ಮೂಡುಬಿದಿರೆ: ಜೆಸಿಐ ಮೂಡುಬಿದಿರೆ ತ್ರಿಭುವನ್ ಜೇಸಿ ಸಪ್ತಾಹದ ಅಂಗವಾಗಿ ಮೂಡುಬಿದಿರೆ ಜೈನಪ್ರೌಢಶಾಲೆಯಲ್ಲಿ ಲಂಬ ತೋಟಗಾರಿಕೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕ ನಿತೇಶ್ ಬಲ್ಲಾಳ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಲಂಬ ತೋಟಗಾರಿಕೆ ಬಗ್ಗೆ ಮಾಹಿತಿ ನೀಡಿದರು.

ಶಾಲೆಯ ಆವರಣಗೋಡೆಯ ಸುತ್ತಲೂ ತಂಪು ಬಳ್ಳಿಯ ಗಿಡಗಳನ್ನು ವಿದ್ಯಾರ್ಥಿಗಳು ಹಾಗೂ ಜೆಸಿಐ ಸದಸ್ಯರು ನೆಟ್ಟರು. ಜೆಸಿಐ ಮೂಡುಬಿದಿರೆ ಅಧ್ಯಕ್ಷ ಸುದೀಪ್ ಬುನ್ನನ್, ನಿಕಟಪೂರ್ವ ಅಧ್ಯಕ್ಷೆ ಸಂಗೀತಾ ಪ್ರಭು, ಪೂರ್ವಾಧ್ಯಕ್ಷರಾದ ಅಜಿತ್ ಪ್ರಸಾದ್, ಅನಂತವೀರ್ ಜೈನ್, ಜೆಸಿರೇಟ್ ಅಧ್ಯಕ್ಷೆ ಶಾಲಿನಿ ಪ್ರಸಾದ್, ಜೇಸಿ ಸಪ್ತಾಹ ನಿರ್ದೇಶಕ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
