ಮೂಡುಬಿದಿರೆ:ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಮೂಡುಬಿದಿರೆ ಪುರಸಭೆ ಆಶ್ರಯದಲ್ಲಿ ಪೌರಕಾರ್ಮಿಕರಿಗೆ ಇದೇ ಮೊದಲ ಬಾರಿಗೆ ಮೂಡುಬಿದಿರೆಯಲ್ಲಿ ಆಯೋಜಿಸಲಾದ ಕ್ರೀಡಾಕೂಟ ಹಾಗೂ ವಿವಿಧ ಸ್ಪರ್ಧೆಗಳು ಸೋಮವಾರ ಸ್ವರಾಜ್ಯ ಮೈದಾನದಲ್ಲಿ ನಡೆಯಿತು.mbd_sep23_10 (3)

ಪುರುಷರಿಗೆ 100ಮೀ. ಓಟ. 400ಮೀ ಓಟ, ಬಲೂನ್ ಊದುವ ಸ್ಪರ್ಧೆ, ಗುಂಡು ಎಸೆತ. ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಹಗ್ಗಜಗ್ಗಾಟ, ಮಹಿಳೆಯರಿಗೆ ಮ್ಯೂಸಿಕಲ್ ಚೇರ್, ಬಲೂನ್ ಊದುವ ಸ್ಪರ್ಧೆ, ಲಿಂಬು ಚಮಚ ನಡಿಗೆ, ಸ್ಪಂಪ್‍ಗೆ ರಿಂಗ್ ಹಾಕುವ ಸ್ಪರ್ಧೆ, ಪಾಸಿಂಗ್ ದ ಬಾಲ್, ಬೀಸು ನಡಿಗೆ, ಗುಂಡು ಎಸೆತ, ತ್ರೋಬಾಲ್, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಿತು.mbd_sep23_10 (1)

mbd_sep23_10 (2)
ಪುರಸಭೆಯ ಮುಖ್ಯಾಧಿಕಾರಿ ಇಂದು.ಎಂ, ಪರಿಸರ ಅಭಿಯಂತೆ ಶಿಲ್ಪಾ, ಸಿಬ್ಬಂದಿಗಳಾದ ಸುಧೀಶ್ ಹೆಗ್ಡೆ, ಮಂಜುನಾಥ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಉದಯ್ ಉಪಸ್ಥಿತರಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಸಹಕರಿಸಿದರು. 46 ಪೌರ ಕಾರ್ಮಿಕರು ಹಾಗೂ 9 ಮಂದಿ ವಾಹನ ಚಾಲಕರು ಹಾಗೂ ಅವರ ಕುಟುಂಬದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡರು.

By Suddi9

Leave a Reply

Your email address will not be published. Required fields are marked *