ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳ,ಆಡಳಿತ ಮಂಡಳಿಯ ಸಹಕಾರದಿಂದ ಸುಮಾರು 4.00 ಕೋಟಿ ರೂ. ವಾರ್ಷಿಕ ಆದಾಯವನ್ನು ಹೊಂದಿದೆ ಎಂದು ಸಮಿತಿಯ ಅಧ್ಯಕ್ಷ ಪದ್ಮನಾಭ ರೈ ತಿಳಿಸಿದ್ದಾರೆ. ಈ ಸಾಲಿನಲ್ಲಿ ಕೃಷಿಕರಿಗಾಗಿ ಹಲವು ಜನಪರ ಕಾರ್ಯಗಳು ಹಾಗೂ ಅಭಿವೃಧ್ದಿ ಕೆಲಸಗಳನ್ನು ಕೈಗೊಂಡಿದ್ದು, ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಸುಮಾರು  1.20 ಕೋಟಿ ವೆಚ್ಚದಲ್ಲಿ ಒಟ್ಟು ೪೪ ಗ್ರಾಮೀಣ ಸಂಪರ್ಕ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಇದರಿಂದಾಗಿ ಗ್ರಾಮೀಣ ಪ್ರದೇಶದ ಕೃಷಿಕರ ಬಹುದಿನಗಳ ಬೇಡಿಕೆ ಈಡೇರಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Mani

ಹರಾಜುಕಟ್ಟೆ ಕಟ್ಟಡದ ಉದ್ಘಾಟನೆ  ನಬಾರ್ಡ್ ಅನುದಾನದಿಂದ ಮಾಣಿಯಲ್ಲಿ ಸುಮಾರು 49.19 ಲಕ್ಷ ವೆಚ್ಚದಲ್ಲಿ ಮತ್ತು  ‘17.22 ಲಕ್ಷ ವೆಚ್ಚದಲ್ಲಿ ಮಣಿನಾಲ್ಕೂರಿನಲ್ಲಿ ರೈತರು ತಮ್ಮ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟದ ವ್ಯವಸ್ಥೆಗಾಗಿ ನಿರ್ಮಾಣಗೊಂಡಿರುವ “ಮುಚ್ಚು ಹರಾಜುಕಟ್ಟೆ”ಯ ಉದ್ಘಾಟನಾ ಸಮಾರಂಭ  ಸೆ. ೧೮ ರಂದು  ನಡೆಯಲಿದೆ. ಬಳಿಕ ಈ ಕಟ್ಟಡವನ್ನು ಸ್ಥಳೀಯ ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   ತಾಲೂಕಿನಲ್ಲಿ ಕೃಷಿಕರ ಬೇಡಿಕೆಯ ಹಿನ್ನಲೆಯಲ್ಲಿ ಸ್ವಂತ ಮಾರುಕಟ್ಟೆ ಪ್ರಾಂಗಣ ಹೊಂದಬೇಕು ಎಂಬ ನಿಟ್ಟಿನಲ್ಲಿ  ರಾ.ಹೆ.ಯ ಮೆಲ್ಕಾರ್ ನಲ್ಲಿ   ಸುಮಾರು 0.7 ಎಕ್ರೆ ಜಾಗವನ್ನು ಕಾಯ್ದಿರಿಸಿಲಾಗಿದೆ.

Maninalkur

ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ಆನ್‌ಲೈನ್ ಟ್ರೇಡಿಂಗ್, ಅಡಮಾನ ಸಾಲ, ರೈತ ಭವನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಂಡು ತಾಲೂಕು ವ್ಯಾಪ್ತಿಯ ವರ್ತಕರು, ಸಹಕಾರಿ ಸಂಘಗಳು, ರೈತರು ಒಂದೇ ವೇದಿಕೆಯಲ್ಲಿ ಖರೀದಿ ಮಾರಾಟ ವ್ಯವಸ್ಥೆ ಮಾಡಿ ಕೃಷಿಕರಿಗೆ ಹೆಚ್ಚು ಬೆಲೆ ಸಿಗುವಂತಾಗಿ ದಕ್ಷಿಣ ಕನ್ನಡದಲ್ಲಿ ಮಾದರಿ ಮಾರುಕಟ್ಟೆ ಪ್ರಾಂಗಣ ರಚಿಸಲು  ರೂಪುರೇಷೆ ಹಾಕಿಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *