ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸುಜೀರು ಇಲ್ಲಿ ವಯೋನಿವೃತ್ತಿ ಹೊಂದಿದ ಮೂವರು ಶಿಕ್ಷಕರ ಬೀಳ್ಕೊಡುಗೆ ಕಾರ್ಯಕ್ರಮ ಸುಜೀರು ಶಾಲೆಯಲ್ಲಿ ನಡೆಯಿತು.ಸುಜೀರು ಶಾಲೆಯಲ್ಲಿ ಸುದೀರ್ಘ ಅವಧಿಯಲ್ಲಿ ಕಾರ್ಯನಿರ್ವಹಿಸಿದಶಾಲಾ ಮುಖ್ಯ ಶಿಕ್ಷಕ ಗುರುವ ಆರ್ , ಶಿಕ್ಷಕಿ ಸೀತಾಲಕ್ಮೀ, ಪ್ರೌಢ ಶಾಲಾ ಶಿಕ್ಷಕ ಮಹಮ್ಮದ್ ತುಂಬೆ ಅವರನ್ನು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಶಾಲು ಹೊದಿಸಿ ಸನ್ಮಾನಿಸಿದರು.
ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ಶಿಕ್ಷಕರಿಗೆ ಗೌರವ ನೀಡುವ ಮನಸ್ಸು ಸಮಾಜದ ಪ್ರತಿಯೊಬ್ಬ ವ್ಯಕ್ತಿಯಿಂದ ಅಗಬೇಕಾಗಿದೆ. ಭವ್ಯ ಭಾರತದ ಕನಸುಗಳನ್ನು ಸಾಕಾರಗೊಳಿಸಲು ಬೇಕಾದ ಸತ್ಪ್ರಜೆಗಳನ್ನು ತಯಾರು ಮಾಡುವ ಮಹತ್ತರವಾದ ಜವಬ್ದಾರಿ ಶಿಕ್ಷಕರ ಮೇಲಿದೆ. ಅಂತಹ ಮಹತ್ತರವಾದ ಕೊಡುಗೆಯನ್ನು ಶಿಕ್ಷಕರು ಪ್ರಮಾಣಿಕತೆಯಿಂದ ನೀಡುವಾಗ ನಾವೆಲ್ಲರೂ ಅವರಿಗೆ ಕೈ ಜೋಡಿಸುವ ಮೂಲಕ ಪ್ರೋತ್ಸಾಹ , ಸಹಕಾರ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು. ಶಾಲಾಭಿವೃದ್ದಿ ಸಮಿತಿ ಅದ್ಯಕ್ಷ , ಹುಸೈನ್ ಮಾರಿಪಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರೌಡ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅತಿಥಿ ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ ನಿವೃತ್ತಿ ಹೊಂದಿದ ಸರಕಾರಿ ಅಧಿಕಾರಿಗಳನ್ನು ಗುರುತಿಸಿ ಅವರಿಗೆ ಕೃತಜ್ಞತೆ ಸಲ್ಲಿಸುವ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡುತ್ತದೆ. ವಿದ್ಯಾರ್ಥಿಗಳು ಗುರುಹಿರಿಯರನ್ನು ಗೌರವಿಸುವ ಮನೋಭಾವನೆ ಬೆಳೆಸಲು ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗುತ್ತದೆ ಎಂದರು.
ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಗ್ರಾ.ಪಂ.ಸದಸ್ಯರಾದ ಇಕ್ಬಾಲ್ ಸುಜೀರು , ಭಾಸ್ಕರ್ ರೈ, ಹಾಸೀರ್ ಪೆರಿಮಾರ್, ರಶೀದಾಬಾನು, ಟುಡೇ ಪೆರಿಮಾರ್ ಸದಸ್ಯ ಮಜೀದ್ ಪೆರಿಮಾರ್, ಲತೀಪ್ ಮಲಾರ್, ಶಾಲಾಭಿವೃದ್ದಿ ಸಮಿತಿ ಸದಸ್ಯೆ ಮನೋರಮಾ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಲಾಂ ಸುಜೀರು, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶಶಿಮಂಗಳ ವೈ ಉಪಸ್ಥಿತರಿದ್ದರು. ಸುಜೀರು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಜಯವತಿ ಸ್ವಾಗತಿಸಿ ಶಿಕ್ಷಕಿ ಸಂತೋಷಿಕುಮಾರಿ ವಂದಿಸಿದರು. ಒಲಿಂಡಾ ಪ್ರಮೀಳಾಪಿರೇರಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸುಮನ, ರೇಖಾ, ಐರಿನ್ ಮಸ್ಕರೇನಸ್ ಸನ್ಮಾನ ಪತ್ರವಾಚಿಸಿದರು.

