕಾಗಿ ಸೊರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘವು ತನ್ನ ಹಾಲನ್ನು ನಿರಾಕರಿಸಿದ್ದು, ಸುಮಾರು 80 ಲೀ.ಹಾಲು ಉಳಿದಿದ್ದು, ಪರಿಣಾಮವಾಗಿ ಅತ್ಯಧಿಕ ನಷ್ಟ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾಸ್ಕರ, ಪುರುಷೋತ್ತಮ, ಲಿಲ್ಲಿ ಮೇರಿ ರೋಡ್ರಿಗಸ್ ಉಪಸ್ಥಿತರಿದ್ದರು.
